ಗಾಜಾದಲ್ಲಿ ಭಯಾನಕ ಪರಿಸ್ಥಿತಿ: 5,850 ಮಕ್ಕಳು ಸೇರಿದಂತೆ 14,800ಕ್ಕೂ ಹೆಚ್ಚು ಜನರ ಸಾವು, ಸಾಮೂಹಿಕ ಅಂತ್ಯಕ್ರಿಯೆ ಅಕ್ಟೋಬರ್ 7 ರಿಂದ ನಡೆಯುತ್ತಿರುವ ಇಸ್ರೇಲಿ ಆಕ್ರಮಣದಿಂದ ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 14,854 ಕ್ಕೆ ಏರಿದೆ. ಇದರಲ್ಲಿ 5,850 ಮಕ್ಕಳು ಸೇರಿದ್ದಾರೆ ಎಂದು ಗಾಜಾಪಟ್ಟಿಯಲ್ಲಿರುವ ಹಮಾಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. ಗಾಜಾ: ಅಕ್ಟೋಬರ್ 7 ರಿಂದ ನಡೆಯುತ್ತಿರುವ ಇಸ್ರೇಲಿ ಆಕ್ರಮಣದಿಂದ ಗಾಜಾದಲ್ಲಿ ಮೃತಪಟ್ಟವರ ಸಂಖ್ಯೆ 14,854 ಕ್ಕೆ ಏರಿದೆ. ಇದರಲ್ಲಿ 5,850 ಮಕ್ಕಳು ಸೇರಿದ್ದಾರೆ ಎಂದು ಗಾಜಾಪಟ್ಟಿಯಲ್ಲಿರುವ ಹಮಾಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. ದಾಳಿಯಲ್ಲಿ ಮೃತಪಟ್ಟವರನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಇಸ್ರೇಲ್‌ನ ನಡೆಯುತ್ತಿರುವ ವಾಯು ಮತ್ತು ಭೂ ದಾಳಿಯಿಂದಾಗಿ ಪ್ರಸ್ತುತ ಅಂಕಿಅಂಶಗಳನ್ನು ಪಡೆಯುವುದು ಸವಾಲಿನ ಕೆಲಸವಾಗಿದೆ. ರಮಲ್ಲಾದಲ್ಲಿರುವ ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ಸೋಮವಾರ 12,700, ನಿನ್ನೆ 13,000ಕ್ಕೂ ಹೆಚ್ಚು ಸಾವು ನೋವುಗಳನ್ನು ವರದಿ ಮಾಡಿತ್ತು.ಇದನ್ನೂ ಓದಿ: ಇಸ್ರೇಲ್ ವಿರುದ್ಧದ ಯುದ್ಧ, ಗಾಜಾದಲ್ಲಿ 13,000ಕ್ಕೂ ಹೆಚ್ಚು ಜನರ ಸಾವು, 6,000 ಮಂದಿ ನಾಪತ್ತೆ: ಹಮಾಸ್ ಗಾಜಾ ಪಟ್ಟಿಯ ಮೂಲಗಳಿಂದ ಡೇಟಾವನ್ನು ಸಂಗ್ರಹಿಸುತ್ತಿದೆ. ಇತ್ತೀಚಿನ ಮಾಹಿತಿಯಂತೆ ಗಾಜಾದಲ್ಲಿ ಸಂವಹನಕ್ಕೆ ಅಡ್ಡಿಯುಂಟಾಗಿದ್ದು, ನಿಖರವಾದ ಡೇಟಾ ಸಂಗ್ರಹಣೆಗೆ ತೊಂದರೆಯಾಗಿದೆ ಎಂದು ವರದಿಯು ಹೇಳಿದೆ.ಈ ಅಂಕಿಅಂಶಗಳ ಪರ ನಿಂತಿರುವ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿಯ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್ "ನಾವು ಈ ಅಂಕಿಅಂಶಗಳನ್ನು ಯಾವುದೇ ಆಲೋಚನೆಯಿಲ್ಲದೆ ಎಂದು ಹೇಳಿರುವುದಾಗಿ ಸಿಎನ್ ಎನ್ ವರದಿ ತಿಳಿಸಿದೆ.