ಉಕ್ರೇನ್ ಹೆಲಿಕಾಪ್ಟರ್ ಪತನ: ಆಂತರಿಕ ಸಚಿವ ಸೇರಿ 16 ಮಂದಿ ಸಾವು ಉಕ್ರೇನ್ ಭೀಕರ ಹೆಲಿಕಾಪ್ಟರ್ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಆಂತರಿಕ ಸಚಿವ ಸೇರಿ 16 ಮಂದಿ ಸಾವನ್ನಪ್ಪಿದ್ದಾರೆ. ಕೀವ್: ಉಕ್ರೇನ್ ಭೀಕರ ಹೆಲಿಕಾಪ್ಟರ್ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಆಂತರಿಕ ಸಚಿವ ಸೇರಿ 16 ಮಂದಿ ಸಾವನ್ನಪ್ಪಿದ್ದಾರೆ.ಉಕ್ರೇನ್ ರಾಜಧಾನಿ ಕೀವ್ ಹೊರವಲಯದ ಬ್ರೋವರಿಯಲ್ಲಿ ಶಿಶುವಿಹಾರದ ಬಳಿ ಹೆಲಿಕಾಪ್ಟರ್ ಪತನಗೊಂಡು ಎರಡು ಮಕ್ಕಳು, ಉಕ್ರೇನ್‌ನ ಆಂತರಿಕ ಸಚಿವ ಸೇರಿದಂತೆ 16 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. : 18 , ’ ../‘ಸದ್ಯ 16 ಮಂದಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ’ಎಂದು ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥ ಇಗೊರ್ ಕ್ಲೈಮೆಂಕೊ ತಿಳಿಸಿದ್ದಾರೆ. ಮೃತರಲ್ಲಿ ಆಂತರಿಕ ಸಚಿವ ಡೆನಿಸ್ ಮೊನಾಸ್ಟಿರ್‌ಸ್ಕಿ, ಆಂತರಿಕ ಸಚಿವಾಲಯದ ಉನ್ನತ ಅಧಿಕಾರಿಗಳು ಸೇರಿದ್ದಾರೆ ಎಂದು ಅವರು ಹೇಳಿದ್ಧಾರೆ.