'ನನ್ನ ಮೇಲೆ ಯಾವುದೇ ಕೇಸ್ ಇಲ್ಲದಿದ್ದರೂ ಜೈಲಿಗೆ ಹಾಕಲು ಸಂಚು, ಹೋರಾಟಕ್ಕೆ ನಾನು ಸಿದ್ಧ': ಇಮ್ರಾನ್ ಖಾನ್ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ರೇಂಜರ್‌ಗಳು ಮಂಗಳವಾರ ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗೆ ಬಂಧಿಸಿದ್ದಾರೆ. ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ರೇಂಜರ್‌ಗಳು ಮಂಗಳವಾರ ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗೆ ಬಂಧಿಸಿದ್ದಾರೆ.ಅಲ್ ಖಾದಿರ್ ಟ್ರಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನ್ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ () ಇಮ್ರಾನ್ ಖಾನ್ ಅವರನ್ನು ಬಂಧಿಸುವ ಸಂದರ್ಭದಲ್ಲಿ ಪಾಕಿಸ್ತಾನಿ ರೇಂಜರ್‌ಗಳು ತಳ್ಳಿದರು ಇದರಿಂದ ಅವರು ಗಾಯಗೊಂಡರು ಎಂದು ಹಲವು ವಿಡಿಯೊ ಮತ್ತು ಫೋಟೋಗಳನ್ನು ಪಕ್ಷ ಬಿಡುಗಡೆ ಮಾಡಿದೆ. ಇಮ್ರಾನ್ ಖಾನ್ ಅವರ ನಾಟಕೀಯ ಬಂಧನದ ಹಲವಾರು ಫೋಟೋ-ವಿಡಿಯೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. & & : 1. . 2. … ../IQIQmFERahಈ ಮಧ್ಯೆ, ಪಾಕಿಸ್ತಾನದಾದ್ಯಂತ ತಕ್ಷಣ ಪ್ರತಿಭಟನೆಗಳನ್ನು ಪ್ರಾರಂಭಿಸಲು ಪಕ್ಷವು ಜನತೆಗೆ, ಕಾರ್ಯಕರ್ತರಿಗೆ ಕರೆ ನೀಡಿದೆ. ಬಂಧನಕ್ಕೂ ಮುನ್ನ ಇಮ್ರಾನ್ ಖಾನ್ ವೀಡಿಯೊ ಸಂದೇಶದಲ್ಲಿ, ನನ್ನ ಮೇಲೆ ಯಾವುದೇ ಪ್ರಕರಣವಿಲ್ಲ, ಆದರೂ ಅವರು ನನ್ನನ್ನು ಜೈಲಿಗೆ ಹಾಕಲು ಬಯಸುತ್ತಾರೆ, ನಾನು ಹೋರಾಟಕ್ಕೆ ಸಿದ್ದನಿದ್ದೇನೆ ಎಂದು ಹೇಳಿದ್ದಾರೆ. آئی ایس پی آر کو میرا جواب اور وہ دو بنیادی وجوہات جن کی بنیاد پر پی ڈی ایم اور اس کے سرپرست مجھے گرفتار کرنے کی کوششوں میں لگے ہوئے ہیں: ۱۔ مجھے انتخابی مہم چلانے سے روکنے کیلئے کیونکہ انشاءاللہ جب انتخابات کا اعلان ہوگا تو میں جلسے منعقد کروں گا۔ ۲- پی ڈی ایم حکومت اور اس کے… ../gJDLn0BdxGಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ನಾಯಕ ಫವಾದ್ ಚೌಧರಿ ಅವರು ಟ್ವಿಟ್ಟರ್‌ನಲ್ಲಿ, ಇಸ್ಲಾಮಾಬಾದ್ ಹೈಕೋರ್ಟ್ ನ್ನು ರೇಂಜರ್‌ಗಳು ಆಕ್ರಮಿಸಿಕೊಂಡಿದ್ದಾರೆ, ವಕೀಲರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ, ಇಮ್ರಾನ್ ಖಾನ್ ಕಾರನ್ನು ಸುತ್ತುವರೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇಮ್ರಾನ್ ಖಾನ್, ಅವರ ಪರ ವಕೀಲರು ಮತ್ತು ಬೆಂಬಲಿಗರ ಮೇಲೆ ಹಲ್ಲೆ, ದಾಳಿ ನಡೆದಿದೆ ಎಂದು ಪಿಟಿಐ ಆರೋಪಿಸಿದೆ. — : - ../3GhCFfgH1fಪಿಟಿಐ ನಾಯಕಿ ಮುಸರರ್ ಚೀಮಾ ವೀಡಿಯೊ ಸಂದೇಶದಲ್ಲಿ, ಇಮ್ರಾನ್ ಖಾನ್‌ಗೆ ರೇಂಜರ್ ಗಳು ಚಿತ್ರಹಿಂಸೆ ನೀಡುತ್ತಿದ್ದಾರೆ, ನಮ್ಮ ಖಾನ್ ಸಾಹಿಬ್‌ನನ್ನು ಹೊಡೆಯುತ್ತಿದ್ದಾರೆ, ಖಾನ್ ಸಾಹೇಬರಿಗೆ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ ಎಂದು ಟೀಕಿಸಿದ್ದಾರೆ. . . . ' ../Jwo0Z6g40t