ಪಾಕಿಸ್ತಾನ: ಮೃತ ಶ್ರೀಲಂಕಾ ಪ್ರಜೆಯ ಬಹುತೇಕ ಮೂಳೆಗಳು ಮುರಿತ: ಪ್ರಧಾನಿ ಇಮ್ರಾನ್ ಖಾನ್ ನ್ಯಾಯದ ಭರವಸೆ ಕಟ್ಟರ್ ಇಸ್ಲಾಮಿಸ್ಟ್ ಪಕ್ಷ 'ತೆಹ್ರೀಕ್ ಇ ಲಬ್ಬೈಕ್- ಪಾಕಿಸ್ತಾನ್' ಕಾರ್ಯಕರ್ತರು ಲಾಹೋರ್ ನಲ್ಲಿನ ಗಾರ್ಮೆಂಟ್ ಕಾರ್ಖಾನೆ ಮೇಲೆ ದಾಳಿ ನಡೆಸಿ ಅದರ ಮ್ಯಾನೇಜರ್ ಶ್ರೀಲಂಕಾ ಪ್ರಜೆ ದಿಯವದನ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಕರಾಚಿ: ಕಟ್ಟರ್ ಇಸ್ಲಾಮಿಸ್ಟ್ ಪಕ್ಷ 'ತೆಹ್ರೀಕ್ ಇ ಲಬ್ಬೈಕ್- ಪಾಕಿಸ್ತಾನ್' ಕಾರ್ಯಕರ್ತರು ಲಾಹೋರ್ ನಲ್ಲಿನ ಗಾರ್ಮೆಂಟ್ಸ್ ಕಾರ್ಖಾನೆ ಮೇಲೆ ದಾಳಿ ನಡೆಸಿ ಅದರ ಮ್ಯಾನೇಜರ್ ಶ್ರೀಲಂಕಾ ಪ್ರಜೆ ದಿಯವದನ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದಾಗಿ ಆತ ಮೃತಪಟ್ಟಿದ್ದರು.ಇದನ್ನೂ ಓದಿ: ಪಾಕಿಸ್ತಾನಕ್ಕೆ 22,572 ಕೋಟಿ ರೂ. ಸಾಲ ನೀಡಿದ ಸೌದಿ ಅರೇಬಿಯಾ: ಪಾಕ್ ಆರ್ಥಿಕ ಸುಸ್ಥಿರತೆಗೆ ಸಹಾಯದೇಹದ ಎಲ್ಲಾ ಭಾಗಗಳ ಮೂಳೆಗಳು ಮುರಿದಿರುವ ಮಾಹಿತಿ ಮರಣೋತ್ತರ ವರದಿಯಿಂದ ಬಹಿರಂಗವಾಗಿದೆ. ತಲೆಬುರುಡೆ ಮತ್ತು ದವಡೆ ಮೂಳೆಗಳು ಮುರಿತಕ್ಕೊಳಗಾಗಿದ್ದೇ ಸಾವಿಗೆ ಕಾರಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಮಾಹಿತಿ ಕದಿಯಲು ಭಾರತದ ಸರ್ಕಾರಿ ಕಂಪ್ಯೂಟರ್ ಗಳ ಮೇಲೆ ಪಾಕ್ ಹ್ಯಾಕರ್ ದಾಳಿ!ಹಲ್ಲೆ ನಡೆಸಿದ ಬಳಿಕ ದುಷ್ಕರ್ಮಿಗಳು ಶ್ರೀಲಂಕಾ ಪ್ರಜೆ ಮೈಮೇಲೆ ಬೆಂಕಿ ಹಚ್ಚಿದ್ದರು. ಅದರ ಪರಿಣಾಮ ದೇಹದ ಶೇ.99 ಭಾಗ ಸುಟ್ಟು ಹೋಗಿತ್ತು. ಇದನ್ನೂ ಓದಿ: ಸುಪ್ರೀಂ ಕೋರ್ಟ್ ವಿಚಾರಣೆ: ಕಲುಷಿತ ಗಾಳಿ ಪಾಕಿಸ್ತಾನದಿಂದ ಬರುತ್ತಿದೆ ಎಂದ ಉತ್ತರ ಪ್ರದೇಶ ವಕೀಲಮೃತರ ಸಂಬಂಧಿಕರು ಹತ್ಯೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಜರುಗಿಸಬೇಕಾಗಿ ಆಗಹಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.ಇದನ್ನೂ ಓದಿ: ಪಾಕ್ ಸಿಖ್ ವ್ಯಕ್ತಿಯಿಂದ ಸಿಖ್ ಧರ್ಮಕ್ಕೆ ಅಪಚಾರ, ಭಾರತೀಯ ಪತ್ರಕರ್ತ ದೂರು: ತನಿಖೆಗೆ ಇಮ್ರಾನ್ ಖಾನ್ ಸರ್ಕಾರ ಆದೇಶ