ಅಮೆರಿಕದ ವಲಸಿಗ ಸಮುದಾಯದ ಮೇಲೂ ಭಾರತದಲ್ಲಿನ ಧಾರ್ಮಿಕ ಧ್ರುವೀಕರಣ ಪ್ರಭಾವ! ಭಾರತದಲ್ಲಿನ ಧಾರ್ಮಿಕ ಧ್ರುವೀಕರಣ ಯುಎಸ್ ವಲಸಿಗರಲ್ಲೂ ನುಸುಳುತ್ತಿದೆ. ನ್ಯೂಜೆರ್ಸಿಯಾದ ಎಡಿಸನ್ ನಲ್ಲಿ ದೇಶದ ಸಾತಂತ್ರೋತ್ಸವ ಸಂದರ್ಭದಲ್ಲಿ ನಡೆದ ಪರೇಡ್ ವೇಳೆಯಲ್ಲಿ ಭಾರತದ ಮುಸ್ಲಿಂ ಅಲ್ಪಸಂಖ್ಯಾತರ ದಬ್ಬಾಳಿಕೆಯ ಸಂಕೇತವಾಗಿ ಬುಲ್ಡೋಜರ್ ಒಂದನ್ನು ಬೀದಿಯಲ್ಲಿ ಉರುಳಿಸಲಾಯಿತು. ನ್ಯೂಜೆರ್ಸಿ: ಭಾರತದಲ್ಲಿನ ಧಾರ್ಮಿಕ ಧ್ರುವೀಕರಣ ಯುಎಸ್ ವಲಸಿಗರಲ್ಲೂ ನುಸುಳುತ್ತಿದೆ. ನ್ಯೂಜೆರ್ಸಿಯಾದ ಎಡಿಸನ್ ನಲ್ಲಿ ದೇಶದ ಸಾತಂತ್ರೋತ್ಸವ ಸಂದರ್ಭದಲ್ಲಿ ನಡೆದ ಪರೇಡ್ ವೇಳೆಯಲ್ಲಿ ಭಾರತದ ಮುಸ್ಲಿಂ ಅಲ್ಪಸಂಖ್ಯಾತರ ದಬ್ಬಾಳಿಕೆಯ ಸಂಕೇತವಾಗಿ ಬುಲ್ಡೋಜರ್ ಒಂದನ್ನು ಬೀದಿಯಲ್ಲಿ ಉರುಳಿಸಲಾಯಿತು.ಕ್ಯಾಲಿಫೋರ್ನಿಯಾದ ಅನಾಹೈಮ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಭಾರತದಲ್ಲಿ ಮುಸ್ಲಿಮರ ವಿರುದ್ಧದ ಹಿಂಸಾಚಾರವನ್ನು ಪ್ರತಿಭಟಿಸಿದವರು ಮತ್ತು ರಜಾ ದಿನದ ಸಂಭ್ರಮಾಚರಣೆಯಲ್ಲಿದ್ದವರ ನಡುವೆ ವಾಗ್ವಾದ ಉಂಟಾಗಿತ್ತು.ವೈವಿಧ್ಯಮಯ ನಂಬಿಕೆಯ ಹಿನ್ನೆಲೆಯ ಭಾರತೀಯ ಅಮೆರಿಕನ್ನರು ಹಲವಾರು ದಶಕಗಳಿಂದ ಶಾಂತಿಯುತವಾಗಿ ಬದುಕುತ್ತಿದ್ದಾರೆ. ಆದರೆ ಅಮೆರಿಕದಲ್ಲಿನ ಈ ಇತ್ತೀಚಿನ ಘಟನೆಗಳು ಮತ್ತು ಕಳೆದ ತಿಂಗಳು ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿ ನಡೆದ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಹಿಂಸಾತ್ಮಕ ಘರ್ಷಣೆಗಳು, ಭಾರತದಲ್ಲಿನ ರಾಜಕೀಯ ಮತ್ತು ಧಾರ್ಮಿಕ ಧ್ರುವೀಕರಣವು ಡಯಾಸ್ಪೊರಾ ಸಮುದಾಯಗಳಿಗೂ ಹರಡುತ್ತಿದೆ ಎಂಬ ಕಳವಳವನ್ನು ಹೆಚ್ಚಿಸಿದೆ. ಭಾರತದಲ್ಲಿ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ರಾಷ್ಟ್ರೀಯತೆಯು ಉಲ್ಬಣಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಮರ ವಿರುದ್ಧ ಹೆಚ್ಚುತ್ತಿರುವ ದಾಳಿಗಳ ಬಗ್ಗೆ ಆಡಳಿತ ಪಕ್ಷವು ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಮೋದಿಯವರ ಮೌನವು ಬಲಪಂಥೀಯ ಗುಂಪುಗಳನ್ನು ಹುರಿದುಂಬಿಸುತ್ತದೆ ಮತ್ತು ರಾಷ್ಟ್ರೀಯ ಏಕತೆಗೆ ಧಕ್ಕೆ ತರುತ್ತದೆ ಎಂದು ಮುಸ್ಲಿಂ ಸಮುದಾಯ ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಕೆಲವು ಹಿಂದೂಗಳು ಹೇಳುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷತೆಯು ಯುಎಸ್ ಅನ್ನು ಧ್ರುವೀಕರಣಗೊಳಿಸಿದಂತೆಯೇ ಹಿಂದೂ ರಾಷ್ಟ್ರೀಯತೆಯು ಭಾರತೀಯ ವಲಸಿಗ ಸಮುದಾಯವನ್ನು ವಿಭಜಿಸಿದೆ ಎಂದು ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಧಾರ್ಮಿಕ ಜೀವನದ ಡೀನ್ ವರುಣ್ ಸೋನಿ ಹೇಳಿದ್ದಾರೆ. ಇದು ಭಾರತದಿಂದ ಸುಮಾರು 2,000 ವಿದ್ಯಾರ್ಥಿಗಳನ್ನು ಹೊಂದಿದೆ, ಇದು ದೇಶದಲ್ಲೇ ಅತ್ಯಧಿಕವಾಗಿದೆ.