ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದು: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌! ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿದ್ದಾರೆ. ವಾಷಿಂಗ್ಟನ್: ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿದ್ದಾರೆ.ಅಮೆರಿಕ ಅಧ್ಯಕ್ಷ ಜೋ ಬಿಡನ್ ಪಾಕಿಸ್ತಾನವನ್ನು ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದು ಎಂದು ಹೇಳಿಕೆ ನೀಡಿದ್ದು, ಶುಕ್ರವಾರ ನಡೆದ ಕಾಂಗ್ರೆಷನಲ್ ಕ್ಯಾಂಪೇನ್ ಕಮಿಟಿ ಸ್ವಾಗತ ಕಾರ್ಯಕ್ರಮದ ವೇಳೆ ಡೆಮಾಕ್ರಟಿಕ್ ಅಧ್ಯಕ್ಷರ ಭಾಷಣವನ್ನು ಶ್ವೇತಭವನದ ಹೇಳಿಕೆ ಉಲ್ಲೇಖಿಸಿದೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ -16: ಯಾರನ್ನೂ ಮೂರ್ಖರಾಗಿಸಲು ಸಾಧ್ಯವಿಲ್ಲ, ಅವರು ಎಲ್ಲಿ ಬಳಸುತ್ತಾರೆ ಎಂದು ಎಲ್ಲರಿಗೂ ಗೊತ್ತು; ಅಮೆರಿಕಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ'ನನ್ನ ಪ್ರಕಾರ ಬಹುಶಃ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದಾಗಿದೆ. ಈ ದೇಶವು ಯಾವುದೇ ಒಗ್ಗಟ್ಟು ಇಲ್ಲದೇ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಷ್ಯಾ-ಉಕ್ರೇನ್ ಸಂಘರ್ಷ ಮತ್ತು ಅದು ಜಗತ್ತಿನ ಮೇಲೆ ಹೇಗೆ ಪ್ರಭಾವ ಬೀರಿದೆ ಎಂಬುದರ ಕುರಿತು ಮಾತನಾಡುವಾಗ ಅಮೆರಿಕ ಅಧ್ಯಕ್ಷರು ಸ್ವಾಗತ ಸಮಾರಂಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಈ ವೇಳೆ ಅವರು ಇತರ ದೇಶಗಳೊಂದಿಗೆ ವಾಷಿಂಗ್ಟನ್‌ನ ಸಂಬಂಧಗಳ ಬಗ್ಗೆಯೂ ಬೈಡೆನ್ ಮಾತನಾಡಿದ್ದಾರೆ.ಅಪಾಯಕಾರಿ ರಾಷ್ಟ್ರಕ್ಕೆ ತನ್ನ -16 ಯುದ್ಧ ವಿಮಾನ ಕೊಟ್ಟಿದ್ದೇಕೆ? ಅಮೆರಿಕ ಮಗು ಚಿವುಟಿ, ತೊಟ್ಟಿಲು ತೂಗುವ ಕೆಲಸವನ್ನು ಅಮೆರಿಕ ಮಾಡುತ್ತಿದೆ. ಒಂದೆಡೆ ಪಾಕಿಸ್ತಾನದ ಸೇನೆಗೆ ಎಫ್‌16 ನಿವರ್ಹಣೆಗಳಗಾಗಿ ಮಿಲಿಯನ್‌ ಗಟ್ಟಲೆ ಆರ್ಥಿಕ ನೆರವು ನೀಡಿದ್ದಕ್ಕಾಗಿ ಭಾರತದಿಂದ ತೀವ್ರ ಆಕ್ರೋಶಕ್ಕೆ ತುತ್ತಾಗಿರುವ ಅಮೆರಿಕ, ಈಗ ಪಾಕಿಸ್ತಾನ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದು ಹೇಳಿದೆ. ಇದನ್ನೂ ಓದಿ: ಅಮೆರಿಕ ವಿಮಾನ ನಿಲ್ದಾಣದಲ್ಲಿ ಪಾಕ್ ಸಚಿವರಿಗೆ ಘೇರಾವ್; ಸುಳ್ಳುಗಾರ, ಚೋರ್ ಎಂದು ಗೇಲಿಈ ವಾರದ ಆರಂಭದಲ್ಲಿ ಪಾಕಿಸ್ತಾನವನ್ನು ಅಮೆರಿಕದ ಅತ್ಯಂತ ಪ್ರಮುಖ ಮಿತ್ರರಾಷ್ಟ್ರ ಎಂದು ಹೇಳಿದ್ದರೂ, ಯುಎಸ್ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ 2022 ರಲ್ಲಿ( 2022) ಪಾಕಿಸ್ತಾನದ (, ) ಹೆಸರು ಇದ್ದಿರಲಿಲ್ಲ. ಭದ್ರತಾ ಕಾರ್ಯತಂತ್ರದಲ್ಲಿ ಚೀನಾವನ್ನು () ಅಮೆರಿಕದ ಅತ್ಯಂತ ಪರಿಣಾಮಕಾರಿ ಭೌಗೋಳಿಕ ರಾಜಕೀಯ ಸವಾಲು ಎಂದು ಹೇಳಲಾಗಿತ್ತು.ಚೀನಾ ಸಂಬಂಧದ ಬಗ್ಗೆ ಬೈಡೆನ್ ಮಾತು ಚೀನಾದೊಂದಿಗಿನ ಅವರ ಸಂಬಂಧದ ಬಗ್ಗೆ ಮಾತನಾಡಿದ ಜೋ ಬೈಡೆನ್, ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸೇರಿ ಒಟ್ಟಾಗಿ ಕೆಲಸ ಮಾಡುವಂತೆ ನಿಯೋಜಿಸಿದ್ದಾರೆ ಎಂದು ಹೇಳಿದರು. "ನಾನು ಕ್ಸಿ ಜಿನ್‌ಪಿಂಗ್ ಅವರೊಂದಿಗೆ ವಿಶ್ವದ ಯಾವುದೇ ವ್ಯಕ್ತಿಗಿಂತ ಹೆಚ್ಚು ಸಮಯವನ್ನು ಕಳೆದಿದ್ದೇನೆ. ಅಮೆರಿಕದ ಯಾವುದೇ ಅಧ್ಯಕ್ಷ ಅವರೊಂದಿಗೆ ಹೆಚ್ಚಿನ ಸಮಯ ಕಳೆದಿಲ್ಲ. ಬಹುಶಃ ನಾನು ಅವರೊಂದಿಗೆ ಕಳೆದ ಒಟ್ಟಾರೆ ಗಂಟೆಗಳೂ ನೆನಪಿದೆ ಬಹುಶಃ 78 ಗಂಟೆಗಳು' ಎಂದು ಅವರು ಹೇಳಿದ್ದಾರೆ. ಅದರಲ್ಲಿ 68 ಬಾರಿ ವ್ಯಕ್ತಿಗತವಾಗಿ ಅವರನ್ನು ಕಳೆದ 10 ವರ್ಷದಲ್ಲಿ ಭೇಟಿಯಾಗಿದ್ದೇನೆ. ಯಾಕೆಂದರೆ ಅಧ್ಯಕ್ಷರಾಗಿ ಜಿನ್‌ಪಿಂಗ್‌ ಅವರೊಂದಿಗೆ ಮುಕ್ತ ವ್ಯವಹಾರ ಸಾಧ್ಯವಾಗುವುದಿಲ್ಲ. ಹಾಗಾಗಿ ನನಗೆ ಈ ಕೆಲಸ ನೀಡಿದ್ದರು ಎಂದು ಬೈಡೆನ್‌ ಹೇಳಿದ್ದಾರೆ.ಇದನ್ನೂ ಓದಿ: ಭಾರತ ಅಮೆರಿಕ ಜೊತೆ ಹೆಚ್ಚೆಚ್ಚು ವ್ಯಾಪಾರ-ವಹಿವಾಟು ನಡೆಸಲು ಸಿದ್ಧವಿದೆ: ವಿದೇಶಾಂಗ ಸಚಿವ ಎಸ್ ಜೈಶಂಕರ್ಪುಟಿನ್ ವಿರುದ್ಧ ಕಿಡಿ ಉಕ್ರೇನ್ ಮೇಲಿನ ರಷ್ಯಾದ () ಆಕ್ರಮಣದ ಕುರಿತು ಮಾತನಾಡಿದ ಬೈಡೆನ್, ವ್ಲಾಡಿಮಿರ್ ಪುಟಿನ್ ಯುದ್ಧತಂತ್ರವಾಗಿ ಪರಮಾಣು ಅಸ್ತ್ರವನ್ನು ಬಳಸಿದರೆ ಜಗತ್ತು "ಆರ್ಮಗೆಡ್ಡೋನ್" ಅನ್ನು ಎದುರಿಸಬಹುದು. ರಷ್ಯಾ, ಉಕ್ರೇನ್‌ ಅನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಈ ಆಕ್ರಮಣಗಳನ್ನು ಮಾಡುತ್ತಿಲ್ಲ. ಅವರ ಉದ್ದೇಶ, ನಾರ್ಥ್‌ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆಯನ್ನು (ನ್ಯಾಟೋ) ವಿಭಜಿಸುವುದು. ಪುಟಿನ್ ನಿರ್ಧರಿಸಿದ ಒಂದು ವಿಷಯವೆಂದರೆ ನಾವು ನ್ಯಾಟೋವನ್ನು ವಿಭಜಿಸುವುದು. ಇದು ತಮಾಷೆಯಾಗಿ ಹೇಳುತ್ತಿಲ್ಲ. ನ್ಯಾಟೋವನ್ನು () ವಿಭಜಿಸುವುದು ಅವರ ತಂತ್ರ, ಅದರಲ್ಲಿ ಅವರು ಯಶಸ್ವಿಯೂ ಆಗುತ್ತಿರುವಂತೆ ಕಾಣುತ್ತಿದೆ. ನ್ಯಾಟೋದ ಪೂರ್ವ ಮುಂಭಾಗದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ" ಎಂದು ಜೋ ಬೈಡೆನ್ ಕಳವಳ ವ್ಯಕ್ತಪಡಿಸಿದ್ದಾರೆ.