ಕೆನಡಾ: ಖಲಿಸ್ತಾನಿ ತೀವ್ರಗಾಮಿಗಳಿಂದ ದೇವಾಲಯ ಧ್ವಂಸ ಕೆನಡಾದಲ್ಲಿ ಖಲಿಸ್ತಾನಿ ತೀವ್ರಗಾಮಿಗಳ ಅಟ್ಟಹಾಸ ಮುಂದುವರೆದಿದ್ದು, ಶನಿವಾರ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ ಎಂದು ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ. ನವದೆಹಲಿ: ಕೆನಡಾದಲ್ಲಿ ಖಲಿಸ್ತಾನಿ ತೀವ್ರಗಾಮಿಗಳ ಅಟ್ಟಹಾಸ ಮುಂದುವರೆದಿದ್ದು, ಶನಿವಾರ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ ಎಂದು ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ.ಶನಿವಾರ ತಡರಾತ್ರಿ ಖಾಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆಯ ಪೋಸ್ಟರ್‌ಗಳೊಂದಿಗೆ ಕೆನಡಾದಲ್ಲಿ ತೀವ್ರಗಾಮಿಗಳ ತಂಡವೊಂದು ಹಿಂದೂ ದೇವಾಲಯವನ್ನು ಧ್ವಂಸ ಮಾಡಿವೆ. ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.ಇದನ್ನೂ ಓದಿ: ಖಲಿಸ್ತಾನಿಗಳಿಂದ ಬೆದರಿಕೆ: ಕೆನಡಾ ಹೈಕಮೀಷನರ್ ಗೆ ಭಾರತ ನೋಟಿಸ್'ಜೂನ್ 18ರ ಹತ್ಯೆಯಲ್ಲಿ ಭಾರತದ ಪಾತ್ರದ ಕುರಿತು ಕೆನಡಾ ತನಿಖೆ ನಡೆಸುತ್ತಿದೆ' ಎಂದು ಆಸ್ಟ್ರೇಲಿಯಾ ಟುಡೇ ಹಂಚಿಕೊಂಡಿರುವ ಟ್ವೀಟ್ ನಲ್ಲಿ ಬರೆಯಲಾಗಿದೆ. ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.# # # # - # @ # @ @ @ @Pallavi_Aus @SarahLGates1 @ @ ../PG0NeJJTAEಇದನ್ನೂ ಓದಿ: ಕೆನಡಾ: ಖಲಿಸ್ತಾನ್ ಬೆಂಬಲಿಗ, ನಿಯೋಜಿತ ಭಯೋತ್ಪಾದಕ, ಹರ್ದೀಪ್ ನಿಜ್ಜರ್ ಹತ್ಯೆಆಸ್ಟ್ರೇಲಿಯಾ ಟುಡೇ ಶೇರ್ ಮಾಡಿರುವ ವಿಡಿಯೋದಲ್ಲಿ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಪೋಸ್ಟರ್‌ಗಳನ್ನು ಅಂಟಿಸಿ, ಫೋಟೊ ತೆಗೆಸಿಕೊಂಡು ಪರಾರಿಯಾಗುತ್ತಿರುವುದನ್ನು ತೋರಿಸುತ್ತದೆ. ದೇವಾಲಯದ ದ್ವಾರದ ಮೇಲಿನ ಪೋಸ್ಟರ್‌ನಲ್ಲಿ ಈ ವರ್ಷದ ಜೂನ್‌ನಲ್ಲಿ ಕೊಲ್ಲಲ್ಪಟ್ಟ ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ ಮತ್ತು ನಿಯೋಜಿತ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಚಿತ್ರವೂ ಇದೆ.