ಪಶ್ಚಿಮ ಅಪ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: 320 ಮಂದಿ ಸಾವು, 12 ಹಳ್ಳಿಗಳು ಸಂಪೂರ್ಣ ನಾಶ ಪಶ್ಚಿಮ ಅಪ್ಘಾನಿಸ್ತಾನದಲ್ಲಿ ಶನಿವಾರ ಹಲವು ಭಾರಿ ಭೂಮಿ ಕಂಪಿಸಿದ್ದು, ಕನಿಷ್ಠ 320 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ. ನವದೆಹಲಿ : ಪಶ್ಚಿಮ ಅಪ್ಘಾನಿಸ್ತಾನದಲ್ಲಿ ಶನಿವಾರ ಹಲವು ಭಾರಿ ಭೂಮಿ ಕಂಪಿಸಿದ್ದು, ಕನಿಷ್ಠ 320 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.ಭೂಕಂಪದಲ್ಲಿ 78 ಮಂದಿ ಗಾಯಗೊಂಡಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಹಲವರು ಸಿಲುಕಿರುವುದರಿಂದ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮೊದಲಿಗೆ ರಿಕ್ಟರ್‌ ಮಾಪಕದಲ್ಲಿ 6.3ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ಆನಂತರ 5.5, 4.7 ಮತ್ತು 5.9ರಷ್ಟು ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ವಾಯವ್ಯ ನಗರ ಹೆರಾತ್‌ನಲ್ಲಿ ಭೂಕಂಪನ ಕೇಂದ್ರಬಿಂದು ಪತ್ತೆಯಾಗಿದೆ.ಇದನ್ನೂ ಓದಿ: ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಗೆ ಪ್ರತೀಕಾರ ದಾಳಿ: ಗಾಜಾ ಪಟ್ಟಿಯಲ್ಲಿ ಕನಿಷ್ಠ 198 ಸಾವು, ಸಾವಿರಕ್ಕೂ ಅಧಿಕ ಮಂದಿಗೆ ಗಾಯಅಧಿಕಾರಿಗಳ ಪ್ರಕಾರ, ಜಿಂದಾ ಜಾನ್ ಮತ್ತು ಘೋರಿಯನ್ ಜಿಲ್ಲೆಗಳ 12 ಹಳ್ಳಿಗಳು ಸಂಪೂರ್ಣವಾಗಿ ನಾಶವಾಗಿವೆ. ಭೂಮಿ ಕಂಪಿಸಿದ ಅನುಭವವಾಗುತ್ತಲೇ ಸಾವಿರಾರು ಜನ ಮನೆಯಿಂದ ಹೊರಗೆ ಬಂದರು. ರಸ್ತೆಗಳ ಮೇಲೆಯೇ ಇಡೀ ದಿನ ಕಳೆದ ಜನ ಅನ್ನ-ನೀರಿಲ್ಲದೆ ಪರದಾಡಿದರು ಎಂದು ತಿಳಿದುಬಂದಿದೆ. ಅದರಲ್ಲೂ, ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದವರ ರಕ್ಷಣೆಗೆ ಸಿಬ್ಬಂದಿ ಇಲ್ಲದೆ ಜನ ಪರದಾಡುವಂತಾಯಿತು ಎಂದು ಮೂಲಗಳು ತಿಳಿಸಿವೆ.ಪ್ರಬಲ ಭೂಕಂಪದಿಂದಾಗಿ ಸಾವಿರಾರು ಕಟ್ಟಡಗಳು ಧರೆಗುರುಳಿದ್ದು, ಸಾವಿರಕ್ಕೂ ಅಧಿಕ ಮಂದಿಗೆ ಆಯಾ ನಗರಗಳ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗತ್ತಿದೆ. ಹಾಗೆಯೇ, ಇನ್ನೂ ನೂರಾರು ಜನ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.