ಪಾಕ್ ಸಂಸ್ಥಾಪಕ ಮೊಹಮದ್ ಆಲಿ ಜಿನ್ನಾ ವಿಗ್ರಹ ಸ್ಫೋಟಿಸಿ ಧ್ವಂಸ: ಬಲೂಚ್ ಬಂಡುಕೋರರ ಕೃತ್ಯ 2013ರಲ್ಲಿ ಜಿನ್ನಾ ಅವರು ಕಡೆಗಾಲದಲ್ಲಿ ತಂಗಿದ್ದರು ಎನ್ನಲಾದ 121 ವರ್ಷ ಹಳೆಯ ಕಟ್ಟಡವನ್ನು ಬಲೂಚ್ ಬಂಡುಕೋರರು ಬೆಂಕಿ ಮತ್ತು ಗುಂಡಿನದಾಳಿಯಿಂದ ಹಾನಿಯುಂಟುಮಾಡಿದ್ದರು. ಕರಾಚಿ: ಪಾಕಿಸ್ತಾನ ಸಂಸ್ಥಾಪಕ ಮೊಹಮದ್ ಆಲಿ ಜಿನ್ನಾರ ಪುತ್ಥಳಿಯನ್ನು ಬಲೂಚ್ ಬಂಡುಕೋರರು ಬಾಂಬ್ ಸ್ಫೋಟಿಸಿ ಧ್ವಂಸಗೊಳಿಸಿರುವ ಘಟನೆ ಬಲೂಚಿಸ್ತಾನದ ಗ್ವಾದರ್ ಎಂಬಲ್ಲಿ ನಡೆದಿದೆ. ಇದನ್ನೂ ಓದಿ: ಬೆಂಕಿ ಆರಿಸುವ ಸೋಗಿನಲ್ಲಿ ಪಾಕಿಸ್ತಾನ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ: ವಿಶ್ವಸಂಸ್ಥೆಯಲ್ಲಿ ಭಾರತ ಕಟುಟೀಕೆಸ್ಫೋಟದ ತೀವ್ರತೆಗೆ ವಿಗ್ರಹದ ಒಂದಂಶವೂ ಉಳಿದಿಲ್ಲ ಎಂದು ಸ್ಥಳೀಯ ನಗರಾಡಳಿತ ತಿಳಿಸಿದೆ. ಸ್ಫೋಟ ನಡೆದ ಕೆಲ ಹೊತ್ತಿನಲ್ಲೇ ಬಲೂಚ್ ರಿಪಬ್ಲಿಕನ್ ಆರ್ಮಿ ಸಂಘಟನೆಯ ಬಂಡುಕೋರರು ಸ್ಫೋಟದ ಹೊಣೆ ಹೊತ್ತುಕೊಂಡಿದ್ದಾರೆ.ಇದನ್ನೂ ಓದಿ: ಬೆಂಗಳೂರು: ಪಾಕ್ ನ ಐಎಸ್‌ಐಗೆ ಬೇಹುಗಾರಿಕೆ ಮಾಡುತ್ತಿದ್ದ ರಾಜಸ್ತಾನ ಮೂಲದ ವ್ಯಕ್ತಿ ಬಂಧನ!ಬಂಡುಕೋರರು ಪ್ರವಾಸಿಗರ ಸೋಗಿನಲ್ಲಿ ಬಂದಿದ್ದರು ಎಂದು ಪೊಲಿಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ. ಜಿನ್ನಾ ವಿಗ್ರಹ ನಾಶ ಪಾಕ್ ವಿಚಾರಧಾರೆಯ ಮೇಲಿನ ದಾಳಿ ಎಂದು ಬಲೂಚಿಸ್ತಾನದ ಮಾಜಿ ಗೃಹಸಚಿವ ಸರ್ಫ್ ರಾಜ್ ಘಟನೆಯನ್ನು ಖಂಡಿಸಿದ್ದಾರೆ. 2013ರಲ್ಲಿ ಜಿನ್ನಾ ಅವರು ಕಡೆಗಾಲದಲ್ಲಿ ತಂಗಿದ್ದರು ಎನ್ನಲಾದ 121 ವರ್ಷ ಹಳೆಯ ಕಟ್ಟಡಡವನ್ನು ಬಲೂಚ್ ಬಂಡುಕೋರರು ಬೆಂಕಿ ಮತ್ತು ಗುಂಡಿನದಾಳಿಯಿಂದ ಹಾನಿಯುಂಟುಮಾಡಿದ್ದರು. ಇದನ್ನೂ ಓದಿ: ಆಫ್ಘನ್ ನಲ್ಲಿ ಅಮೆರಿಕ ಬೆಂಬಲಿಸಿ ತಪ್ಪು ಮಾಡಿದೆವು, ತಾಲಿಬಾನಿಗಳೊಂದಿಗೆ ಚರ್ಚಿಸುತ್ತಿದ್ದೇನೆ: ಪಾಕ್‌ ಪ್ರಧಾನಿ ಇಮ್ರಾನ್ ಖಾನ್ಕುಡಿಯುವ ನೀರಿಗಾಗಿ ಮಸೀದಿಗೆ ಹೋಗಿದ್ದಕ್ಕೆ ಒತ್ತೆಯಾಳು; ಪಾಕಿಸ್ತಾನದಲ್ಲಿ ಹಿಂದೂ ಕುಟುಂಬಕ್ಕೆ ಕಿರುಕುಳನ್ಯೂಜಿಲೆಂಡ್‌ ಬೆನ್ನಲ್ಲೇ ಇಂಗ್ಲೆಂಡ್‌ ಕ್ರಿಕೆಟ್ ತಂಡದಿಂದಲೂ ಪಾಕಿಸ್ತಾನ ಪ್ರವಾಸ ರದ್ದುಸರಣಿ ರದ್ದುಪಡಿಸುವ ಮೂಲಕ ನ್ಯೂಜಿಲ್ಯಾಂಡ್ ಪಾಕಿಸ್ತಾನದ ಕ್ರಿಕೆಟ್ ಅನ್ನು ಕೊಲೆಗೈದಿದೆ: ಶೋಯಬ್ ಅಖ್ತರ್ಇದಕ್ಕಿಂತ ಹೆಚ್ಚಿನ ಆಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡುವ ಸಾಮರ್ಥ್ಯ ಪಾಕಿಸ್ತಾನಕ್ಕಿಲ್ಲ: ಪಾಕ್ ಭದ್ರತಾ ಸಲಹೆಗಾರ