ಐರೋಪ್ಯ ಔಷಧ ನಿಯಂತ್ರಕ ಸಂಸ್ಥೆಯ ಒಪ್ಪಿಗೆಗೆ ಕಾದಿರುವ ಕೊರೋನಾ ಗುಳಿಗೆ ಈ ತಿಂಗಳ ಆರಂಭದಲ್ಲಿ ಇದೇ ಗುಳಿಗೆಯ ಸಾರ್ವಜನಿಕ ಬಳಕೆಗೆ ಬ್ರಿಟನ್ ಒಪ್ಪಿಗೆ ನೀಡಿತ್ತು. ಆ ಮೂಲಕ ಮೊದಲ ಕೊರೊನಾ ಗುಳಿಗೆಗೆ ಅನುಮತಿ ನೀಡಿದ ಮೊದಲ ರಾಷ್ಟ್ರ ಎನ್ನುವ ಕೀರ್ತಿಗೆ ಬ್ರಿಟನ್ ಪಾತ್ರವಾಗಿತ್ತು. ಆಮ್ ಸ್ಟರ್ ಡ್ಯಾಮ್: ಇದೇ ಮೊದಲ ಬಾರಿಗೆ ಔಷಧ ಸಂಸ್ಥೆಯೊಂದು ಕೊರೊನಾ ಚಿಕಿತ್ಸೆಯಲ್ಲಿ ಸಹಾಯವಾಗುವ ತನ್ನ ಗುಳಿಗೆಯ ಸಾರ್ವಜನಿಕ ಬಳಕೆಗೆ ಅನುಮತಿ ನೀದುವಂತೆ ಕೋರಿರುವ ವಿಷಯವನ್ನು ಐರೋಪ್ಯ ಔಷಧ ಸಂಸ್ಥೆ ಬಹಿರಂಗಪಡಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ಕೊರೋನಾ ಏರಿಳಿತ: ಬೆಂಗಳೂರಿನಲ್ಲಿ 163 ಸೇರಿ 255 ಮಂದಿಗೆ ಪಾಸಿಟಿವ್; 7 ಸಾವು!ಮರ್ಕ್ () ಎನ್ನುವ ಔಷಧ ಸಂಸ್ಥೆ ಮೊಲ್ನುಪಿರಾವಿರ್ () ಎನ್ನುವ ಕೊರೊನಾ ಗುಳಿಗೆಯನ್ನು ಅಭಿವೃದ್ಧಿಪಡಿಸಿದೆ. ಇದೀಗ ಐರೋಪ್ಯ ಔಷಧ ನಿಯಂತ್ರಕ ಸಂಸ್ಥೆಯ ಅನುಮತಿಗಾಗಿ ಕಾದಿದೆ. ಕೊರೊನಾ ಪತ್ತೆಯಾದ 5 ದಿನಗಳ ಒಳಗೆ ಈ ಗುಳಿಗೆಯನ್ನು ರೋಗಿಗೆ ನೀಡಬೇಕು. ನಂತರದ 5 ದಿನಗಳ ಕಾಲ ದಿನಕ್ಕೆ ಎರಡು ಬಾರಿ ಈ ಗುಳಿಗೆಯನ್ನು ಸೇವಿಸಬೇಕು. ಇದನ್ನೂ ಓದಿ: ಹಾಸನ: ಅರಕಲಗೂಡಿನಲ್ಲಿ 17 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಈ ಮಾತ್ರೆಯಿಂದ ಕೊರೊನಾ ಲಕ್ಷಣಗಳನ್ನು ಕಡಿಮೆ ಮಾಡುವುದಲ್ಲದೆ, ರೋಗಿಗಳು ಬೇಗನೆ ಗುಣಮುಖರಾಗುತ್ತಾರೆ ಎಂದು ಔಷಧ ಸಂಸ್ಥೆ ತಿಳಿಸಿದೆ. ಒಂದು ವೇಳೆ ಔಷಧ ಸಂಸ್ಥೆಯ ಈ ಭರವಸೆ ಸಾಬೀತಾದರೆ ಬೇಡಿಕೆ ಹೆಚ್ಚುವುದರಲ್ಲಿ ಸಂಶಯವಿಲ್ಲ. ಈ ತಿಂಗಳ ಆರಂಭದಲ್ಲಿ ಇದೇ ಗುಳಿಗೆಯ ಸಾರ್ವಜನಿಕ ಬಳಕೆಗೆ ಬ್ರಿಟನ್ ಒಪ್ಪಿಗೆ ನೀಡಿತ್ತು. ಆ ಮೂಲಕ ಮೊದಲ ಕೊರೊನಾ ಗುಳಿಗೆಗೆ ಅನುಮತಿ ನೀಡಿದ ಮೊದಲ ರಾಷ್ಟ್ರ ಎನ್ನುವ ಕೀರ್ತಿಗೆ ಬ್ರಿಟನ್ ಪಾತ್ರವಾಗಿತ್ತು.ಇದನ್ನೂ ಓದಿ: ಕೋವಿಡ್ ಸಮಯದಲ್ಲಿಯೂ 'ಸಲಗ' ಯಶಸ್ವಿಯಾಗಿರುವುದು ಪವಾಡ!