ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಪ್ಯಾಲೆಸ್ತೇನ್ ಕೈದಿಗಳನ್ನು ಬಿಡುಗಡೆ ಮಾಡಿ: ಇಸ್ರೇಲ್ ಗೆ ಹಮಾಸ್ ಇಸ್ರೇಲ್ ನಲ್ಲಿ ಕೈದಿಗಳಾಗಿರುವ ಎಲ್ಲಾ ಪ್ಯಾಲೆಸ್ತೇನಿಗಳನ್ನು ಬಿಡುಗಡೆ ಮಾಡಿದರೆ ತಮ್ಮ ಬಳಿ ಇರುವ ಇಸ್ರೇಲ್ ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿದೆ. ಗಾಜಾ: ಇಸ್ರೇಲ್ ನಲ್ಲಿ ಕೈದಿಗಳಾಗಿರುವ ಎಲ್ಲಾ ಪ್ಯಾಲೆಸ್ತೇನಿಗಳನ್ನು ಬಿಡುಗಡೆ ಮಾಡಿದರೆ ತಮ್ಮ ಬಳಿ ಇರುವ ಇಸ್ರೇಲ್ ನ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿದೆ. ಗಾಜಾ ನಗರದಲ್ಲಿ ಇಸ್ರೇಲ್ ಭೂ ಸೇನೆಯ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ಬೆನ್ನಲ್ಲೇ ಹಮಾಸ್ ಈ ಬೇಡಿಕೆ ಮುಂದಿಟ್ಟಿದೆ. ಇದನ್ನೂ ಓದಿ: ಗಾಜಾದಲ್ಲಿ ತೀವ್ರ ಬಾಂಬ್ ದಾಳಿಯ ನಡುವೆ ಕಾರ್ಯಾಚರಣೆ ವಿಸ್ತರಿಸುತ್ತಿರುವ ಇಸ್ರೇಲಿ ಪಡೆಗಳು!ಹಮಾಸ್ ಬಳಿ ರಷ್ಯಾ-ಇಸ್ರೇಲಿ ಉಭಯ ದೇಶಗಳ ಪೌರತ್ವ ಹೊಂದಿರುವ 8 ನಾಗರಿಕರನ್ನುಪತ್ತೆ ಮಾಡುವುದಕ್ಕೆ ಯತ್ನಿಸುತ್ತಿರುವುದಾಗಿ ಹಮಾಸ್ ಹೇಳಿತ್ತು. ಹಮಾಸ್ ನ್ನು ಉಗ್ರ ಸಂಘಟನೆ ಎಂದು ಹೇಳದ ರಷ್ಯಾ ಜೊತೆ ಹಮಾಸ್ ಗೆ ಉತ್ತಮ ಸಂಬಂಧವಿದ್ದು, ಗಾಜಾದಲ್ಲಿ ಒತ್ತೆಯಾಳುಗಳಾಗಿರುವ ತನ್ನ ನಾಗರಿಕರನ್ನು ಬಿಡುಗಡೆ ಮಾಡಲು ರಷ್ಯಾ ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರೆಸಿದೆ.