ಪರಮಾಣು ತಂತ್ರಜ್ಞಾನವನ್ನು ಅಕ್ರಮವಾಗಿ ಇರಾನ್, ಲಿಬಿಯಾ, ಉತ್ತರ ಕೊರಿಯಾಗೆ ಮಾರಾಟ ಮಾಡಿದ್ದ ಪಾಕ್ ಅಣು ವಿಜ್ಞಾನಿ ಎ.ಕ್ಯು ಖಾನ್ ನಿಧನ ಎ.ಕ್ಯು ಖಾನ್ ಅವರು ಜನಿಸಿದ್ದು ಮಧ್ಯಪ್ರದೇಶದ ಭೂಪಾಲ್ ನಲ್ಲಿ. 1947ರಲ್ಲಿ ಭಾರತ ಪಾಕ್ ವಿಭಜನೆ ಸಂದರ್ಭದಲ್ಲಿ ಖಾನ್ ಪಾಲಕರು ಪಾಕಿಸ್ತಾನಕ್ಕೆ ವಲಸೆ ಬಂದಿದ್ದರು. ಇಸ್ಲಾಮಾಬಾದ್: ಪಾಕಿಸ್ತಾನದ ನ್ಯೂಕ್ಲಿಯರ್ ಬಾಂಬ್ ಪಿತಾಮಹ ಎಂದೇ ಹೆಸರಾಗಿದ್ದ ಅಣುವಿಜ್ಞಾನಿ ಅಬ್ದುಲ್ ಖಾದಿರ್ ಖಾನ್ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಇಸ್ಲಾಮಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಡಿ ಆರ್ ಡಿ ಒ ಬೇಹುಗಾರಿಕೆ: ಪಾಕಿಸ್ತಾನದ ಹನಿ ಟ್ರ್ಯಾಪ್ ಲಿಂಕ್ ಪತ್ತೆಹಚ್ಚಿದ ಒಡಿಶಾ ಕ್ರೈಂ ಬ್ರ್ಯಾಂಚ್ಖಾದಿರ್ ಖಾನ್ ನಿಧನಕ್ಕೆ ಪ್ರಧಾನಿ ಇಮ್ರಾನ್ ಖಾನ್ ಸಂತಾಪ ಸೂಚಿಸಿದ್ದಾರೆ. ಪಾಕಿಸ್ತಾನದಲ್ಲಿ ಎ.ಕ್ಯು ಖಾನ್ ಅವರನ್ನು ರಾಷ್ಟ್ರೀಯ ನಾಯಕನಂತೆ ಕಾಣುತ್ತಿದ್ದರು. ಪಾಕ್ ದೇಶವನ್ನು ಜಗತ್ತಿನ ಮೊತ್ತ ಮೊದಲ ನ್ಯೂಕ್ಲಿಯರ್ ಬಾಂಬ್ ಹೊಂದಿದ ಇಸ್ಲಾಮಿಕ್ ರಾಷ್ಟ್ರವಾಗಿಸಿದ ಶ್ರೇಯ ಖಾನ್ ಅವರದು.ಇದನ್ನೂ ಓದಿ: ಕುಲಭೂಷಣ್ ಯಾದವ್ ಪ್ರಕರಣ: ವಕೀಲರನ್ನು ನೇಮಿಸಲು ಭಾರತಕ್ಕೆ ಪಾಕ್ ಉಚ್ಛ ನ್ಯಾಯಾಲಯ ಕಾಲಾವಕಾಶಸ್ವದೇಶದಲ್ಲಿ ಅವರನ್ನು ಹೀರೋ ನಂತೆ ಕಂಡರೂ ಅಂತಾರಾಷ್ಟ್ರೀಯ ಮಟ್ತದಲ್ಲಿ ಅವರ ಇಮೇಜ್ ಚೆನ್ನಾಗಿರಲಿಲ್ಲ. ಅವರನ್ನು ಅಪಾಯಕಾರಿ ವ್ಯಕ್ತಿ ಎಂದು ಪರಿಗಣಿಸಲಾಗಿತ್ತು. ಇರಾನ್, ಲಿಬಿಯಾ, ಉ.ಕೊರಿಯಾಗೆ ಪರಮಾಣು ತಂತ್ರಜ್ಞಾನವನ್ನು ಮಾರಾಟ ಮಾಡಿದ ಕಳಂಕ ಅವರ ಬೆನ್ನಿಗಂಟಿತ್ತು. ಇದನ್ನೂ ಓದಿ: ಪಾಕಿಸ್ತಾನ ಒಸಾಮಾನಂಥವರನ್ನು ಹುತಾತ್ಮನೆಂದು ವೈಭವೀಕರಿಸುತ್ತಲೇ ಶಾಂತಿ ಮಂತ್ರ ಜಪಿಸುತ್ತದೆ: ವಿಶ್ವಸಂಸ್ಥೆಯಲ್ಲಿ ಭಾರತ ಆರೋಪಎ.ಕ್ಯು ಖಾನ್ ಅವರು ಜನಿಸಿದ್ದು 1936, ಮಧ್ಯಪ್ರದೇಶದ ಭೂಪಾಲ್ ನಲ್ಲಿ. 1947ರಲ್ಲಿ ಭಾರತ ಪಾಕ್ ವಿಭಜನೆ ಸಂದರ್ಭದಲ್ಲಿ ಖಾನ್ ಪಾಲಕರು ಪಾಕಿಸ್ತಾನಕ್ಕೆ ವಲಸೆ ಬಂದಿದ್ದರು.ಇದನ್ನೂ ಓದಿ: ನಿಷೇಧಿತ ಉಗ್ರ ಸಂಘಟನೆ ಜೊತೆ ಸರ್ಕಾರ ಮಾತುಕತೆ: ಪಾಕ್ ಗೃಹಸಚಿವ ಸಮರ್ಥನೆಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕ್ ಪ್ರಜೆ ಬಂಧನ: 6 ಕೆಜಿ ಹೆರಾಯಿನ್ ವಶಪಾಕಿಸ್ತಾನ: ಧರ್ಮ ನಿಂದನೆ ಎಸಗಿದ್ದ ಮಹಿಳೆಗೆ ಮರಣದಂಡನೆಭಯೋತ್ಪಾದಕರಿಗೆ ಪಾಕಿಸ್ತಾನ ಆಶ್ರಯ, ಬೆಂಬಲ; ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು: ಪ್ರಧಾನಿ ಮೋದಿ ಜೊತೆ ಕಮಲಾ ಹ್ಯಾರಿಸ್ ಉಲ್ಲೇಖಪಾಕಿಸ್ತಾನಕ್ಕೆ ಬೇಹುಗಾರಿಕೆ: ಪೊಲೀಸರಿಂದ ಗ್ಯಾಸ್ ಏಜೆನ್ಸಿ ಮಾಲೀಕನ ಬಂಧನ!ಇದಕ್ಕಿಂತ ಹೆಚ್ಚಿನ ಆಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡುವ ಸಾಮರ್ಥ್ಯ ಪಾಕಿಸ್ತಾನಕ್ಕಿಲ್ಲ: ಪಾಕ್ ಭದ್ರತಾ ಸಲಹೆಗಾರ