ಬಾಂಗ್ಲಾದೇಶದಲ್ಲಿ ನಡೆದ ಬೆಳವಣಿಗೆಗೆ ನಾವು ಕಾರಣ ಅಲ್ಲ: ಅಮೆರಿಕ ಸ್ಪಷ್ಟನೆ ಸೇಂಟ್ ಮಾರ್ಟಿನ್ ದ್ವೀಪದ ಸಾರ್ವಭೌಮತ್ವವನ್ನು ಬಿಟ್ಟುಕೊಟ್ಟಿದ್ದರೆ ಮತ್ತು ಬಂಗಾಳ ಕೊಲ್ಲಿಯ ಮೇಲೆ ಅಮೆರಿಕ ಪ್ರಾಬಲ್ಯ ಸಾಧಿಸಲು ಅವಕಾಶ ನೀಡಿದ್ದರೆ ತಾನು ಅಧಿಕಾರದಲ್ಲಿ ಉಳಿಯಬಹುದಿತ್ತು ಎಂದು ಹಸೀನಾ ಹೇಳಿಕೊಂಡಿದ್ದನ್ನು ಉಲ್ಲೇಖಿಸಿದ ಮಾಧ್ಯಮ ವರದಿಗಳಿಗೆ ಜೀನ್-ಪಿಯರ್ ಪ್ರತಿಕ್ರಿಯಿಸಿದರು. ವಾಷಿಂಗ್ಟನ್: ಬಾಂಗ್ಲಾದೇಶದ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕ ಮಧ್ಯಪ್ರವೇಶಿಸಿದೆ ಇದರಿಂದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ ದೇಶ ಬಿಟ್ಟು ಹೋಗಲು ಕಾರಣವಾಯಿತು ಎಂಬ ಆರೋಪವನ್ನು ಅಮೆರಿಕ ತಳ್ಳಿಹಾಕಿದೆ.ಬಾಂಗ್ಲಾದೇಶದ ಆಂತರಿಕ ವಿಷಯದಲ್ಲಿ ನಾವು ಯಾವುದೇ ರೀತಿಯಲ್ಲಿಯೂ ಭಾಗಿಯಾಗಿಲ್ಲ. ಬಾಂಗ್ಲಾ ಹಿಂಸಾಚಾರ, ಶೇಖ್ ಹಸೀನಾ ಅವರ ರಾಜೀನಾಮೆ ವಿಚಾರದಲ್ಲಿ ಅಮೆರಿಕ ಸರ್ಕಾರವು ಭಾಗಿಯಾಗಿದೆ ಎಂಬ ವದಂತಿಗಳು ಕೇವಲ ಸುಳ್ಳು. ಅದು ನಿಜವಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.ಸೇಂಟ್ ಮಾರ್ಟಿನ್ ದ್ವೀಪದ ಸಾರ್ವಭೌಮತ್ವವನ್ನು ಬಿಟ್ಟುಕೊಟ್ಟಿದ್ದರೆ ಮತ್ತು ಬಂಗಾಳ ಕೊಲ್ಲಿಯ ಮೇಲೆ ಅಮೆರಿಕ ಪ್ರಾಬಲ್ಯ ಸಾಧಿಸಲು ಅವಕಾಶ ನೀಡಿದ್ದರೆ ತಾನು ಅಧಿಕಾರದಲ್ಲಿ ಉಳಿಯಬಹುದಿತ್ತು ಎಂದು ಹಸೀನಾ ಹೇಳಿಕೊಂಡಿದ್ದನ್ನು ಉಲ್ಲೇಖಿಸಿದ ಮಾಧ್ಯಮ ವರದಿಗಳಿಗೆ ಜೀನ್-ಪಿಯರ್ ಪ್ರತಿಕ್ರಿಯಿಸಿದರು.ಆದರೆ ಹಸೀನಾ ಅವರ ಮಗ ಸಜೀಬ್ ವಾಝೇದ್, ತನ್ನ ತಾಯಿ ಅಂತಹ ಹೇಳಿಕೆಯನ್ನು ನೀಡಿಲ್ಲ ಎಂದು ನಿರಾಕರಿಸಿದ್ದಾರೆ.ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ನನ್ನ ತಾಯಿಯ ರಾಜೀನಾಮೆ ಹೇಳಿಕೆ ಸಂಪೂರ್ಣವಾಗಿ ಸುಳ್ಳು ಮತ್ತು ಕಪೋಲಕಲ್ಪಿತವಾಗಿದೆ. ಢಾಕಾದಿಂದ ಹೊರಡುವ ಮೊದಲು ಅಥವಾ ನಂತರ ಅವರು ಯಾವುದೇ ಹೇಳಿಕೆ ನೀಡಿಲ್ಲ ಎಂದು ವಝೆದ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.ತಮ್ಮ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳುವುದು ಬಾಂಗ್ಲಾದೇಶದ ಜನರ ಹಕ್ಕು ಮತ್ತು ಸವಲತ್ತು. ಬಾಂಗ್ಲಾದೇಶದ ಜನರು ತಮ್ಮ ಸರ್ಕಾರದ ಭವಿಷ್ಯವನ್ನು ನಿರ್ಧರಿಸಬೇಕು ಮತ್ತು ಅದಕ್ಕೆ ನಮ್ಮ ಬೆಂಬಲವಿದೆ. ಎಂದು ಜೀನ್-ಪಿಯರ್ ಹೇಳಿದರು.