ತವರು ಬಿಡಲೊಪ್ಪದ ಕೊರೋನಾ: ಚೀನಾದಲ್ಲಿ ಮತ್ತೆ ಕೋವಿಡ್ ಉಲ್ಬಣ, ಮೇ ತಿಂಗಳಲ್ಲೇ ಸೋಂಕು ಶೇ.40ಕ್ಕಿಂತ ಹೆಚ್ಚು ಏರಿಕೆ! ಕೊರೋನಾ ವೈರಸ್ ತವರು ಚೀನಾದಲ್ಲಿ ಮತ್ತೆ ಕೋವಿಡ್ ಸೋಂಕು ಉಲ್ಬಣವಾಗಿದ್ದು, ಮೇ ತಿಂಗಳಲ್ಲೇ ಶೇ.40ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ. ಬೀಜಿಂಗ್: ಕೊರೋನಾ ವೈರಸ್ ತವರು ಚೀನಾದಲ್ಲಿ ಮತ್ತೆ ಕೋವಿಡ್ ಸೋಂಕು ಉಲ್ಬಣವಾಗಿದ್ದು, ಮೇ ತಿಂಗಳಲ್ಲೇ ಶೇ.40ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.ಅಧಿಕೃತ ಮೂಲಗಳ ಪ್ರಕಾರ ಏಪ್ರಿಲ್‌ನಿಂದ ಚೀನಾ ದೇಶಾದ್ಯಂತದ ಆಸ್ಪತ್ರೆಗಳಲ್ಲಿ ಕೋವಿಡ್ -19 ರೋಗನಿರ್ಣಯ ಮಾಡಿದ ಜನರ ಸಂಖ್ಯೆಯಲ್ಲಿ ಐದು ಪಟ್ಟು ಹೆಚ್ಚು ಏರಿಕೆ ಕಂಡಿದೆ. ಚೈನೀಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ದತ್ತಾಂಶವನ್ನು ಬಿಡುಗಡೆ ಮಾಡಿದ್ದು, ಇದು ಮೇ ತಿಂಗಳ ಅಂತ್ಯದಲ್ಲಿ ಪರೀಕ್ಷಿಸಲ್ಪಟ್ಟವರ (ಕೋವಿಡ್ ಪರೀಕ್ಷೆ) ಪೈಕಿ ಶೇಕಡಾ 40 ಕ್ಕಿಂತ ಹೆಚ್ಚು ಜನರು ಸೋಂಕಿಗೆ ತುತ್ತಾಗಿರುವುದು ಕಂಡುಬಂದಿದೆ ಎಂದು ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ.ಇದನ್ನೂ ಓದಿ: ಮತ್ತೆ ರೇಸ್ ಶುರು: ವರ್ಷದಲ್ಲಿ 60 ಅಣ್ವಸ್ತ್ರ ನಿರ್ಮಾಣಕ್ಕ ಚೀನಾ ಮುಂದು; ಭಾರತ-ಪಾಕ್ ಸ್ಥಿತಿ ಹೇಗಿದೆ ಗೊತ್ತಾಸರ್ಕಾರದ ಅಂಕಿಅಂಶಗಳ ಪ್ರಕಾರ, ಚೀನಾವು ಮೇ ತಿಂಗಳಲ್ಲಿ ಮತ್ತೊಂದು ಕೋವಿಡ್ -19 ಅಲೆಗೆ ತುತ್ತಾಗಿದ್ದು, ಇದು 2022 ರ ಕೊನೆಯಲ್ಲಿ ಸಾಂಕ್ರಾಮಿಕ ಹಿಟ್ ಸಮಯದಲ್ಲಿ ಕಂಡುಬಂದ ಗರಿಷ್ಠ ಪ್ರಮಾಣಕ್ಕೆ ಹೋಲಿಸಿದರೆ ಹೆಚ್ಚು ಪಾಸಿಟಿವಿಟಿ ಪ್ರಮಾಣವನ್ನು ಹೊಂದಿತ್ತು ಎಂದು ಹೇಳಲಾಗಿದೆ. ಕೋವಿಡ್ -19 ಸೋಂಕಿಗೆ ಒಳಗಾದವರಲ್ಲಿ ಚೀನಾ ಮೇ ತಿಂಗಳಲ್ಲಿ 164 ಸಾವುಗಳನ್ನು ವರದಿ ಮಾಡಿದೆ. ಇದಲ್ಲದೆ, ದಿ ಸ್ಟ್ರೈಟ್ಸ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, 2,777 ಜನರು ತೀವ್ರ ಸೋಂಕಿಗೆ ಒಳಗಾಗಿದ್ದಾರೆ ಮತ್ತು ತಿಂಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹಿಂದೂ ಮಹಾಸಾಗರದಲ್ಲಿ ಮುಳುಗಿದ ಹಡಗು: ರಕ್ಷಣೆಗೆ ಧಾವಿಸಿದ ಭಾರತಕ್ಕೆ ಚೀನಾ ಶ್ಲಾಘನೆಸ್ಟ್ರೈಟ್ಸ್ ಟೈಮ್ಸ್ ಸಿಂಗಾಪುರ ಮೂಲದ ಇಂಗ್ಲಿಷ್ ಭಾಷೆಯ ದೈನಂದಿನ ಪತ್ರಿಕೆಯಾಗಿದೆ.