ಅಮೆರಿಕಾದಲ್ಲಿ ಎಲ್ ಜಿ ಬಿ ಟಿ ಸಮುದಾಯಕ್ಕೆ ಮೊದಲ 'ಎಕ್ಸ್‌' ಜೆಂಡರ್‌ ಪಾಸ್‌ ಪೋರ್ಟ್‌ ಜಾರಿ ಮೊದಲ 'ಎಕ್ಸ್' ಜೆಂಡರ್ ಪಾಸ್‌ಪೋರ್ಟ್ ಯಾರಿಗೆ ನೀಡಲಾಗಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಗೌಪ್ಯತೆ ಕಾಪಾಡುವ ಉದ್ದೇಶದಿಂದ ಪಾಸ್‌ಪೋರ್ಟ್ ಅರ್ಜಿದಾರರ ಮಾಹಿತಿ ಬಹಿರಂಗಪಡಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಷಿಂಗ್ಟನ್: ಅಮೆರಿಕದಲ್ಲಿ ಪುರುಷರು, ಮಹಿಳೆಯರಲ್ಲದ ಎಲ್‌ ಜಿ ಬಿ ಟಿ ( ಸಲಿಂಗಕಾಮಿ, ದ್ವಿಲಿಂಗಿ, ಲಿಂಗಪರಿವರ್ತಿತ) ಸಮುದಾಯದ ನಾಗರಿಕರ ಹಕ್ಕುಗಳ ಗುರುತಿಸುವ ಪ್ರಕ್ರಿಯೆಯಲ್ಲಿ ನಿರ್ಣಾಯಕ ಹೆಜ್ಜೆ ಇರಿಸಲಾಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ: ಕಲ್ಲು ತೂರಾಟಗಾರರಿಗೆ ಪಾಸ್ ಪೋರ್ಟ್, ಸರ್ಕಾರಿ ಸೇವೆಗೆ ಸೆಕ್ಯೂರಿಟಿ ಕ್ಲಿಯರೆನ್ಸ್ ನಿರಾಕರಣೆಅಮೆರಿಕಾ ಸರ್ಕಾರ 'ಎಕ್ಸ್‌' ಲಿಂಗ ಸ್ಥಿತಿ ಹೊಂದಿರುವ ಮೊದಲ ಪಾಸ್‌ ಪೋರ್ಟ್ ಅನ್ನು ಮಂಜೂರುಮಾಡಿದೆ. ಇದೊಂದು ಐತಿಹಾಸಿಕ ಬೆಳವಣಿಗೆ, ಸಂಭ್ರಮ ಆಚರಿಸಬೇಕಾದ ಸಂದರ್ಭ ಇದಾಗಿದೆ ಎಂದು ಎಲ್‌ ಜಿ ಬಿ ಟಿ ಹಕ್ಕುಗಳ ಕಾರ್ಯಕರ್ತೆ ಜೆಸ್ಸಿಕಾ ಸ್ಟರ್ಸ್ ಪ್ರತಿಕ್ರಿಯಿಸಿದ್ದಾರೆ. ಆದರೆ, ಮೊದಲ 'ಎಕ್ಸ್' ಜೆಂಡರ್ ಪಾಸ್‌ಪೋರ್ಟ್ ಯಾರಿಗೆ ನೀಡಲಾಗಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಗುಜರಾತ್: ನಕಲಿ ಪಾಸ್‌ಪೋರ್ಟ್‌, ವೀಸಾ ಬಳಸಿ ಜನರನ್ನು ವಿದೇಶಕ್ಕೆ ಕಳುಹಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಎಟಿಎಸ್ಗೌಪ್ಯತೆ ಕಾಪಾಡುವ ಉದ್ದೇಶದಿಂದ ಪಾಸ್‌ಪೋರ್ಟ್ ಅರ್ಜಿದಾರರ ಮಾಹಿತಿ ಬಹಿರಂಗಪಡಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಲೊರಾಡೋದಲ್ಲಿ ವಾಸಿಸುವ ಡಾನಾ ಜಿಮ್, ಎಂಬ ವ್ಯಕ್ತಿ ಎಕ್ಸ್‌ ಜೆಂಡರ್‌ ಪಾಸ್‌ಪೋರ್ಟ್‌ಗಾಗಿ ಅಮೆರಿಕಾ ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ. ಇದನ್ನೂ ಓದಿ: ಪಾಸ್ ಪೋರ್ಟ್ ಸಂಖ್ಯೆಯನ್ನು ಲಸಿಕೆ ಪ್ರಮಾಣಪತ್ರ ಜೊತೆಗೆ ಜೋಡಿಸಿ, ವಿದೇಶಕ್ಕೆ ಸುಲಭವಾಗಿ ಪ್ರಯಾಣಿಸಿಪುರುಷನಾಗಿ ಜನಿಸಿದ ಡಾನಾ ಜಿಮ್ ಅಮೆರಿಕಾದ ಸೇನೆಯಲ್ಲಿ ಸ್ವಲ್ಪ ಕಾಲ ಸೇವೆ ಸಲ್ಲಿಸಿದ್ದರು. ನಂತರ ಲಿಂಗ ಪರಿವರ್ತನೆಗೊಳಗಾಗಿ ಮಹಿಳೆಯಾದರು. ತಮ್ಮಂತಹ ಜನರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಡಾನಾ ಜಿಮ್‌ ಅವರಿಗೆ ಮೊದಲ 'ಎಕ್ಸ್' ಜೆಂಡರ್ ಪಾಸ್‌ಪೋರ್ಟ್ ನೀಡಿರಬಹುದು ಎಂದು ಮಾತುಗಳು ಕೇಳಿಬರುತ್ತಿವೆ.ಇದನ್ನೂ ಓದಿ: ಏರ್ ಇಂಡಿಯಾ ಮೇಲೆ ಬೃಹತ್ ಸೈಬರ್ ದಾಳಿ: 45 ಲಕ್ಷ ಪ್ರಯಾಣಿಕರ ಕ್ರೆಡಿಟ್ ಕಾರ್ಡ್, ಪಾಸ್‌ ಪೋರ್ಟ್ ವಿವರ ಸೋರಿಕೆದೇಶದ ಭದ್ರತೆಗೆ ಧಕ್ಕೆ ಆರೋಪ: ಮೆಹಬೂಬಾ ಮುಫ್ತಿ ಪಾಸ್ ಪೋರ್ಟ್ ಅರ್ಜಿ ತಿರಸ್ಕೃತ!ಒಂದೇ ಐಡಿ ಕಾರ್ಡ್ ನಲ್ಲಿ ಆಧಾರ್, ಡಿಎಲ್, ಪಾಸ್ ಪೋರ್ಟ್: ಅಮಿತ್ ಶಾ ಹೊಸ ಚಿಂತನೆಕೋವಿಡ್ ವ್ಯಾಕ್ಸಿನ್ ಪಾಸ್ ಪೋರ್ಟ್ ವಿಚಾರದಲ್ಲಿ ಡಬ್ಲ್ಯೂಹೆಚ್ ಒ ಮಟ್ಟದಲ್ಲಿ ಇನ್ನೂ ಒಮ್ಮತ ಮೂಡಿಲ್ಲ: ಕೇಂದ್ರ ಸರ್ಕಾರ