ಜಾರ್ಜಿಯಾದಲ್ಲಿ ಬಂಧನದ ಬಳಿಕ ಟ್ರಂಪ್ ಚುನಾವಣಾ ಪ್ರಚಾರಕ್ಕೆ 7.1 ಮಿಲಿಯನ್ ಡಾಲರ್ ಸಂಗ್ರಹ ಚುನಾವಣಾ ವಂಚನೆ ಪ್ರಕರಣದಲ್ಲಿ ಟ್ರಂಪ್ ಬಂಧನಕ್ಕೊಳಗಾಗಿ ಬಿಡುಗಡೆಯಾದ ನಂತರ ಅವರ ಮುಂದಿನ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆ ಪ್ರಚಾರಕ್ಕೆ 7.1 ಮಿಲಿಯನ್ ಡಾಲರ್ ಹಣ ಸಂಗ್ರಹವಾಗಿದೆ. ನವದೆಹಲಿ: ಚುನಾವಣಾ ವಂಚನೆ ಪ್ರಕರಣದಲ್ಲಿ ಟ್ರಂಪ್ ಬಂಧನಕ್ಕೊಳಗಾಗಿ ಬಿಡುಗಡೆಯಾದ ನಂತರ ಅವರ ಮುಂದಿನ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆ ಪ್ರಚಾರಕ್ಕೆ 7.1 ಮಿಲಿಯನ್ ಡಾಲರ್ ಹಣ ಸಂಗ್ರಹವಾಗಿದೆ. ಕಳೆದ 3 ವಾರಗಳಿಂದ ಟ್ರಂಪ್ ಚುನಾವಣಾ ಪ್ರಚಾರಕ್ಕೆ 20 ಮಿಲಿಯನ್ ಡಾಲರ್ ಸಂಗ್ರಹವಾಗಿದೆ. ಜಾರ್ಜಿಯಾದಲ್ಲಿ ಟ್ರಂಪ್ ಬಂಧನಕ್ಕೊಳಗಾದ ನಂತರದ ಸಮಯವೊಂದರಲ್ಲೇ 4.18 ಮಿಲಿಯನ್ ಡಾಲರ್ ಹಣ ಸಂಗ್ರಹವಾಗಿದೆ. ಇಡೀ ಚುನಾವಣಾ ಪ್ರಚಾರದ ಚಟುವಟಿಕೆಗಳಲ್ಲಿ ಒಂದೇ ದಿನದಲ್ಲಿ ಬಂದಿರುವ ಗರಿಷ್ಠ ಪ್ರಮಾಣದ ಹಣ ಇದಾಗಿದೆ.ನಿಧಿಸಂಗ್ರಹದ ಅಂಕಿ-ಅಂಶಗಳನ್ನು ಮೊದಲು ಪೊಲಿಟಿಕೊ ವರದಿ ಮಾಡಿದೆ.ಇದನ್ನೂ ಓದಿ: ಚುನಾವಣಾ ವಂಚನೆ ಪ್ರಕರಣ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ, ಬಿಡುಗಡೆ ಟ್ರಂಪ್ ಬಂಧನದ ನಂತರ ಅವರ 2024 ರ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆ ವಿಷಯ ಮಾರಾಟದ ಸರಕಾಗಿ ಮಾರ್ಪಟ್ಟಿದ್ದು, ಮಾರ್ಚ್‌ನಿಂದ ನಾಲ್ಕು ಬಾರಿ ದೋಷಾರೋಪಣೆಗೆ ಗುರಿಯಾಗಿರುವ ಟ್ರಂಪ್, ಮತ್ತಷ್ಟು ಪ್ರಬಲರಾಗುವತ್ತ ಗಮನಹರಿಸಿದ್ದಾರೆ.ಟ್ರಂಪ್ ಬಂಧನಕ್ಕೊಳಗಾಗಿ ಬಿಡುಗಡೆಯಾದ 90 ನಿಮಿಷಗಳ ಕಾಲ ವ್ಯಾಪಕವಾಗಿ ಟಿ-ಶರ್ಟ್, ಮಗ್, ಕೂಜಿ (ಟಿನ್ ಮಾದರಿಯ ವಸ್ತು) ಬಂಪರ್ ಸ್ಟಿಕರ್ ಗಳಲ್ಲಿ ಟ್ರಂಪ್ ಫೋಟೋಗಳು ರಾರಾಜಿಸುತ್ತಿದ್ದವು, ಇದರಲ್ಲಿ ಎಂದಿಗೂ ಶರಣಾಗಬೇಡ (" !") ಎಂಬ ಸಂದೇಶವನ್ನು ಮುದ್ರಿಸಲಾಗಿತ್ತು.