ಪಟ್ಟಾಭಿಷೇಕ: ಪ್ರಮಾಣ ವಚನ ಸ್ವೀಕರಿಸಿದ ಬ್ರಿಟನ್ ರಾಜ ಚಾರ್ಲ್ಸ್ ಬ್ರಿಟನ್ ನ ರಾಜ 3 ನೇ ಚಾರ್ಲ್ಸ್ ಪಟ್ಟಾಭಿಷೇಕ ಕಾರ್ಯಕ್ರಮ ಇಂದು ನಡೆಯಿತು. ಲಂಡನ್: ಬ್ರಿಟನ್ ನ ರಾಜ 3 ನೇ ಚಾರ್ಲ್ಸ್ ಪಟ್ಟಾಭಿಷೇಕ ಕಾರ್ಯಕ್ರಮ ಇಂದು ನಡೆಯಿತು.ಇಂಗ್ಲೇಂಡ್ ನ ಕ್ಯಾಂಟರ್ ಬರಿ ಚರ್ಚ್ ನ ಆರ್ಚ್ ಬಿಷಪ್ ಜಸ್ಟಿನ್ ವೆಲ್ಬಿ ನೇತೃತ್ವದಲ್ಲಿ ಚಾರ್ಲ್ಸ್ ಗೆ ಕಿರೀಟ ಧಾರಣೆ ಮಾಡುವ ಮೂಲಕ ಪಟ್ಟಾಭಿಷೇಕ ಕಾರ್ಯಕ್ರಮ ಸಂಪನ್ನಗೊಂಡಿತು. ಕಿರೀಟ ಧಾರಣೆಯ ಬಳಿಕ ಆರ್ಚ್ ಬಿಷಪ್ ರಾಜನಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.: ವೆಸ್ಟ್‌ಮಿನಿಸ್ಟರ್ ನಲ್ಲಿ ಕಿಂಗ್ ಚಾರ್ಲ್ಸ್ ಐತಿಹಾಸಿಕ ಪಟ್ಟಾಭಿಷೇಕ; ಫೋಟೋಗಳು1300 ರಲ್ಲಿ ತಯಾರಾದ ಸಿಂಹಾಸನದ ಮೇಲೆ ಆಸೀನಗೊಳಿಸಿ ಚಾರ್ಲ್ಸ್ ಗೆ ಪಟ್ಟಾಭಿಷೇಕ ನೆರವೇರಿಸಲಾಯಿತು. ಈ ಸಿಂಹಾಸನವನ್ನು ಮೊದಲನೇ ಕಿಂಗ್ ಎಡ್ವರ್ಡ್ ಸ್ಕಾಟ್ಲೆಂಡ್ ಸಾಮ್ರಾಜ್ಯವನ್ನು ವಶಪಡಿಸಿಕೊಂಡ ನೆನಪಿನೊಂದಿಗೆ ಗುರುತಿಸಲಾಗುತ್ತದೆ.