ಅಫ್ಘಾನಿಸ್ತಾನ ನೆಲ ತೊರೆದ ನಂತರ ಇದೇ ಮೊದಲ ಬಾರಿಗೆ ಅಮೆರಿಕ- ತಾಲಿಬಾನ್ ಮಾತುಕತೆ 2020ರ ಶಾಂತಿ ಒಪ್ಪಂದದಲ್ಲಿ ತಾಲಿಬಾನ್, ಐಸಿಸ್, ಅಲ್ ಖೈದಾ ಸೇರಿದಂತೆ ಹಲವು ಉಗ್ರಸಂಘಟನೆಗಳ ಜೊತೆ ಸಂಬಂಧ ಕಡಿದುಕೊಳ್ಳಬೇಕು ಎಂದು ಅಮೆರಿಕ ಷರತ್ತು ವಿಧಿಸಿತ್ತು. ಈ ಕುರಿತಾಗಿ ಚರ್ಚೆ ನಡೆಯಲಿದೆ. ಕಾಬೂಲ್: ಆಫ್ಘನ್ ನೆಲವನ್ನು ತೊರೆದ ಅಮೆರಿಕ ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ ಜೊತೆ ಮಾತುಕತೆ ನಡೆಸಲಿದೆ. ಅಕ್ಟೋಬರ್ 9 ಮತ್ತು 10 ಅದಕ್ಕಾಗಿ ಮುಹೂರ್ತ ನಿಗದಿಯಾಗಿದೆ. ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ ವಿದೇಶ ನಾಗರಿಕರು ದೇಶ ತೊರೆಯಲು ಅನುವು ಮಾಡಿಕೊಡುವ ವಿಚಾರವಾಗಿ ಈ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನ: ಕುಂದುಜ್ ನಗರದ ಶಿಯಾ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 100ಕ್ಕೇರಿದ ಸಾವಿನ ಸಂಖ್ಯೆಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಠಿಕಾಣಿ ಹೂಡಿದ್ದ ಅಮೆರಿಕ ಅಗಸ್ಟ್ ತಿಂಗಳಾಂತ್ಯದಲ್ಲಿ ಜಾಗ ಖಾಲಿ ಮಾಡಿತ್ತು. ಕಲೆದೊಂದು ವರ್ಷದಿಂದಲೇ ಅಮೆರಿಕನ್ ಸೈನಿಕರ ತೆರವು ಕಾರ್ಯಾಚರಣೆ ಪ್ರಾರಂಭಗೊಂಡಿತ್ತು.ಇದನ್ನೂ ಓದಿ: ನಿಷೇಧಿತ ಉಗ್ರ ಸಂಘಟನೆ ಜೊತೆ ಸರ್ಕಾರ ಮಾತುಕತೆ: ಪಾಕ್ ಗೃಹಸಚಿವ ಸಮರ್ಥನೆಇದೀಗ ನಡೆಯಲಿರುವ ಮಾತುಕತೆಯಲ್ಲಿ 2020ರಲ್ಲಿ ತಾಲಿಬಾನ್ ಮತ್ತು ಅಮೆರಿಕ ನಡುವೆ ನಡೆದಿದ್ದ ಶಾಂತಿ ಒಪ್ಪಂದ ಹಾಗೂ ಭಯೋತ್ಪಾದನೆ ಕುರಿತಾಗಿಯೂ ಚರ್ಚೆ ನಡೆಯಲಿದೆ ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಹೀನ್ ತಿಳಿಸಿದ್ದಾರೆ. ಇದನ್ನೂ ಓದಿ: ಎನ್ ಆರ್ ಎಫ್ ಬೆಂಬಲಿಗನ ಮಗುವನ್ನು ಹತ್ಯೆಗೈದ ತಾಲಿಬಾನ್: ಅಫ್ಘಾನಿಸ್ತಾನದಲ್ಲಿ ಮುಂದುವರಿದ ರಿವೆಂಜ್ ಕಿಲ್ಲಿಂಗ್2020 ಶಾಂತಿ ಒಪ್ಪಂದದಲ್ಲಿ ತಾಲಿಬಾನ್ ಐಸಿಸ್, ಅಲ್ ಖೈದಾ ಸೇರಿದಂತೆ ಹಲವು ಉಗ್ರಸಂಘಟನೆಗಳ ಜೊತೆ ಸಂಬಂಧ ಕಡಿದುಕೊಳ್ಳಬೇಕು ಎಂದು ಅಮೆರಿಕ ಷರತ್ತು ವಿಧಿಸಿತ್ತು. ಅಲ್ಲದೆ ಅಮೆರಿಕ ವಿರುದ್ಧ ಸಂಚು ನಡೆಸುವ ಉಗ್ರಸಂಘಟನೆಗಳಿಗೆ ತಾಲಿಬಾನ್ ಆಶ್ರಯ ನೀಡಬಾರದು ಎಂದೂ ತಾಕೀತು ಮಾಡಿತ್ತು.ಇದನ್ನೂ ಓದಿ: ಭಯೋತ್ಪಾದಕರಿಗೆ ಪಾಕಿಸ್ತಾನ ಆಶ್ರಯ, ಬೆಂಬಲ; ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು: ಪ್ರಧಾನಿ ಮೋದಿ ಜೊತೆ ಕಮಲಾ ಹ್ಯಾರಿಸ್ ಉಲ್ಲೇಖವಿಮಾನ ಸಂಚಾರ ಪುನರಾರಂಭಿಸಲು ತಾಲಿಬಾನ್ ನಾಯಕತ್ವದ ಅಫ್ಘಾನಿಸ್ತಾನ ಸರ್ಕಾರ ಭಾರತಕ್ಕೆ ಮನವಿಎನ್ ಆರ್ ಎಫ್ ಬೆಂಬಲಿಗನ ಮಗುವನ್ನು ಹತ್ಯೆಗೈದ ತಾಲಿಬಾನ್: ಅಫ್ಘಾನಿಸ್ತಾನದಲ್ಲಿ ಮುಂದುವರಿದ ರಿವೆಂಜ್ ಕಿಲ್ಲಿಂಗ್ಕ್ರಿಕೆಟ್ ನಲ್ಲಿ 'ಹಕ್ಕಾನಿ ನೆಟ್ವರ್ಕ್' ಪ್ರಭಾವವಿರುವ ಅಫ್ಘಾನಿಸ್ತಾನಕ್ಕೆ ಟಿ 20 ವಿಶ್ವಕಪ್ ನಲ್ಲಿ ಆಡಲು ಐಸಿಸಿ ಅವಕಾಶ ಕೊಡಲಿದೆಯೇ?ಅಫ್ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳು 'ಆದಷ್ಟು ಬೇಗ' ಶಾಲೆಗೆ ಮರಳಲು ಅವಕಾಶ: ತಾಲಿಬಾನ್ಪ್ರಧಾನಿ ಮೋದಿ- ಸೌದಿ ವಿದೇಶಾಂಗ ಸಚಿವರ ಭೇಟಿ ವೇಳೆ ಅಫ್ಘಾನಿಸ್ತಾನದ ಕುರಿತು ಮಹತ್ವದ ಚರ್ಚೆಅಫ್ಘಾನಿಸ್ತಾನ: ತಾಲಿಬಾನ್ ವಿರುದ್ಧ ತೊಡೆ ತಟ್ಟಿದ್ದ ಎನ್ ಆರ್ ಎಫ್ ಸೈನಿಕರಿಂದ ಪಂಜ್ ಶಿರ್ ಕೈಜಾರಿದ್ದು ಹೇಗೆ?