ಅಮೆರಿಕಾದಲ್ಲಿ ಕೊರೊನಾ ರಣಕೇಕೆ: ಒಂದೇ ದಿನ ದಾಖಲೆಯ 5 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆ ಒಮಿಕ್ರಾನ್ ರೂಪಾಂತರಿ ದೇಶದ ಪರಿಸ್ಥಿತಿ ಹದಗೆಡುತ್ತಿರುವುದಕ್ಕೆ ಕಾರಣ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ವಾಷಿಂಗ್ಟನ್‌: ಜಗತ್ತಿನಲ್ಲೇ ಕೊರೊನಾ ಸಾಂಕ್ರಾಮಿಕದಿಂದಾಗಿ ಹಾನಿಗೊಳಗಾದ ದೇಶಗಳಲ್ಲಿ ಅಮೆರಿಕಾ ಮುಂಚೂಣಿಯಲ್ಲಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 5,12,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 5.4 ಕೋಟಿ ತಲುಪಿದೆ.ಇದನ್ನೂ ಓದಿ: ಕೋವಿಡ್-19: ದೇಶದಲ್ಲಿ 13,154 ಹೊಸ ಪ್ರಕರಣ, 268 ಮಂದಿ ಸಾವು, ಓಮಿಕ್ರಾನ್ ಸೋಂಕಿತರ ಸಂಖ್ಯೆ 961ಕ್ಕೇರಿಕೆಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯ ನೀಡಿದ ಅಂಕಿ ಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1,762 ಅಮೆರಿಕನ್ನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕೊರೋನಾ ಹೆಚ್ಚಳ: ಮುಂಬೈನಲ್ಲಿ ಹೊಸ ವರ್ಷದ ಪಾರ್ಟಿಗಳಿಗೆ ನಿಷೇಧ, ಸೆಕ್ಷನ್ 144 ಜಾರಿಬೂಸ್ಟರ್ ಡೋಸ್‌ ನಿಂದಲೂ ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಈ ವರ್ಷದ ಜನವರಿ 8 ರಂದು ಒಂದೇ ದಿನ 2,94,015 ಪ್ರಕರಣಗಳು ಕಂಡುಬಂದಿದ್ದವು. ಆ ದಾಖಲೆಯನ್ನು ನೂತನ ಏಕದಿನ ಪ್ರಕರನಗಳ ಸಂಖ್ಯೆ ಅಳಿಸಿಹಾಕಿರುವುದು ಆತಂಕಕ್ಕೆ ಕಾರಣವಾಗಿದೆ.ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ಸಂಖ್ಯೆ ದಿಢೀರ್ ಏರಿಕೆ: ಬೆಂಗಳೂರಿನಲ್ಲಿ 400 ಸೇರಿ 566 ಮಂದಿಗೆ ಪಾಸಿಟಿವ್, 6 ಸಾವು!ಒಮಿಕ್ರಾನ್ ರೂಪಾಂತರಿ ದೇಶದ ಪರಿಸ್ಥಿತಿ ಹದಗೆಡುತ್ತಿರುವುದಕ್ಕೆ ಕಾರಣ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (ಸಿಡಿಸಿ) ಪ್ರಕಾರ, ದೇಶದಲ್ಲಿ ಒಮಿಕ್ರಾನ್ ಶೇ 58.6ರಷ್ಟಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಮಕ್ಕಳಿಗೆ ಲಸಿಕೆ ನೀಡಲು ಅಭಿಯಾನ: ಸಿದ್ಧತೆ ಆರಂಭಿಸಿದ ಬಿಬಿಎಂಪಿ