ವಿಮಾನ ಹಾರಾಟದ ಮಾರ್ಗ ಮಧ್ಯ ತುರ್ತು ಬಾಗಿಲು ತೆರೆದ ಪ್ರಯಾಣಿಕ: 12 ಮಂದಿಗೆ ಗಾಯ; ವಿಡಿಯೋ ವಿಮಾನ ಹಾರಾಟದ ಮಾರ್ಗ ಮಧ್ಯದಲ್ಲಿ ಪ್ರಯಾಣಿಕನೊಬ್ಬ ತುರ್ತು ಬಾಗಿಲು ನಿರ್ಗಮನದ ಬಾಗಿಲನ್ನು ತೆರೆದಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ. ಸಿಯೋಲ್: ವಿಮಾನ ಹಾರಾಟದ ಮಾರ್ಗ ಮಧ್ಯದಲ್ಲಿ ಪ್ರಯಾಣಿಕನೊಬ್ಬ ತುರ್ತು ಬಾಗಿಲು ನಿರ್ಗಮನದ ಬಾಗಿಲನ್ನು ತೆರೆದಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ.ಸಿಯೋಲ್ ನಿಂದ ಡಾಯಿಗು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಹೊರಟಿದ್ದ ಏಷಿಯನ್ ಏರ್ ಲೈನ್ಸ್ ನ ಎ 321 ವಿಮಾನದಲ್ಲಿ ಈ ಘಟನೆ ನಡೆದಿದ್ದು, ತುರ್ತು ನಿರ್ಗಮನ ಬಾಗಿಲು ಬಳಿ ಕುತಿಳಿದ್ದ ಪ್ರಯಾಣಿಕ ಆ ಬಾಗಿಲು ಎಳೆದ ತಕ್ಷಣ ಕ್ಯಾಬಿನ್ ಒಳಗೆ ಗಾಳಿ ತುಂಬಿ 12 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ವಿಮಾನ ಹಾರಾಟದ ಮಾರ್ಗ ಮಧ್ಯ ಯೋಧನಿಗೆ ಹೃದಯಾಘಾತ: ಪ್ರಾಣ ಉಳಿಸಿದ ಕೇರಳದ 'ಫ್ಲಾರೆನ್ಸ್ ನೈಟಿಂಗೇಲ್' ಪಿ.ಗೀತಾ! A321 . 9 . ../Jzed4PMDvcವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದ ಪ್ರಯಾಣಿಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಅಪರಾಧ ಮಾಡಿದವರಿಗೆ ದಕ್ಷಿಣ ಕೊರಿಯಾದಲ್ಲಿ ಕನಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.../jPlGXRb6sX