ಮಸ್ಕಟ್: ಟೇಕ್ ಆಫ್ ಆಗುವ ಮೊದಲೇ ಹೊತ್ತಿ ಉರಿದ ಏರ್ ಇಂಡಿಯಾ ವಿಮಾನ, ಪ್ರಯಾಣಿಕರು ಪಾರು ಮಸ್ಕಟ್ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ() ಟೇಕ್ ಆಫ್ ಆಗುವ ಕೆಲವೇ ನಿಮಿಷಗಳ ಮುನ್ನ ಇಂಜಿನ್‍ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನ ಹೊತ್ತಿ ಉರಿದಿದೆ. ವಿಮಾನದಲ್ಲಿದ್ದ 141 ಪ್ರಯಾಣಿಕರನ್ನು... ಮಸ್ಕಟ್: ಮಸ್ಕಟ್ ವಿಮಾನ ನಿಲ್ದಾಣದಲ್ಲಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ() ಟೇಕ್ ಆಫ್ ಆಗುವ ಕೆಲವೇ ನಿಮಿಷಗಳ ಮುನ್ನ ಇಂಜಿನ್‍ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನ ಹೊತ್ತಿ ಉರಿದಿದೆ. ವಿಮಾನದಲ್ಲಿದ್ದ 141 ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಏರ್‌ಲೈನ್ ಮೂಲಗಳು ತಿಳಿಸಿವೆ.ವಿಮಾನ ಟೇಕ್ ಆಫ್ ಆಗುವ ಮೊದಲು ಇಂಜಿನ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಅದರಲ್ಲಿದ್ದ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಈ ವಿಮಾನ ಕೇರಳದ ಕೊಚ್ಚಿಗೆ ಹೊರಟಿತ್ತು.ಇದನ್ನು ಓದಿ: ಹವಾಮಾನ ವೈಪರೀತ್ಯ: ಮಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ಏರ್ ಇಂಡಿಯಾ ವಿಮಾನ ಬೆಂಗಳೂರಿಗೆ ಡೈವರ್ಟ್!ಕೊಚ್ಚಿಗೆ ತೆರಳುತ್ತಿದ್ದ ಬೋಯಿಂಗ್ 737-800 ವಿಮಾನ ಈ ಘಟನೆ ಸಂಭವಿಸಿದ್ದು, ಹೊಗೆ ಕಾಣಿಸಿಕೊಂಡ ನಂತರ ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕರನ್ನು ವಿಮಾನದಿಂದ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಈ ವಿಮಾನದಲ್ಲಿ 141 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು ಎಂದು ಮೂಲಗಳು ತಿಳಿಸಿವೆ.ವಿಮಾನಯಾನ ನಿಯಂತ್ರಕ ಡಿಜಿಸಿಎ ಘಟನೆಯ ಬಗ್ಗೆ ತನಿಖೆ ನಡೆಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.