ನ ವಾರ್ಸಾದಲ್ಲಿ ಡೋಬ್ರಿ ಮಹಾರಾಜ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ; ಗೌರವ ನಮನ, ವಾರ್ಸಾದ ಗುಡ್ ಮಹಾರಾಜರ ಚೌಕದಲ್ಲಿರುವ ಈ ಸ್ಮಾರಕವು, [ಆಧುನಿಕ ಗುಜರಾತ್‌ನ ಜಾಮ್‌ನಗರದ] ನವನಗರದ ದಿಗ್ವಿಜಯಸಿಂಹ ರಂಜಿತ್ ಸಿಂಹ ಜಡೇಜಾ ಅವರ ಬಗ್ಗೆ ಪೋಲೆಂಡ್‌ ಸರ್ಕಾರ ಮತ್ತು ಅಲ್ಲಿನ ಜನರು ಹೊಂದಿರುವ ಅಪಾರ ಗೌರವ ಮತ್ತು ಕೃತಜ್ಞತೆಯನ್ನು ಸಾರುವ ಸ್ಮರಣಾರ್ಥವಾಗಿದೆ. ವಾರ್ಸಾ: ಪೋಲೆಂಡ್ ರಾಜಧಾನಿ ವಾರ್ಸಾ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರ್ಸಾದಲ್ಲಿರುವ ಡೋಬ್ರಿ ಮಹಾರಾಜ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಿದರು.ವಾರ್ಸಾದ ಗುಡ್ ಮಹಾರಾಜರ ಚೌಕದಲ್ಲಿರುವ ಈ ಸ್ಮಾರಕವು, [ಆಧುನಿಕ ಗುಜರಾತ್‌ನ ಜಾಮ್‌ನಗರದ] ನವನಗರದ ದಿಗ್ವಿಜಯಸಿಂಹ ರಂಜಿತ್ ಸಿಂಹ ಜಡೇಜಾ ಅವರ ಬಗ್ಗೆ ಪೋಲೆಂಡ್‌ ಸರ್ಕಾರ ಮತ್ತು ಅಲ್ಲಿನ ಜನರು ಹೊಂದಿರುವ ಅಪಾರ ಗೌರವ ಮತ್ತು ಕೃತಜ್ಞತೆಯನ್ನು ಸಾರುವ ಸ್ಮರಣಾರ್ಥವಾಗಿದೆ.ವಿಶ್ವದ ಎರಡನೆಯ ಮಹಾಯುದ್ಧದ ಸಮಯದಲ್ಲಿ, ಜಾಮ್ ಸಾಹೇಬ್ ಅವರು ಸಾವಿರಾರು ಅನಾಥ ಮಕ್ಕಳಿಗೆ ಆಶ್ರಯ ನೀಡಿದ್ದರು. ಇಂದು ಪೋಲೆಂಡ್‌ನಲ್ಲಿ ಡೋಬ್ರಿ ಅಂದರೆ ಉತ್ತಮ ಮಹಾರಾಜ ಎಂದು ಅವರನ್ನು ಜನರು ನೆನಪಿಸಿಕೊಳ್ಳುತ್ತಾರೆ. ಅವರ ಉದಾರತೆಯ ಆಳವಾದ ಪ್ರಭಾವವು ಪೋಲೆಂಡ್ ಜನಮಾನಸದಲ್ಲಿ ಉಳಿದಿದೆ. ಸ್ಮಾರಕದ ಬಳಿ, ಪ್ರಧಾನಿ ಮೋದಿಯವರು ಜಾಮ್ ಸಾಹೇಬ್ ಅವರಿಂದ ಆಶ್ರಯ ಪಡೆದ ಪೋಲೆಂಡ್ ಜನರ ವಂಶಸ್ಥರನ್ನು ಭೇಟಿ ಮಾಡಿದರು.ಸ್ಮಾರಕಕ್ಕೆ ಪ್ರಧಾನಮಂತ್ರಿಯವರ ಭೇಟಿಯು ಭಾರತ ಮತ್ತು ಪೋಲೆಂಡ್ ನಡುವಿನ ವಿಶೇಷ ಐತಿಹಾಸಿಕ ಸಂಬಂಧವನ್ನು ಎತ್ತಿ ತೋರಿಸುತ್ತದೆ, ಇದು ಉಭಯ ದೇಶಗಳ ಜನರಿಂದ ಪಾಲಿಸಿ ಪೋಷಿಸಲ್ಪಟ್ಟಿದೆ.ಕೊಲ್ಹಾಪುರ ಸ್ಮಾರಕಕ್ಕೆ ನಮನ: ವಾರ್ಸಾದ ಕೊಲ್ಹಾಪುರ ಸ್ಮಾರಕಕ್ಕೆ ಪ್ರಧಾನಿ ಮೋದಿ ಬಳಿಕ ನಮನ ಸಲ್ಲಿಸಿದರು. ಈ ಸ್ಮಾರಕವು ಕೊಲ್ಲಾಪುರದ ಶ್ರೇಷ್ಠ ರಾಜಮನೆತನಕ್ಕೆ ಗೌರವವಾಗಿದೆ. ಎರಡನೆಯ ಮಹಾಯುದ್ಧದ ಭೀಕರತೆಯಿಂದಾಗಿ ಸ್ಥಳಾಂತರಗೊಂಡ ಪೋಲೆಂಡ್ ಮಹಿಳೆಯರು ಮತ್ತು ಮಕ್ಕಳಿಗೆ ಆಶ್ರಯ ನೀಡುವಲ್ಲಿ ಈ ರಾಜಮನೆತನವು ಮುಂಚೂಣಿಯಲ್ಲಿತ್ತು. ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳಿಂದ ಪ್ರೇರಿತರಾದ ಕೊಲ್ಹಾಪುರದ ಮಹಾನ್ ರಾಜಮನೆತನವು ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆಯನ್ನು ಇರಿಸಿ ಪೋಲೆಂಡ್ ಮಹಿಳೆಯರು ಮತ್ತು ಮಕ್ಕಳಿಗೆ ಘನತೆಯ ಜೀವನವನ್ನು ನೀಡಿದೆ ಎಂದು ಹೇಳಲಾಗುತ್ತಿದೆ. . ../tS1K3cJHqp