ರಸಾಯನಶಾಸ್ತ್ರ: ಬೆಂಜಮಿನ್ ಲಿಸ್ಟ್, ಡೇವಿಡ್ ಮ್ಯಾಕ್ ಮಿಲನ್ ಗೆ ನೊಬೆಲ್ ಪ್ರಶಸ್ತಿ ರಸಾಯನಶಾಸ್ತ್ರದಲ್ಲಿ ಅಸಿಮ್ಮೆಟ್ರಿಕ್ ಆರ್ಗನೊಕಟಾಲಿಸಿಸ್ ಅಭಿವೃದ್ಧಿಗಾಗಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ವಿಜ್ಞಾನ ಪ್ರಸಕ್ತ ಸಾಲಿನ ನೊಬೆಲ್ ಪ್ರಶಸ್ತಿ ಘೋಷಿಸಿದೆ. ಸ್ಟಾಕ್‌ಹೋಮ್: ರಸಾಯನಶಾಸ್ತ್ರದಲ್ಲಿ ಅಸಿಮ್ಮೆಟ್ರಿಕ್ ಆರ್ಗನೊಕಟಾಲಿಸಿಸ್ ಅಭಿವೃದ್ಧಿಗಾಗಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ವಿಜ್ಞಾನ ಪ್ರಸಕ್ತ ಸಾಲಿನ ನೊಬೆಲ್ ಪ್ರಶಸ್ತಿ ಘೋಷಿಸಿದೆ. : 2021 # .. “ .” ../SzTJ2Chtgeರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜರ್ಮನಿಯ ಬೆಂಜಮಿನ್ ಲಿಸ್ಟ್ ಮತ್ತು ಯುಎಸ್ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಡೇವಿಡ್ ಡಬ್ಲ್ಯೂಸಿ ಮ್ಯಾಕ್‌ಮಿಲನ್‌ ಅವರಿಗೆ ನೀಡಲಾಗಿದೆ. "ಅಣುಗಳನ್ನು ನಿರ್ಮಿಸುವುದು ಒಂದು ಕಷ್ಟಕರ ಕಲೆ. ಬೆಂಜಮಿನ್ ಲಿಸ್ಟ್ ಮತ್ತು ಡೇವಿಡ್ ಮ್ಯಾಕ್‌ಮಿಲನ್‌ಗೆ ರಸಾಯನಶಾಸ್ತ್ರದಲ್ಲಿ 2021 ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದ್ದು, ಆಣ್ವಿಕ ನಿರ್ಮಾಣಕ್ಕಾಗಿ ನಿಖರವಾದ ಹೊಸ ಉಪಕರಣ ಆರ್ಗನೊಕಟಾಲಿಸಿಸ್ ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.ಬೆಂಜಮಿನ್ ಲಿಸ್ಟ್ ಮತ್ತು ಡೇವಿಡ್ ಮ್ಯಾಕ್‌ಮಿಲನ್ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಸಾವಯವ ವೇಗವರ್ಧಕಗಳನ್ನು ರಾಸಾಯನಿಕ ಪ್ರತಿಕ್ರಿಯೆಗಳ ನಿರ್ವಹಣೆಯಲ್ಲಿ ಬಳಸಬಹುದು ಎಂದು ತೋರಿಸಲಾಗಿದೆ."ಈ ಪ್ರತಿಕ್ರಿಯೆಗಳನ್ನು ಬಳಸಿ, ಸಂಶೋಧಕರು ಈಗ ಹೊಸ ಔಷಧಿಗಳಿಂದ ಹಿಡಿದು ಸೌರ ಕೋಶಗಳಲ್ಲಿ ಬೆಳಕನ್ನು ಸೆರೆಹಿಡಿಯಬಲ್ಲ ಅಣುಗಳವರೆಗೆ ಹೆಚ್ಚು ಪರಿಣಾಮಕಾರಿಯಾಗಿ ಏನನ್ನಾದರೂ ನಿರ್ಮಿಸಬಹುದು. ಈ ರೀತಿಯಾಗಿ, ಆರ್ಗನೊಕಾಟಲಿಸ್ಟ್‌ಗಳು ಮಾನವಕುಲಕ್ಕೆ ಹೆಚ್ಚಿನ ಪ್ರಯೋಜನವನ್ನು ತರುತ್ತಿದ್ದಾರೆ" ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಹೇಳಿಕೆಯಲ್ಲಿ ತಿಳಿಸಿದೆ.