ಬಾಂಗ್ಲಾದೇಶ ಸೆಲೆಬ್ರಿಟಿ ಲೀಗ್ ವೇಳೆ ಹೊಡೆದಾಟ: ಹಲವರಿಗೆ ಗಾಯ, 6 ಮಂದಿ ಆಸ್ಪತ್ರೆಗೆ ದಾಖಲು ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಸೆಲೆಬ್ರಿಟಿ ಲೀಗ್ ಅಕ್ಷರಶಃ ರೆಸ್ಲಿಂಗ್ ರಣಾಂಗಣವಾಗಿ ಮಾರ್ಪಟ್ಟಿದ್ದು, ಪರಸ್ಪರ ಸಂಘರ್ಷದಲ್ಲಿ 6ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಸೆಲೆಬ್ರಿಟಿ ಲೀಗ್ ಅಕ್ಷರಶಃ ರೆಸ್ಲಿಂಗ್ ರಣಾಂಗಣವಾಗಿ ಮಾರ್ಪಟ್ಟಿದ್ದು, ಪರಸ್ಪರ ಸಂಘರ್ಷದಲ್ಲಿ 6ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ಹೌದು.. ಬಾಂಗ್ಲಾದೇಶ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ ವೇಳೆ ಆಟಗಾರರ ನಡುವೆ ಗಲಾಟೆ ನಡೆದಿದ್ದು,‌ ಹಲವು ಕಲಾವಿದರು ಗಾಯಗೊಂಡಿದ್ದಾರೆ. ಈ ಪೈಕಿ 6 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್-ಅನುಷ್ಕಾ? ಫೋಟೋ ಶೇರ್ ಮಾಡದಂತೆ ಮನವಿ!ಮೂಲಗಳ ಪ್ರಕಾರ ಬಾಂಗ್ಲಾ ಚಲನಚಿತ್ರ ನಿರ್ಮಾಪಕರಾದ ಮೊಸ್ತಫಾ ಕಮಲ್ ರಾಝ್ ಮತ್ತು ದೀಪಂಕರ್ ಡಿಪೋನ್ ತಂಡದ ನಡುವಿನ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಅಂಪೈರ್‌ನ ತಪ್ಪು ನಿರ್ಧಾರದ ಹಿನ್ನೆಲೆಯಲ್ಲಿ ಈ ಜಗಳ ನಡೆದಿದೆ ಎನ್ನಲಾಗಿದ್ದು, ಸೆಮಿ ಫೈನಲ್‌ಗೂ ಮುನ್ನವೇ ಆಟವನ್ನು ರದ್ದು ಮಾಡಲಾಗಿದೆ. . ’ . , 6 !!! ../brEYCKzIw3