ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್ ಮೇಲೆ ಮೊಟ್ಟೆ ಎಸೆತ: ಅದೃಷ್ಟವಶಾತ್ ಒಡೆಯದ ಮೊಟ್ಟೆ! ಮೆಕ್ರಾನ್ ಮೇಲೆ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸಾರ್ವಜನಿಕರನ್ನು ಭೇಟಿ ಮಾಡುವ ಸಂದರ್ಭ ಓರ್ವ ವ್ಯಕ್ತಿ ಮೆಕ್ರಾನ್ ಅವರ ಕಪಾಳಕ್ಕೆ ಬಾರಿಸಿದ್ದ. ಪ್ಯಾರಿಸ್: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್ ಯಾವ ಸ್ಥಳಕ್ಕೇ ಹೋದರೂ ಸುದ್ದಿಯಾಗುತ್ತಾರೆ ಎನ್ನುವ ಮಾತಿಗೆ ಮತ್ತೆ ಪುಷ್ಟಿ ದೊರೆತಿದೆ. ಲ್ಯಾನ್ ಎಂಬ ನಗರದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಆಹಾರ ಮೇಳದಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಬಂದಿಳಿದಿದ್ದರು.ಇದನ್ನೂ ಓದಿ: ಫ್ರಾನ್ಸ್, ಅಮೆರಿಕ ನಡುವೆ ಪ್ರಾಬಲ್ಯದ ಹೋರಾಟ; ಅಕೂಸ್ ಒಪ್ಪಂದ ಬದಿಗಿರಿಸಿದ ಆಸ್ಟ್ರೇಲಿಯಾ, 'ಬಹುದೊಡ್ಡ ಪ್ರಮಾದ ಎಂದ ಪ್ಯಾರಿಸ್'ಆಹಾರ ಮೇಳಕ್ಕೆ ಭೇಟಿ ನೀಡಿದ ಸಂದರ್ಭ ಓರ್ವ ವ್ಯಕ್ತಿ ಮೆಕ್ರಾನ್ ಮೇಲೆ ಮೊಟ್ಟೆಯೊಂದನ್ನು ಎಸೆದಿದ್ದಾನೆ. ಮೆಕ್ರಾನ್ ಪುಣ್ಯಕ್ಕೆ ಆ ಮೊಟ್ಟೆ ಒಡೆದು ಚೂರಾಗದೆ ಅವರ ಮೈಮೇಲಿಂದ ಬೌನ್ಸ್ ಆಗಿ ನೆಲಕ್ಕೆ ಬಿದ್ದ ನಂತರ ಒಡೆದಿದೆ. ಸ್ವಲ್ಪದರಲ್ಲಿ ಭಾರೀ ಪ್ರಮಾದದಿಂದ ಬಚಾವಾಗಿದ್ದಾರೆ. ಮೊಟ್ಟೆ ಎಸೆತಕ್ಕೆ ಖಚಿತ ಕಾರಣ ತಿಳಿದುಬಂದಿಲ್ಲ. ಘಟನೆ ನಂತರ ಮೆಕ್ರಾನ್ ತಾವು ಆರೋಪಿಯೊಂದಿಗೆ ಮಾತನಾಡಬೇಕು ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಆಫ್ಘನ್ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಚರ್ಚೆ; ಭಯೋತ್ಪಾದನೆ ಪ್ರಸರಣ ಕುರಿತು ಉಭಯ ನಾಯಕರ ಕಳವಳಮೆಕ್ರಾನ್ ಮೇಲೆ ದಾಳಿ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸಾರ್ವಜನಿಕರನ್ನು ಭೇಟಿ ಮಾಡುವ ಸಂದರ್ಭ ಓರ್ವ ವ್ಯಕ್ತಿ ಮೆಕ್ರಾನ್ ಅವರ ಕಪಾಳಕ್ಕೆ ಬಾರಿಸಿದ್ದ. ಅದರ ವಿಡಿಯೊ ಅಂತರ್ಜಾಲದಲ್ಲಿ ಹರಿದಾಡಿ ಚರ್ಚೆಗೆ ಗ್ರಾಸವಾಗಿತ್ತು.ಇದನ್ನೂ ಓದಿ: ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಗೆ ಸಾರ್ವಜನಿಕವಾಗಿ ಕಪಾಳ ಮೋಕ್ಷ; ಇಬ್ಬರ ಬಂಧನಫ್ರೆಂಚ್ ಕೋರ್ಟ್ ನಿಂದ ಯಾವುದೇ ಮಾಹಿತಿ ಬಂದಿಲ್ಲ: ಫ್ರಾನ್ಸ್ ನಲ್ಲಿ ಭಾರತದ ಆಸ್ತಿ ಮುಟ್ಟುಗೋಲು ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆಭಾರತ ಸರ್ಕಾರಕ್ಕೆ ಸೇರಿದ 20 ಆಸ್ತಿಗಳ ಮುಟ್ಟುಗೋಲಿಗೆ ಫ್ರಾನ್ಸ್ ಕೋರ್ಟ್ ಆದೇಶ!ರಫೆಲ್ ಯುದ್ಧ ವಿಮಾನ ಖರೀದಿ ಕುರಿತು ಫ್ರಾನ್ಸ್ ನಲ್ಲಿ ತನಿಖೆ ಪ್ರಾರಂಭ: ಜೆಪಿಸಿ ತನಿಖೆಗೆ ಆದೇಶಿಸುವಂತೆ ಪ್ರಧಾನಿಗೆ ಕಾಂಗ್ರೆಸ್ ಆಗ್ರಹ