ತಾರತಮ್ಯ ಆರೋಪ: ಬರ್ಲಿನ್ ಸಾರ್ವಜನಿಕ ಈಜುಕೊಳಗಳಲ್ಲಿ 'ಪುರುಷರಂತೆ ಮಹಿಳೆಯರಿಗೂ ಮೇಲ್ವಸ್ತ್ರ ಇಲ್ಲದೇ ಸ್ನಾನ ಮಾಡಲು ಅವಕಾಶ'! ಜರ್ಮನಿ ರಾಜಧಾನಿ ಬರ್ಲಿನ್‌ ನಗರದ ಈಜುಕೊಳಗಳಲ್ಲಿ ಪುರುಷರಂತೆ ಮಹಿಳೆಯರು ಕೂಡ ಟಾಪ್‌ಲೆಸ್‌ ಆಗಿ ಸ್ನಾನ ಮಾಡಲು ಅವಕಾಶ ನೀಡಲಾಗಿದೆ. ಬರ್ಲಿನ್: ಜರ್ಮನಿ ರಾಜಧಾನಿ ಬರ್ಲಿನ್‌ ನಗರದ ಈಜುಕೊಳಗಳಲ್ಲಿ ಪುರುಷರಂತೆ ಮಹಿಳೆಯರು ಕೂಡ ಟಾಪ್‌ಲೆಸ್‌ ಆಗಿ ಸ್ನಾನ ಮಾಡಲು ಅವಕಾಶ ನೀಡಲಾಗಿದೆ.ಹೌದು.. ಲಿಂಗ ತಾರತಮ್ಯದ ಗಂಭೀರ ಆರೋಪ ಮತ್ತು ಪ್ರತಿರೋಧಗಳ ವ್ಯಕ್ತವಾದ ಹಿನ್ನಲೆಯಲ್ಲಿ ಬರ್ಲಿನ್ ಆಡಳಿತ ನಗರದ ಈಜುಕೊಳಗಳಲ್ಲಿ ಪುರುಷರಂತೆ ಮಹಿಳೆಯರು ಕೂಡ ಟಾಪ್‌ಲೆಸ್‌ ಆಗಿ ಸ್ನಾನ ಮಾಡಬಹುದು ಎಂದು ನಿಯಮ ಹೊರಡಿಸಿದೆ.ಈಜುಕೊಳವೊಂದರಲ್ಲಿ ಟಾಪ್‌ಲೆಸ್‌ ಆಗಿ ಸ್ನಾನ ಮಾಡಲು ಅವಕಾಶ ನಿರಾಕರಿಸಿದ್ದರಿಂದ ಮಹಿಳೆಯೊಬ್ಬರು ದೂರು ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಮಹಿಳೆಯರು ಕೂಡ ಮೇಲ್ವಸ್ತ್ರ ಧರಿಸದೇ ಸ್ನಾನ ಮಾಡಬಹುದು ಎಂದು ಆದೇಶ ಹೊರಡಿಸಲಾಗಿದೆ.ಈಜುಕೊಳಗಳಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನತೆ ಕಲ್ಪಿಸಬೇಕು. ಅವರಂತೆ ಮಹಿಳೆಯರಿಗೂ ಕೂಡ ಮೇಲ್ವಸ್ತ್ರ ಇಲ್ಲದೇ ಸ್ನಾನ ಮಾಡಲು ಅವಕಾಶ ನೀಡಬೇಕು ಎಂದು ತಮ್ಮ ಗುರುತು ಬಹಿರಂಗಪಡಿಸಲು ಒಲ್ಲದ ಮಹಿಳೆಯರೊಬ್ಬರು ಸೆನೆಟ್‌ಗೆ ದೂರು ನೀಡಿದ್ದರು.ಇದೀಗ ಈ ಕುರಿತು ಆದೇಶ ಹೊರಡಿಸಲಾಗಿದ್ದು, ನ್ಯಾಯ, ವೈವಿಧ್ಯತೆ ಹಾಗೂ ತಾರತಮ್ಯ ವಿರೋಧಿ ನಿಲುವಿನಿಂದಾಗಿ ಮಹಿಳೆಯರು ಕೂಡ ‍ಪುರುಷರಂತೆ ಮೇಲ್ವಸ್ತ್ರ ಇಲ್ಲದೆಯೇ ಈಜುಕೊಳಗಲ್ಲಿ ಸ್ನಾನ ಮಾಡಬಹುದು ಎಂದು ಸೆನೆಟ್‌ ಆದೇಶ ಹೊರಡಿಸಿದೆ.ಇದನ್ನೂ ಓದಿ: ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಿಂದ ಬೊರ್ನಿಯೊಗೆ ಶಿಫ್ಟ್: ಕಾರಣವೇನು ಗೊತ್ತೇ?ಇನ್ನು ಬೇಡರ್‌ಬೆಟ್ರೀಬ್‌ನ ನಿರ್ಧಾರವನ್ನು ಬರ್ಲಿನ್ ನ ಓಂಬುಡ್ಸ್‌ಪರ್ಸನ್‌ನ ಕಛೇರಿಯು ಸ್ವಾಗತಿಸಿದ್ದು, ಇದು ಎಲ್ಲಾ ಬರ್ಲಿನರ್‌ಗಳಿಗೆ ಸಮಾನ ಹಕ್ಕುಗಳನ್ನು ಸ್ಥಾಪಿಸುತ್ತದೆ, ಗಂಡು, ಹೆಣ್ಣು ಅಥವಾ ಬೈನರಿ ಅಲ್ಲ, ಮತ್ತು ಇದು ಬೇಡರ್‌ಬೆಟ್ರೀಬ್‌ ನಲ್ಲಿರುವ ಸಿಬ್ಬಂದಿಗೆ ಕಾನೂನು ಖಚಿತತೆಯನ್ನು ಸೃಷ್ಟಿಸುತ್ತದೆ" ಎಂದು ಓಂಬುಡ್ಸ್‌ಪರ್ಸನ್ ಕಚೇರಿಯ ಮುಖ್ಯಸ್ಥ ಡೋರಿಸ್ ಲೀಬ್ಸ್ಚರ್ ಹೇಳಿದ್ದಾರೆ.ಕಳೆದ ವರ್ಷ, ಉತ್ತರ ರೈನ್-ವೆಸ್ಟ್‌ಫಾಲಿಯಾದಲ್ಲಿನ ಸೀಗೆನ್ ಮತ್ತು ಲೋವರ್ ಸ್ಯಾಕ್ಸೋನಿಯಲ್ಲಿ ಗಾಟ್ಟಿಂಗನ್ ಸೇರಿದಂತೆ ಸಾರ್ವಜನಿಕ ಸ್ವಿಮ್ಮಿಂಗ್ ಪೂಲ್‌ಗಳಲ್ಲಿ ಟಾಪ್‌ಲೆಸ್ ಆಗಿ ಈಜುವುದನ್ನು ಹಲವಾರು ನಗರಗಳು ಪರಿಚಯಿಸಿವೆ. ಆದರೆ ಅದೇ ವರ್ಷ, ಲೋವರ್ ಸ್ಯಾಕ್ಸೋನಿ ರಾಜ್ಯದ ರಾಜಧಾನಿ ಹ್ಯಾನೋವರ್ ತನ್ನ ಸ್ನಾನದ ನಿಯಮಗಳನ್ನು ಬದಲಾಯಿಸಿತ್ತು. ಪುರಸಭೆಯ ಸ್ನಾನದ ಪ್ರದೇಶದಲ್ಲಿ ಪ್ರಾಥಮಿಕ ಲೈಂಗಿಕ ಅಂಗಗಳನ್ನು ಮುಚ್ಚಬೇಕು ಎಂದು ಆದೇಶಿಸಿತ್ತು.