ಇಸ್ರೇಲ್ ಭರ್ಜರಿ ಬೇಟೆ: ಅ.7ರ ಉಗ್ರ ದಾಳಿಯ ರೂವಾರಿ ಹಮಾಸ್ ಕಮಾಂಡರ್ ಮಿಲಿಟರಿ ಕಾರ್ಯಾಚರಣೆಯಲ್ಲಿ ಹತ! ಹಮಾಸ್ ಉಗ್ರ ಸಂಘಟನೆಯನ್ನು ಕಿತ್ತೊಗೆಯುವ ಶಪತ ಮಾಡಿರುವ ಇಸ್ರೇಲ್ ಸೇನೆ ಗಾಜಾ ಪಟ್ಟಿ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ. ಅದರಂತೆ ಗಾಜಾಪಟ್ಟಿಯೊಳಗೆ ನುಗ್ಗಿರುವ ಐಡಿಎಫ್ ಸಾಮಾಜಿಕ ಪೋಸ್ಟ್‌ನಲ್ಲಿ ಹಮಾಸ್ ಭಯೋತ್ಪಾದಕನ ಹತ್ಯೆ ಮಾಡಲಾಗಿದ್ದು ಆತನ ಹೆಸರು ಮತ್ತು ಫೋಟೋವನ್ನು ಹಂಚಿಕೊಂಡಿದೆ. ಟೆಲ್ ಅವೀವ್: ಹಮಾಸ್ ಉಗ್ರ ಸಂಘಟನೆಯನ್ನು ಕಿತ್ತೊಗೆಯುವ ಶಪತ ಮಾಡಿರುವ ಇಸ್ರೇಲ್ ಸೇನೆ ಗಾಜಾ ಪಟ್ಟಿ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ. ಅದರಂತೆ ಗಾಜಾಪಟ್ಟಿಯೊಳಗೆ ನುಗ್ಗಿರುವ ಐಡಿಎಫ್ ಸಾಮಾಜಿಕ ಪೋಸ್ಟ್‌ನಲ್ಲಿ ಹಮಾಸ್ ಭಯೋತ್ಪಾದಕನ ಹತ್ಯೆ ಮಾಡಲಾಗಿದ್ದು ಆತನ ಹೆಸರು ಮತ್ತು ಫೋಟೋವನ್ನು ಹಂಚಿಕೊಂಡಿದೆ. ಗುಪ್ತಚರ ಆಧಾರದ ಮೇಲೆ, ಯುದ್ಧ ವಿಮಾನಗಳು ಉಗ್ರರ ಅಡಗುತಾಣದ ಮೇಲೆ ದಾಳಿ ಮಾಡುತ್ತಿದೆ. ಈ ದಾಳಿಯಲ್ಲಿ ಉತ್ತರ ವಿಭಾಗದ ಬೀಟ್ ಲಾಹಿಯಾ ಬೆಟಾಲಿಯನ್‌ನ ನಸೀಮ್ ಅಬು ಅಜಿನಾ ಹತ್ಯೆಯಾಗಿದ್ದಾನೆ ಎಂದು ಹೇಳಲಾಗುತ್ತದೆ.ಕಮಾಂಡರ್ ನಸೀಮ್ ಹತ್ಯೆ ಹತ್ಯೆಗೀಡಾದ ಭಯೋತ್ಪಾದಕ ಹಮಾಸ್‌ನ ಹಿರಿಯ ಕಮಾಂಡರ್ ಎಂದು ಇಸ್ರೇಲಿ ರಕ್ಷಣಾ ಪಡೆ ಹೇಳಿಕೊಂಡಿದೆ. ಕಿಬ್ಬುಟ್ಜ್ ಸೇರಿದಂತೆ ಮೋಶವ್ ನೆಟೀವ್ ಹಠಾರಾ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದನು. ವಕ್ತಾರ ಡೇನಿಯಲ್ ಹಗರಿ ಅವರು, ಅಮ್ಮನ್ ಮತ್ತು ಶಿನ್ ಬೇಟ್ ನ ಗುಪ್ತಚರ ಆಧಾರದ ಮೇಲೆ, ಕಳೆದ ರಾತ್ರಿ ಹಮಾಸ್ ನ ಉತ್ತರ ವಿಭಾಗದ ಕಮಾಂಡರ್ ನಸ್ಸಿಮ್ ಅಬು ಅಜಿನಾ ನನ್ನು ಹತ್ಯೆ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ. ಅಕ್ಟೋಬರ್ 7ರಂದು ಕಿಬ್ಬುಟ್ಜ್, ಎರೆಜ್ ಮತ್ತು ಮೋಶವ್ ನೆಟೀವ್ ಹತಾರಾ ಮೇಲೆ ದಾಳಿ ನಡೆಸುವಲ್ಲಿ ನಸೀಮ್ ಸೇರಿದಂತೆ ಅನೇಕ ಭಯೋತ್ಪಾದಕರು ಭಾಗಿಯಾಗಿದ್ದರು.מטוסי קרב בהכוונת מידע מודיעיני של אמ"ן ושב״כ, חיסלו אמש את מפקד גדוד בית לאהיה בחטיבה הצפונית של חמאס, נסים אבו עג'ינה, אשר שילח את המתקפות הרצחניות של חמאס ב-7 באוקטובר לקיבוץ ארז ולמושב נתיב העשרה>> ../7e3O5xlF0Wದಿ ಜೆರುಸಲೆಮ್ ಪೋಸ್ಟ್ ಪ್ರಕಾರ, ನಸೀಮ್ ವೈಮಾನಿಕ ದಾಳಿ ನಡೆಸುವಲ್ಲಿ ಪರಿಣತನಾಗಿದ್ದನು. ಹಮಾಸ್‌ನ ಮಾನವರಹಿತ ವೈಮಾನಿಕ ವಾಹನ ಮತ್ತು ಡ್ರೋನ್ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. ನಸೀಮ್‌ನ ಹತ್ಯೆ ಮೂಲಕ ಹಮಾಸ್‌ಗೆ ದೊಡ್ಡ ಹೊಡೆತವನ್ನು ನೀಡಿದೆ.ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧ: ವೆಸ್ಟ್ ಬ್ಯಾಂಕ್ ನಲ್ಲಿನ ಹಮಾಸ್ ಉಪ ನಾಯಕನ ಮನೆ ಧ್ವಂಸಗೊಳಿಸಿದ ಇಸ್ರೇಲ್ ಸೇನೆಇಸ್ರೇಲ್-ಹಮಾಸ್ ಯುದ್ಧದಲ್ಲಿ 8000 ಮಂದಿ ಸಾವು ಅಕ್ಟೋಬರ್ 7ರಂದು, ಹಮಾಸ್ ಭಯೋತ್ಪಾದಕರು ದಕ್ಷಿಣ ಇಸ್ರೇಲ್ನಲ್ಲಿ ಗಾಳಿ, ನೀರು ಮತ್ತು ಭೂಮಿಯಿಂದ ನಿರಾಯುಧ ಇಸ್ರೇಲಿಗಳ ಮೇಲೆ ದಾಳಿ ಮಾಡಿದ್ದರು. ನಂತರ ಇಸ್ರೇಲ್ ಪ್ರತಿದಾಳಿಗೆ ಮುಂದಾಗಿದ್ದು ಅಂದಿನಿಂದ ಅಕ್ಟೋಬರ್ 31ರ ನಡುವೆ, ಇಸ್ರೇಲ್ ಮತ್ತು ಗಾಜಾದಲ್ಲಿ 8,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಸಾಮಾನ್ಯರಾಗಿದ್ದಾರೆ.