ಆನ್ ಲೈನ್ ಟ್ರಾಲಿಂಗ್ ವಿರುದ್ಧ ಕಾನೂನು: ಆಸ್ಟ್ರೇಲಿಯ ಸರ್ಕಾರ ಮಹತ್ವದ ನಿರ್ಧಾರ ವಾಸ್ತವ ಜಗತಿನಲ್ಲಿ ಯಾವೆಲ್ಲಾ ಕಾನೂನುಗಳಿವೆಯೋ ಅವೇ ನಿಯಮಗಳು ಡಿಜಿಟಲ್ ಪ್ರಪಂಚದಲ್ಲೂ ಅನ್ವಯವಾಗಬೇಕು. ಆ ನಿಟ್ಟಿನಲ್ಲಿ ತಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಪ್ರಧಾನಿ ಸ್ಕಾಟ್ ಮೋರಿಸನ್ ತಿಳಿಸಿದ್ದಾರೆ. ಕ್ಯಾನ್ ಬೆರ್ರಾ: ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಮನೋಭಾವ ಮತ್ತು ಟ್ರಾಲಿಂಗ್ ಅನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಆಸ್ಟ್ರೇಲಿಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಇದನ್ನೂ ಓದಿ: ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಸಾರಾ ಅಲಿ ಖಾನ್ ವಿರುದ್ಧ ನೆಟ್ಟಿಗರ ಟ್ರೋಲ್ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೋರಿಸನ್ ಟ್ರಾಲಿಂಗ್ ನಿಗ್ರಹ ಶಾಸನವನ್ನು ಬಹಿರಂಗಗೊಳಿಸಿದ್ದಾರೆ. ಈ ಶಾಸನವನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು.ಇದನ್ನೂ ಓದಿ: ತಿರುಚಿದ ವಿಡಿಯೋಗಳನ್ನು ನಿಯಂತ್ರಿಸಲು ಟ್ವಿಟರ್ ಸಮರ್ಥವಾಗಿದೆ ಎಂಬುದನ್ನು ಸಾಬೀತುಪಡಿಸಿ: ಕರ್ನಾಟಕ ಹೈಕೋರ್ಟ್ಈ ಮಸೂದೆಯಡಿ ಸಾಮಾಜಿಕ ಜಾಲತಾಣಗಳನ್ನು ಪಬ್ಲಿಷರ್ ಎಂದು ಪರಿಗಣಿಸಲಾಗುವುದು. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಳ್ಳುವ ಅವಹೇಳನಕಾರಿ ಸಂದೇಶ ಮತ್ತು ಟ್ರಾಲ್ ಗಳಿಗೆ ಆ ಸಂಸ್ಥೆಗಳನ್ನು ಹೊಣೆಗಾರರನ್ನಾಗಿಸಬಹುದಾಗಿದೆ. ಇದನ್ನೂ ಓದಿ: ಮೈ ಬಣ್ಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ: ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ ನಟಿವಾಸ್ತವ ಜಗತಿನಲ್ಲಿ ಯಾವೆಲ್ಲಾ ಕಾನೂನುಗಳಿವೆಯೋ ಅವೇ ನಿಯಮಗಳು ಡಿಜಿಟಲ್ ಪ್ರಪಂಚದಲ್ಲೂ ಅನ್ವಯವಾಗಬೇಕು. ಆ ನಿಟ್ಟಿನಲ್ಲಿ ತಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಪ್ರಧಾನಿ ಸ್ಕಾಟ್ ಮೋರಿಸನ್ ತಿಳಿಸಿದ್ದಾರೆ.ಇದನ್ನೂ ಓದಿ: ಮುಖ ಬ್ಲರ್ ಮಾಡಿ ಫೋಟೋ ಶೇರ್: ಟ್ರೋಲ್ ಮಾಡಿದ ನೆಟ್ಟಿಗರ ವಿರುದ್ಧ ಇರ್ಫಾನ್ ಗರಂ