ಟಿ-20 ವಿಶ್ವಕಪ್ ನಲ್ಲಿ ಭಾರತ ವಿರುದ್ಧ ಗೆಲುವು ಇಸ್ಲಾಂಗೆ ಸಂದ ಜಯ: ಪಾಕ್ ಸಚಿವನ ಹೇಳಿಕೆಯ ವಿಡಿಯೋ ವೈರಲ್ ಟಿ-20 ವಿಶ್ವಕಪ್‌ ನಲ್ಲಿ ದಾಯಾದಿ ದೇಶಗಳ ನಡುವೆ ನಿನ್ನೆ ನೆಡೆದ ರೋಚಕ ಕ್ರಿಕೆಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿರುವ ಹಿನ್ನಲೆಯಲ್ಲಿ ಪಾಕಿಸ್ತಾನ ಸಚಿವರೊಬ್ಬರು ಹಿಂದೂರಾಷ್ಟ್ರವನ್ನು ಕೆಣಕುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ. ಇಸ್ಲಾಮಾಬಾದ್: ಟಿ-20 ವಿಶ್ವಕಪ್‌ ನಲ್ಲಿ ದಾಯಾದಿ ದೇಶಗಳ ನಡುವೆ ನಿನ್ನೆ ನೆಡೆದ ರೋಚಕ ಕ್ರಿಕೆಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿರುವ ಹಿನ್ನಲೆಯಲ್ಲಿ ಪಾಕಿಸ್ತಾನ ಸಚಿವರೊಬ್ಬರು ಹಿಂದೂರಾಷ್ಟ್ರವನ್ನು ಕೆಣಕುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ.ಭಾರತ ವಿರುದ್ಧ ಪಾಕ್ ಸಾಧಿಸಿರುವ ಗೆಲುವನ್ನು "ಇಸ್ಲಾಂಗೆ ಸಂದ ಜಯ" ಎಂದು ಅವರು ಬಣ್ಣಿಸಿದ್ದಾರೆ. ಅವರು ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಇದೀಗ ಸಖತ್ ವೈರಲ್‌ ಆಗುತ್ತಿದೆ. ಟೀಂ ಇಂಡಿಯಾ ವಿರುದ್ಧ ಪಾಕ್ ಜಯ ಸಾಧಿಸುತ್ತಿದ್ದಂತೆಯೇ ಪಾಕ್ ಸಚಿವ ಶೇಖ್ ರಶೀದ್ ಅಹ್ಮದ್ ‘ಭಾರತ-ಪಾಕ್‌ ನಡುವೆ ಪಂದ್ಯ ನಡೆಯುತ್ತಿದ್ದ ಸಮಯದಲ್ಲಿ ಭಾರತ ಸೇರಿದಂತೆ ಜಗತ್ತಿನಾದ್ಯಂತ ಮುಸ್ಲಿಮರು ಪಾಕಿಸ್ತಾನ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿ, ನಾವೇ ಗೆಲ್ಲಬೇಕೆಂದು ಪ್ರಾರ್ಥಿಸಿದ್ದಾರೆ. ಪಾಕಿಸ್ತಾನದ ಜನರಿಗೆ ನಿನ್ನೆ ನಡೆದ ಪಂದ್ಯವೇ ಫೈನಲ್ ಆಗಿದೆ. ಇದು ಪಾಕಿಸ್ತಾನದ ಗೆಲುವಲ್ಲ, ಇಸ್ಲಾಮಿನ ಗೆಲುವು ಎಂದು ಅವರು ಹೇಳಿದ್ದಾರೆ.پاکستان انڈیا میچ ٹکرا: پاکستانی کرکٹ ٹیم اور عوام کو مبارکباد پیش کرتا ہوں.://./Tc0IG0n2DJ@ @ # ../e9RkffrK2O