ಫ್ರೆಂಚ್ ಪತ್ರಕರ್ತ, ಸುದ್ದಿವಾಹಿನಿ ನಿರೂಪಕ ಅಧ್ಯಕ್ಷೀಯ ಅಭ್ಯರ್ಥಿ: ಪ್ಯಾರಿಸ್ ನಲ್ಲಿ ಪ್ರಚಾರ ಶುರು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್ ಎರಡನೇ ಅವಧಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದರೂ, ಅವರಿನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಪ್ಯಾರಿಸ್: ಬಲಪಂಥೀಯ ನಿಲುವನ್ನು ಹೊಂದಿರುವ ಫ್ರೆಂಚ್ ಪತ್ರಕರ್ತ, ಸುದ್ದಿವಾಹಿನಿ ನಿರೂಪಕ ಎರಿಕ್ ಜೆಮ್ಮೊರ್ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಇತ್ತೀಚಿಗಷ್ಟೆ ಅವರು ಮುಂಬರಲಿರುವ ಅಧ್ಯಕ್ಷೀಯ ಚುನಾವಣಾ ಕಣದಲ್ಲಿ ತಾವೂ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಇದನ್ನೂ ಓದಿ: ಪಾಕಿಸ್ತಾನ: ಮೃತ ಶ್ರೀಲಂಕಾ ಪ್ರಜೆಯ ಬಹುತೇಕ ಮೂಳೆಗಳು ಮುರಿತ: ಪ್ರಧಾನಿ ಇಮ್ರಾನ್ ಖಾನ್ ನ್ಯಾಯದ ಭರವಸೆ63 ವರ್ಷದ ಎಇಕ್ ಅವರು ಕಟ್ಟರ್ ಬಲಪಂಥೀಯವಾದಿಯಾಗಿದ್ದು, ವಿದೇಶಿ ವಲಸೆಯನ್ನು ಖಂಡಿಸುತ್ತಾರೆ. ಅವರ ಚುನಾವಣಾ ಪ್ರಚಾರ ದಿನದಂದೇ ಅವರ ವಿರೋಧಿಗಳು ಪ್ರತಿಭಟನೆ ನಡೆಸಿದ್ದು ವಿಶೇಷ. ಇದನ್ನೂ ಓದಿ: ಪಾಕಿಸ್ತಾನಕ್ಕೆ 22,572 ಕೋಟಿ ರೂ. ಸಾಲ ನೀಡಿದ ಸೌದಿ ಅರೇಬಿಯಾ: ಪಾಕ್ ಆರ್ಥಿಕ ಸುಸ್ಥಿರತೆಗೆ ಸಹಾಯಬಲಪಂಥೀಯವಾದವನ್ನು ಫ್ರೆಂಚರು ತಿರಸ್ಕರಿಸುತಾರೆ ಎನ್ನುವ ಫಲಕಗಳನ್ನು ಎರಿಕ್ ವಿರೋಧಿಗಳು ಪ್ರದರ್ಶನ ಮಾಡಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್ ಎರಡನೇ ಅವಧಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದರೂ, ಅವರಿನ್ನೂ ಅಧಿಕೃತವಾಗಿ ಘೋಷಿಸಿಲ್ಲ.ಇದನ್ನೂ ಓದಿ: ಇಸ್ರೇಲ್ ನ ಟೆಲ್ ಅವಿವ್ ವಿಶ್ವದ ನಂ.1 ದುಬಾರಿ ನಗರ: ನಂತರದ ಸ್ಥಾನಗಳಲ್ಲಿ ಪ್ಯಾರಿಸ್, ಸಿಂಗಪೂರ್