ನೇಪಾಳದ ಜಿಲ್ಲೆಯೊಂದರಲ್ಲಿ ಭಾರೀ ತೀವ್ರತೆಯ ಭೂಕಂಪ: ಸಾವಿನ ಸಂಖ್ಯೆ 6ಕ್ಕೆ ಏರಿಕೆ ನೇಪಾಳ ರಾಜ್ಯದ ದೋತಿ ಜಿಲ್ಲೆಯಲ್ಲಿ ಕಳೆದ ತಡರಾತ್ರಿ ಮತ್ತು ಇಂದು ಬುಧವಾರ ನಸುಕಿನ ಜಾವ ಸಂಭವಿಸಿದ ತೀವ್ರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೇರಿದೆ. ಭೂಕಂಪನಕ್ಕೆ ಮನೆಯೊಂದು ಕುಸಿದು ಬಿದ್ದು ಈ ಅವಘಡ ಸಂಭವಿಸಿದೆ ಎಂದು ದೋತಿ ಜಿಲ್ಲಾಧಿಕಾರಿ ಕಲ್ಪನಾ ಶ್ರೇಷ್ಟ ತಿಳಿಸಿದ್ದಾರೆ. ಕಠ್ಮಂಡು: ನೇಪಾಳ ರಾಜ್ಯದ ದೋತಿ ಜಿಲ್ಲೆಯಲ್ಲಿ ಕಳೆದ ತಡರಾತ್ರಿ ಮತ್ತು ಇಂದು ಬುಧವಾರ ನಸುಕಿನ ಜಾವ ಸಂಭವಿಸಿದ ತೀವ್ರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೇರಿದೆ. ಭೂಕಂಪನಕ್ಕೆ ಮನೆಯೊಂದು ಕುಸಿದು ಬಿದ್ದು ಈ ಅವಘಡ ಸಂಭವಿಸಿದೆ ಎಂದು ದೋತಿ ಜಿಲ್ಲಾಧಿಕಾರಿ ಕಲ್ಪನಾ ಶ್ರೇಷ್ಟ ತಿಳಿಸಿದ್ದಾರೆ.ಇನ್ನು ದುರ್ಘಟನೆಯಲ್ಲಿ ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಜಿಲ್ಲೆಯ ಹಲವು ಕಡೆಗಳಲ್ಲಿ ಭೂಕಂಪನಕ್ಕೆ ಭೂಕುಸಿತವುಂಟಾಗಿ ಹತ್ತಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿದೆ ಎಂದು ಹೇಳಿದರು. | . ../sPafgFC8Zlಅಧಿಕಾರಿಗಳು ಹೇಳುವ ಪ್ರಕಾರ, ಮೃತಪಟ್ಟವರಲ್ಲಿ ಒಬ್ಬರು ಮಹಿಳೆಯರಾಗಿದ್ದು ಇಬ್ಬರು ಮಕ್ಕಳು ಸೇರಿದ್ದಾರೆ. ಇನ್ನು ಕಂಪನಕ್ಕೆ ಉಂಟಾಗಿರುವ ಸಾವು-ನೋವಿನ ಬಗ್ಗೆ ನಿಖರವಾದ ಮಾಹಿತಿ ಸಿಗಬೇಕಿದೆ.# | . (: ) ../iPY0e8qSMKದುರ್ಘಟನೆಯ ಸ್ಥಳಕ್ಕೆ ನೇಪಾಳ ಸೇನೆ ಧಾವಿಸಿ ಅಗತ್ಯ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.3ರಷ್ಟು ದಾಖಲಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3ರಷ್ಟು ಇಂದು ನಸುಕಿನ ಜಾವ ಉಂಟಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೆಸ್ಮಾಲಜಿ ಟ್ವೀಟ್ ಮಾಡಿದೆ.ಘಟನೆ ಕುರಿತು ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ತೀವ್ರ ಕಂಬನಿ ಮಿಡಿದಿದ್ದಾರೆ. ಭೂಕಂಪದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪಗಳು. ಪ್ರದೇಶಗಳಲ್ಲಿ ಗಾಯಗೊಂಡವರು ಮತ್ತು ಸಂತ್ರಸ್ತರಿಗೆ ತಕ್ಷಣದ ಮತ್ತು ಸರಿಯಾದ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ನಾನು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.सुदूरपश्चिमको खप्तड क्षेत्र केन्द्रविन्दु बनाई गएको भूकम्पमा परि मृत्यु हुनेहरुप्रति हार्दिक श्रदाञ्जली व्यक्त गर्दै परिवारजनमा समवेदना प्रकट गर्दछु । साथै प्रभावित क्षेत्रमा राहत र उद्दारमा खटिन र घाईतेहरुको तत्काल उचित उपचारको प्रबन्ध गर्न सम्बन्धित निकायलाई निर्देशन दिएको छु।ಉತ್ತರಾಖಂಡ, ಉತ್ತರ ಪ್ರದೇಶ ಹಾಗೂ ಭಾರತದ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದರ ಉಪನಗರಗಳಾದ ಗುರುಗ್ರಾಮ್ ಮತ್ತು ಘಾಜಿಯಾಬಾದ್ ಸೇರಿದಂತೆ ಉತ್ತರ ಭಾರತದಾದ್ಯಂತ ಕಂಪನದ ಅನುಭವವಾಗಿದೆ. ಇದಕ್ಕೂ ಮುನ್ನ, ಅದೇ ಭೂಕಂಪನ ಕೇಂದ್ರದ ಪ್ರಕಾರ, ನಿನ್ನೆ ರಾತ್ರಿ 9.07 ಕ್ಕೆ 5.7- ತೀವ್ರತೆಯ ಕಂಪನ ಮತ್ತು ರಾತ್ರಿ 9.56 ಕ್ಕೆ 4.1- ತೀವ್ರತೆಯ ಕಂಪನ ದಾಖಲಾಗಿತ್ತು. ಏಪ್ರಿಲ್ 2015 ರಲ್ಲಿ, ನೇಪಾಳದಲ್ಲಿ 7.8 ತೀವ್ರತೆಯ ವಿನಾಶಕಾರಿ ಭೂಕಂಪವು ಸುಮಾರು 9,000 ಜನರನ್ನು ಬಲಿ ತೆಗೆದುಕೊಂಡಿತ್ತು. ಸುಮಾರು 22,000 ಜನರು ಗಾಯಗೊಂಡಿದ್ದರು. 8 ಲಕ್ಷ ಮನೆಗಳು ಮತ್ತು ಶಾಲಾ ಕಟ್ಟಡಗಳು ಹಾನಿಗೀಡಾಗಿದ್ದವು.