ಮೊಸಳೆ ಕಾಲುಸೂಪ್; ತೈವಾನ್ ರೆಸ್ಟೋರೆಂಟ್ ನ ‘ಗಾಡ್ಝಿಲ್ಲಾ ರಾಮೆನ್’ ಡಿಶ್ ವೈರಲ್! ವಿದೇಶಿಗರ ಆಹಾರ ಪದ್ಧತಿ ಎಷ್ಟು ಚಿತ್ರವಿಚಿತ್ರವಾಗಿರುತ್ತವೆ ಎನ್ನುವುದಕ್ಕೆ ಇಲ್ಲೊಂದು ವಿಶೇಷ ಡಿಶ್ ಇದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಡಿಶ್ ಭಾರಿ ವೈರಲ್ ಆಗುತ್ತಿದೆ. ವಿದೇಶಿಗರ ಆಹಾರ ಪದ್ಧತಿ ಎಷ್ಟು ಚಿತ್ರವಿಚಿತ್ರವಾಗಿರುತ್ತವೆ ಎನ್ನುವುದಕ್ಕೆ ಇಲ್ಲೊಂದು ವಿಶೇಷ ಡಿಶ್ ಇದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಡಿಶ್ ಭಾರಿ ವೈರಲ್ ಆಗುತ್ತಿದೆ.ಇಂದಿನ ಆಧುನಿಕ ಯುಗದಲ್ಲಿ ಯಾವುದಾದರೂ ವಿಚಿತ್ರ ಸನ್ನಿವೇಶಗಳು ಸಾಮಾಜಿಕ ಮಾಧ್ಯಮದ ಕಣ್ಣು ತಪ್ಪಿಸಿ ಹೋಗುವುದುಂಟೇ.. ಇಲ್ಲೊಂದು ರೆಸ್ಟೋರೆಂಟ್ ನ ವಿಶೇಷ ಡಿಶ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ತೈವಾನೀಸ್ ರೆಸ್ಟೊರೆಂಟ್‌ನಿಂದ ತಯಾರಿಸಲಾದ ಈ ಖಾದ್ಯವು ವಿಶೇಷವಾಗಿ ತನ್ನ ವಿಲಕ್ಷಣ ಅಂಶದಿಂದಾಗಿ ವ್ಯಾಪಕ ವೈರಲ್ ಆಗುತ್ತಿದೆ.ತೈವಾನ್ ನ ಯುನ್ಲಿನ್ ಕೌಂಟಿಯ ಡೌಲಿಯು ಸಿಟಿಯಲ್ಲಿರುವ ರೆಸ್ಟೋರೆಂಟ್ ನಲ್ಲಿ ಈ ಡಿಶ್ ತಯಾರಿಸಲಾಗುತ್ತಿದ್ದು, ಇದಕ್ಕೆ "ಗಾಡ್ಜಿಲ್ಲಾ" ರಾಮೆನ್ ಎಂದು ಹೆಸರಿಡಲಾಗಿದೆ. ಗಾಡ್ಜಿಲ್ಲಾ" ರಾಮೆನ್ ಎಂದರೆ ಮೊಸಳೆ ಕಾಲು ಸೂಪು.. ಹೌದು ಅಕ್ಷರಶಃ ಮೊಸಳೆಯ ಕಾಲು ಸೂಪು.. ಈ ರೆಸ್ಟೋರೆಂಟ್ ನಲ್ಲಿ ಮೊಸಳೆ ಮಾಂಸಾಹಾರಗಳೇ ವಿಶೇಷವಾಗಿದ್ದು, ಪ್ರಮುಖವಾಗಿ ಮೊಸಳೆಯ ಕಾಲನ್ನು ಹಬೆಯಲ್ಲಿ ಬೇಯಿಸಿ ಸೂಪ್ ಮಾಡಿ ಗ್ರಾಹಕರಿಗೆ ನೀಡುತ್ತಾರೆ.ಇದನ್ನೂ ಓದಿ: ಅದು ಹುಲ್ಲಲ್ಲಾ...: ಹಾವು ಜಗಿಯುತ್ತಿರುವ ಜಿಂಕೆ, ಅರಣ್ಯಾಧಿಕಾರಿಗಳೇ ಹೌಹಾರುವಂತೆ ಮಾಡಿದ Videoಈ ಮೊಸಳೆ ಕಾಲು ಸೂಪ್ ನ ಬೆಲೆ 4 ಸಾವಿರ ರೂಗಳಂತೆ.. ಇದು ಪ್ರೀ ಆರ್ಡರ್ ಮಾಡಿದಲ್ಲಿ ಮಾತ್ರ ಲಭ್ಯ. ತೈವಾನಿನ ನು ವು ಮಾವೋ ಕುಯೀ ( ) ಹೋಟೆಲ್ ಈ ಹೊಸ ಖಾದ್ಯವನ್ನು ಪ್ರಚುರಪಡಿಸಲೆಂದು ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ಅಪ್ಲೋಡ್ ಮಾಡುತ್ತಿದೆ. ವಿಡಿಯೋದಲ್ಲಿರುವ ಸ್ಥಳೀಯ ಯುವತಿ ಸೂಪ್ ಕುಡಿಯುತ್ತಿದ್ದು, ಇದೇ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ. ಅಂದಹಾಗೆ ಟೈಟುಂಗ್ನಲ್ಲಿರುವ ಫಾರ್ಮ್ ಒಂದರಿಂದ ಈ ಮೊಸಳೆಯನ್ನು ಖರೀದಿಸಲಾಗಿದೆ ಎಂದು ರೆಸ್ಟೋರೆಂಟ್ ಹೇಳಿಕೊಂಡಿದೆ. ಮೊಸಳೆ ಕಾಲುಸೂಪ್ ಇಷ್ಟಪಡದವರಿಗೆ ಬಿದಿರಿನ ಮೊಳಕೆ, ಮೊಟ್ಟೆ, ಬೇಬಿ ಕಾರ್ನ್ಮತ್ತು ಬಗೆಬಗೆಯ ರಾಮನ್ ಸೂಪ್ಗಳು ಲಭ್ಯ ಎಂದೂ ಹೋಟೆಲ್ ತಿಳಿಸಿದೆ.ಈ ಎಲ್ಲ ಖಾದ್ಯಗಳ ಪೈಕಿ ಸದ್ಯ ಮೊಸಳೆ ಕಾಲುಸೂಪ್ ವಿಶೇಷ ಆಕರ್ಷಣೆಯಾಗಿದ್ದು, ಈ ಖಾದ್ಯ ತಯಾರಿಸಲು 40 ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇರಿಸಲಾಗಿದೆ.