ಕುವೈತ್ ಅಗ್ನಿ ದುರಂತ: 45 ಭಾರತೀಯರ ಮೃತದೇಹ ಹೊತ್ತ ವಿಮಾನ ಇಂದು ಬೆಳಗ್ಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮನ ಕುವೈತ್‌ ಮಂಗಾಫ್‌ನಲ್ಲಿ ಬೆಂಕಿ ಅವಘಡದಲ್ಲಿ 45 ಭಾರತೀಯರ ಪಾರ್ಥಿವ ಶರೀರವನ್ನು ಹೊತ್ತ ಭಾರತೀಯ ವಾಯುಪಡೆ() ವಿಮಾನ ಇಂದು ಶುಕ್ರವಾರ ಬೆಳಗ್ಗೆ 8:30ಕ್ಕೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಅಬುಧಾಬಿ: ಕುವೈತ್‌ ಮಂಗಾಫ್‌ನಲ್ಲಿ ಬೆಂಕಿ ಅವಘಡದಲ್ಲಿ 45 ಭಾರತೀಯರ ಪಾರ್ಥಿವ ಶರೀರವನ್ನು ಹೊತ್ತ ಭಾರತೀಯ ವಾಯುಪಡೆ() ವಿಮಾನ ಇಂದು ಶುಕ್ರವಾರ ಬೆಳಗ್ಗೆ 8:30ಕ್ಕೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.ಭಾರತೀಯ ವಾಯುಪಡೆಯ ವಿಶೇಷ ವಿಮಾನ ಸಿ-130ಜೆ ಶುಕ್ರವಾರ ಮುಂಜಾನೆ ಕೊಚ್ಚಿಗೆ ಪ್ರಯಾಣ ಬೆಳೆಸಿದೆ. ನಿನ್ನೆ ಗುರುವಾರ ಕುವೈತ್‌ಗೆ ಆಗಮಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಕುವೈತ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ಮೃತದೇಹಗಳನ್ನು ತವರೂರಿಗೆ ಕರೆತರಲು ಕ್ರಮ ಕೈಗೊಂಡಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.45 ಮಂದಿ ಮೃತರಲ್ಲಿ 31 ಮೃತದೇಹಗಳನ್ನು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತರಲಾಗುತ್ತಿದೆ. ನಂತರ ವಿಮಾನವು ಉಳಿದ ಮೃತದೇಹಗಳನ್ನು ಹೊತ್ತು ದೆಹಲಿಗೆ ತೆರಳಲಿದೆ ಎಂದು ತಿಳಿದುಬಂದಿದೆ. ತಮಿಳುನಾಡಿನಿಂದ ಏಳು ಮಂದಿ ಮತ್ತು ಕರ್ನಾಟಕದ ಒಬ್ಬರ ಮೃತದೇಹಗಳನ್ನು ಕೊಚ್ಚಿಗೆ ತರಲಾಗುತ್ತಿದೆ.ದಕ್ಷಿಣ ಭಾರತೀಯರಲ್ಲದೆ, ಉತ್ತರ ಪ್ರದೇಶದ ಮೂವರು, ಒಡಿಶಾದ ಇಬ್ಬರು ಮತ್ತು ಬಿಹಾರ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಹರಿಯಾಣದಿಂದ ತಲಾ ಒಬ್ಬರು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದು, ಅವರ ಮೃತದೇಹಗಳನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಗುತ್ತಿದೆ.ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ ಸಚಿವರು ವಿಮಾನ ನಿಲ್ದಾಣದಲ್ಲಿ ಮೃತರಿಗೆ ಗೌರವ ಸಲ್ಲಿಸಲಿದ್ದಾರೆ. ನಂತರ ಮೃತದೇಹಗಳನ್ನು ಅವರವರ ಮನೆಗೆ ಸಾಗಿಸಲು ರಾಜ್ಯ ಸರ್ಕಾರ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದೆ.ಕಟ್ಟಡದ ಬೆಂಕಿ ದುರಂತದಲ್ಲಿ ಪ್ರಾಣ ಕಳೆದುಕೊಂಡ ಕೇರಳಿಗರು:1. ಪತ್ತನಂತಿಟ್ಟದ ಪಂದಳಂನ ಆಕಾಶ್ ನಾಯರ್2. ಪತ್ತನಂತಿಟ್ಟದ ವಜಮುತ್ತಂನ ಮುರಳೀಧರನ್ ನಾಯರ್3. ಪತ್ತನಂತಿಟ್ಟದ ಕೊನ್ನಿಯ ಸಾಜು ವರ್ಗೀಸ್4. ಪತ್ತನಂತಿಟ್ಟದ ಕೀಜ್ವೈಪುರದ ಸಿಬಿನ್ ಅಬ್ರಹಾಂ5. ಪತ್ತನಂತಿಟ್ಟದ ತಿರುವಲ್ಲಾದ ಥಾಮಸ್ ಉಮ್ಮನ್6. ಕೊಲ್ಲಂನ ಕರವಲೂರಿನ ಸಜನ್ ಜಾರ್ಜ್7. ಕೊಲ್ಲಂನ ವಯ್ಯಂಕರ ಶಮೀರ್ ಉಮರುದ್ದೀನ್8. ಕೊಲ್ಲಂನ ವೆಲಿಚಿಕ್ಕಲದ ಲೂಕೋಸ್ ವಡಕ್ಕೊಟ್ಟು9. ಕೊಲ್ಲಂನ ಪೆರಿನಾಡಿನ ಸುಮೇಶ್ ಪಿಳ್ಳೈ10. ಕಣ್ಣೂರಿನ ಧರ್ಮದೊಳದ ವಿಶ್ವಾಸ್ ಕೃಷ್ಣ11. ಕಣ್ಣೂರಿನ ಕಡಲಾಯಿಯ ಅನೀಶ್ ಕುಮಾರ್12. ಕಣ್ಣೂರಿನ ಪಡಿಯೋಚ್ಚಲ್‌ನ ನಿತಿನ್ ಕೂತೂರ್13. ಕೊಟ್ಟಾಯಂನ ಚಂಗನಾಶ್ಸೆರಿಯ ಶ್ರೀಹರಿ ಪ್ರದೀಪ್14. ಕೊಟ್ಟಾಯಂನ ಪಂಪಾಡಿಯ ಸ್ಟೆಫಿನ್ ಅಬ್ರಹಾಂ15. ಕೊಟ್ಟಾಯಂನ ಪೈಪ್ಪಾಡ್‌ನ ಶಿಬು ವರ್ಗೀಸ್16. ಮಲಪ್ಪುರಂನ ಕೂಟ್ಟಾಯಿಯ ನೂಹು ಕೆ ಪಿ17. ಮಲಪ್ಪುರಂನ ಪುಲಮಂತೋಲ್‌ನ ಎಂ ಪಿ ಬಾಹುಲೇಯನ್18. ತಿರುವನಂತಪುರದ ನೆಡುಮಂಗಡದ ಅರುಣ್ ಬಾಬು19. ತಿರುವನಂತಪುರದ ಎಡವದ ಶ್ರೀಜೇಶ್ ನಾಯರ್20. ಕಾಸರಗೋಡಿನ ತೃಕ್ಕರಿಪುರದ ಕೇಲು ಪೊನ್ಮಲೇರಿ21. ಕಾಸರಗೋಡಿನ ಚೆರ್ಕಳದ ರೆಂಜಿತ್ ಕೆ ಆರ್22. ತ್ರಿಶೂರ್‌ನ ಚಾವಕ್ಕಾಡ್‌ನ ಬಿನೋಯ್ ಥಾಮಸ್23. ಅಲಪ್ಪುಳದ ಚೆಂಗನ್ನೂರಿನ ಮ್ಯಾಥ್ಯೂ ಜಾರ್ಜ್ಮೃತ ತಮಿಳರು1. ರಾಮನಾಥಪುರದ ಎಟ್ಟಿವಾಯಲ್‌ನ ರಾಮು ಕರುಪ್ಪಣ್ಣನ್2. ವಿಲ್ಲುಪುರಂನ ತಿಂಡಿವನಂನ ಮೊಹಮ್ಮದ್ ಶರೀಫ್3. ತಂಜಾವೂರಿನ ಪೆರವೂರಾನಿಯ ಭುನಾಫ್ ರಿಚರ್ಡ್ ರೇ4. ಚೆನ್ನೈನ ರಾಯಪುರಂನ ಜಿ ಶಿವಶಂಕರ್5. ಕಡಲೂರಿನ ಮುತ್ತಂನ ಕೆ ಚಿನ್ನಧುರೈ6. ತೂತುಕುಡಿಯ ವನರಮುಟ್ಟಿಯ ವಿ ಮರಿಯಪ್ಪನ್7. ತಿರುಚ್ಚಿಯ ಇ ರಾಜುಆಂಧ್ರಪ್ರದೇಶ ಸಂತ್ರಸ್ತರು1. ಶ್ರೀಕಾಕುಳಂನ ಸೋಂಪೇಟದಿಂದ ತಮದ ಲೋಕನಾಧಂ2. ಪಶ್ಚಿಮ ಗೋದಾವರಿ ಖಂಡವಳ್ಳಿ ಗ್ರಾಮದ ಮೊಲ್ಲೇಟಿ ಸತ್ಯನಾರಾಯಣ3. ಪಶ್ಚಿಮ ಗೋದಾವರಿ ಅಣ್ಣಾವರಪ್ಪಾಡು ಗ್ರಾಮದ ಮೀಸಲ ಈಶ್ವರಡು