ಉದ್ಘಾಟನೆಯಾದ ಮೊದಲ ದಿನವೇ ' ' ಮಾಲ್ ಲೂಟಿ ಮಾಡಿದ ಪಾಕಿಸ್ತಾನಿಯರು!; ಪಾಕಿಸ್ತಾನದ ಕರಾಚಿಯಲ್ಲಿ ‘ಡ್ರೀಮ್ ಬಜಾರ್’ ಮಾಲ್ ಅನ್ನು ಉದ್ಘಾಟನೆಗೊಂಡ ಮೊದಲ ದಿನವೇ ಜನರ ಗುಂಪೊಂದು ಧ್ವಂಸಗೊಳಿಸಿದ್ದು ಮಾತ್ರವಲ್ಲದೇ ಬ್ರಾಂಡೆಡ್ ಬಟ್ಟೆಗಳು ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳನ್ನು ದೋಚಿ ಪರಾರಿಯಾಗಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನದಲ್ಲಿ ಮಹತ್ವಾಕಾಂಕ್ಷೆಯೊಂದಿಗೆ ಉದ್ಘಾಟನೆಯಾಗಿದ್ದ ' ' ಮಾಲ್ ಗೆ ಆಘಾತ ಎದುರಾಗಿದ್ದು, ಇಡೀ ಮಾಲ್ ಅನ್ನು ಪಾಕಿಸ್ತಾನಿಯರು ಕೆಲವೇ ಗಂಟೆಗಳಲ್ಲಿ ಲೂಟಿ ಮಾಡಿದ್ದಾರೆ.ಹೌದು.. ಪಾಕಿಸ್ತಾನದ ಕರಾಚಿಯಲ್ಲಿ ‘ಡ್ರೀಮ್ ಬಜಾರ್’ ಮಾಲ್ ಅನ್ನು ಉದ್ಘಾಟನೆಗೊಂಡ ಮೊದಲ ದಿನವೇ ಜನರ ಗುಂಪೊಂದು ಧ್ವಂಸಗೊಳಿಸಿದ್ದು ಮಾತ್ರವಲ್ಲದೇ ಬ್ರಾಂಡೆಡ್ ಬಟ್ಟೆಗಳು ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳನ್ನು ದೋಚಿ ಪರಾರಿಯಾಗಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.ಜನರ ಗುಂಪು ಕಂಡು ಗಾಬರಿಗೊಂಡ ಮಾಲ್ ಸಿಬ್ಬಂದಿ, ಅದರ ದ್ವಾರಗಳನ್ನು ಮುಚ್ಚಲು ಪ್ರಯತ್ನಿಸಿದ್ದರು. ಆದರೆ ದೊಣ್ಣೆಗಳನ್ನು ಬೀಸುತ್ತಾ ಬಂದ ಕೆಲವರು, ಅದರ ಗಾಜಿನ ಪ್ರವೇಶ ದ್ವಾರವನ್ನು ಬಲಪ್ರಯೋಗದ ಮೂಲಕ ಪುಡಿಗಟ್ಟಿದ್ದರು. ಘಟನಾ ಸ್ಥಳದಲ್ಲಿ ಪೊಲೀಸರು ಇರಲಿಲ್ಲ. ಹಾಗಾಗಿ ಜನರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಮಾಲ್‌ ಸಿಬ್ಬಂದಿ ಅಸಹಾಯಕತೆ ಹೊರಹಾಕಿದ್ದಾರೆ ಎಂದು ಎಆರ್‌ವೈ ನ್ಯೂಸ್ ವರದಿ ಮಾಡಿದೆ. , - ' ..... ../ah4d2ULh3lವಿಶೇಷ ರಿಯಾಯಿತಿ ಘೋಷಿಸಿದ್ದ ಮಾಲ್‘ಕರಾಚಿಯ ಗುಲಿಸ್ತಾನ್-ಎ-ಜೋಹರ್‌ನಲ್ಲಿರುವ ‘ಡ್ರೀಮ್ ಬಜಾರ್’ ಮಾಲ್‌ನ ಉದ್ಘಾಟನೆ ಪ್ರಯುಕ್ತ ಮಾಲೀಕರು ವಿಶೇಷ 50 ರೂ ರಿಯಾಯಿತಿ ಘೋಷಿಸಿದ್ದರು. ಮೊದಲ ದಿನದಂದು ಪಾಕಿಸ್ತಾನದ ಕರೆನ್ಸಿಯ 50 ರೂ.ಗೂ ಕಡಿಮೆ ದರದಲ್ಲಿ ಬಟ್ಟೆಗಳನ್ನು ಮಾರಾಟ ಮಾಡುವುದಾಗಿ ಈ ಮಾಲ್ ಹೇಳಿಕೊಂಡಿತ್ತು.ಜತೆಗೆ ಸಾರ್ವಜನಿಕರನ್ನು ಆಕರ್ಷಿಸಲು ಟಿವಿ, ದಿನ ಪತ್ರಿಕೆ, ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ಪ್ರಚಾರವನ್ನು ಮಾಡಿದ್ದರು. ಆದರೆ, ನಿಗದಿಯಂತೆ ಕಾರ್ಯಕ್ರಮ ನಡೆಯಲಿಲ್ಲ. ಹಾಗಾಗಿ ಮಾಲ್‌ ವ್ಯವಸ್ಥಾಪಕರು ಬಂದ್‌ ಮಾಡಲು ಮುಂದಾಗಿದ್ದರು. ಇದೇ ಸಂದರ್ಭದಲ್ಲಿ ನೆರೆದಿದ್ದ ಜನರು ಮಾಲ್‌ ಅನ್ನು ದ್ವಂಸಗೊಳಿಸಿದ್ದಾರೆ. ಜತೆಗೆ ಸಿಕ್ಕಸಿಕ್ಕ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. 🚨 . ' --. SH0CK !! , & . … ../9IMZdDVX1Sಜನರ ಗುಂಪು ತಾವು ವಸ್ತುಗಳನ್ನು ಲೂಟಿ ಮಾಡುತ್ತಿರುವ ದೃಶ್ಯಗಳನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡು ಸಂಭ್ರಮಿಸಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ಉದ್ಯಮಿಯೊಬ್ಬರು ಈ ಮಾಲ್ ಅನ್ನು ನಿರ್ಮಿಸಿದ್ದಾರೆ ಎಂದು ತಿಳಿದು ಬಂದಿದೆ.