ಫೇಸ್ ಬುಕ್ ವ್ಯತ್ಯಯದಿಂದ 600 ಕೋಟಿ ಡಾಲರ್ ಕಳಕೊಂಡ ಮಾರ್ಕ್ ಜಕರ್ ಬರ್ಗ್ ಸೋಮವಾರ ರಾತ್ರಿ 3- 4 ಗಂಟೆಗಳ ಕಾಲ ಫೇಸ್ ಬುಕ್ ಸಾಮಾಜಿಕ ಜಾಲತಾಣ ಸ್ಥಗಿತಗೊಂಡು ವಿಶ್ವಾದ್ಯಂತ ಕೋಟ್ಯಂತರ ಬಳಕೆದಾರರು ಪರದಾಡಿದ್ದರು. ವಾಟ್ಸ್ ಆಪ್ ಮತ್ತು ಇನ್ ಸ್ಟಾ ಗ್ರಾಂ ಸೇವೆಗಳನ್ನೂ ಬಳಕೆದಾರರು ಬಳಸಲಾಗದೆ ತೊಂದರೆಗೀಡಾಗಿದ್ದರು. ವಾಷಿಂಗ್ಟನ್: ಸೋಮವಾರ ರಾತ್ರಿ 3- 4 ಗಂಟೆಗಳ ಕಾಲ ಫೇಸ್ ಬುಕ್ ಸಾಮಾಜಿಕ ಜಾಲತಾಣ ಸ್ಥಗಿತಗೊಂಡು ವಿಶ್ವಾದ್ಯಂತ ಕೋಟ್ಯಂತರ ಬಳಕೆದಾರರು ಪರದಾಡಿದ್ದರು. ವಾಟ್ಸ್ ಆಪ್ ಮತ್ತು ಇನ್ ಸ್ಟಾ ಗ್ರಾಂ ಸೇವೆಗಳನ್ನೂ ಬಳಕೆದಾರರು ಬಳಸಲಾಗದೆ ತೊಂದರೆಗೀಡಾಗಿದ್ದರು. ಈ ಸಂಬಂಧ ಮಾರ್ಕ್ ತಮ್ಮ ಫೇಸ್ ಬುಕ್ ಪೋಸ್ಟಿನಲ್ಲಿ ಕ್ಷಮೆಯಾಚಿಸಿದ್ದರು.ಇದನ್ನೂ ಓದಿ: ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಸೇವೆಯಲ್ಲಿ ವ್ಯತ್ಯಯ; ಗ್ರಾಹಕರ ಪರದಾಟಕೆಲ ಗಂಟೆಗಳ ವ್ಯತ್ಯಯಕ್ಕೆ ಫೇಸ್ ಬುಕ್ ಸ್ಥಾಪಕ, ಸಿಇಒ ಮಾರ್ಕ್ ಜಕರ್ ಬರ್ಗ್ ಭಾರೀ ಬೆಲೆ ತೆತ್ತಿದ್ದಾರೆ. ಫೇಸ್ ಬುಕ್ ಸಂಪರ್ಕ ಕಡಿತದಿಂದಾಗಿ ಮಾರ್ಕ್ ಅವರ ಸಂಪತ್ತಿನಲ್ಲಿ 600 ಕೋಟಿ ಡಾಲರ್ ಮೊತ್ತ ಕುಸಿತ ಕಂಡಿದೆ. 600 ಕೋಟಿ ಡಾಲರ್ ಎಂದರೆ ಭಾರತೀಯ ಕರೆನ್ಸಿಯಲ್ಲಿ 44,000 ಕೋಟಿ ರೂ. ಇದನ್ನೂ ಓದಿ: ಟ್ರಂಪ್ ಬೆಂಬಲಿಗರ ಕುಖ್ಯಾತ ಕ್ಯಾಪಿಟಲ್ ದಾಳಿಗೆ ಫೇಸ್ ಬುಕ್ ಕುಮ್ಮಕ್ಕು ಕಾರಣ: ಮಾಜಿ ಮ್ಯಾನೇಜರ್ ಆರೋಪಇದಕ್ಕೂ ಮುನ್ನ ಫೇಸ್ ಬುಕ್ಕಿನಲ್ಲಿ ಮ್ಯಾನೇಜರ್ ಆಗಿ ಉನ್ನತ ಹುದ್ದೆ ನಿರ್ವಹಿಸಿ ಹೊರಬಂದಿದ್ದ ಫ್ರಾನ್ಸಸ್ ಹೋಗನ್ ಅವರು ಫೇಸ್ ಬುಕ್ ಅಕ್ರಮದಲ್ಲಿ ನಿರತವಾಗಿದೆ ಎಂಬುದಾಗಿ ಸಂದರ್ಶನದಲ್ಲಿ ತಿಳಿಸಿದ್ದರು. ಸಂದರ್ಶನದಲ್ಲಿ ಫೇಸ್ ಬುಕ್ ನಂಬರ್ ಒನ್ ಆಗಲು ಅಳವಡಿಸಿಕೊಂಡಿರುವ ಕ್ರಮ ಮಾರ್ಗಗಳು, ತಂತ್ರಗಳ ಕುರಿತಾಗಿ ಬೆಳಕು ಚೆಲ್ಲಿದ್ದರು.ಇದನ್ನೂ ಓದಿ: ನಕಲಿ ಫೇಸ್‌ಬುಕ್ ಪೋಸ್ಟ್‌ ಸಂಬಂಧ ಸೌದಿಯಲ್ಲಿ ಜೈಲು ಸೇರಿದ್ದ ಕರ್ನಾಟಕದ ವ್ಯಕ್ತಿ ತವರಿಗೆ ವಾಪಸ್ಅಮೆರಿಕ ಶ್ವೇತಭವನದ ಮೇಲೆ ನಡೆದ ಟ್ರಂಪ್ ಬೆಂಬಲಿಗರ ದಾಳಿಗೆ ಫೇಸ್ ಬುಕ್ ನೀಡಿದ ಕುಮ್ಮಕ್ಕು ಕಾರಣ ಎಂದು ಫ್ರಾನ್ಸಸ್ ಗಂಭೀರ ಆರೋಪವನ್ನೂ ಮಾಡಿದ್ದರು. ಮಾರ್ಕ್ ಜಕರ್ ಬರ್ಗ್ ಸಂಪತ್ತಿನಲ್ಲಿ ಕುಸಿತ ಕಾಣಲು ಇದೂ ಒಂದು ಕಾರಣ ಎಂದು ಪರಿಣತರು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: ತಾಲಿಬಾನ್ ಗೆ ನಿಷೇಧ ಹೇರಿದ ಫೇಸ್ ಬುಕ್ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ; ಆಗಸಕ್ಕೆ ಹಾರುತ್ತಿರುವ ನಿರ್ದೇಶಕರು ಇವರೇ?ಪ್ಯಾಂಡೋರಾ ಪೇಪರ್ಸ್: ಜಗತ್ತಿನ ಪ್ರಭಾವಿ ವ್ಯಕ್ತಿಗಳ ವಿದೇಶಿ ಹೂಡಿಕೆಗಳ ರಹಸ್ಯ ದಾಖಲೆಗಳು ಸೋರಿಕೆಪ್ರವಾದಿ ಬಗ್ಗೆ ವ್ಯಂಗ್ಯ ರೇಖಾಚಿತ್ರ ರಚಿಸಿದ್ದ ಸ್ವೀಡನ್‌ ಕಲಾವಿದ ಅಪಘಾತದಲ್ಲಿ ಸಾವುನಿಷೇಧಿತ ಉಗ್ರ ಸಂಘಟನೆ ಜೊತೆ ಸರ್ಕಾರ ಮಾತುಕತೆ: ಪಾಕ್ ಗೃಹಸಚಿವ ಸಮರ್ಥನೆಏರ್ ಇಂಡಿಯಾ ಕುರಿತು ಸರ್ಕಾರ ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ: ಪಿಯೂಷ್ ಗೋಯಲ್