ಬ್ರಿಟನ್ ರಾಣಿ ಎಲಿಜಬೆತ್- ನಿಧನ, ಪ್ರಧಾನಿ ಮೋದಿ ಸಂತಾಪ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್- ಅವರ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಲಂಡನ್: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್- ಅವರ ಗುರುವಾರ ರಾತ್ರಿ ನಿಧನರಾಗಿದ್ದಾರೆ.ಬ್ರಿಟನ್‌ನ ಬಲ್‌ಮೋರಾಲ್‌ನಲ್ಲಿ ಸೂಕ್ತ ವೈದ್ಯಕೀಯ ನಿಗಾದಡಿ ಇದ್ದ 96 ವರ್ಷದ ರಾಣಿ ಎಲಿಜಬೆತ್- ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ ರಾಣಿ ಎಲಿಜಬೆತ್- ಅವರು ಈ ವಾರದ ಆರಂಭದಲ್ಲಿ ಸ್ಕಾಟ್ಲೆಂಡ್‌ನಲ್ಲಿ ಹೊಸ ಪ್ರಧಾನಿ ಲಿಜ್ ಟ್ರಸ್ ಅವರ ನೇಮಕ ಸೇರಿದಂತೆ ತಮ್ಮ ಹಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು.ಇದನ್ನು ಓದಿ: ಅನಾರೋಗ್ಯ, ವೈದ್ಯರ ನಿಗಾವಣೆಯಲ್ಲಿ ಬ್ರಿಟನ್ ರಾಣಿ ಎಲಿಜಬೆತ್!ಎಲಿಜಬೆತ್- ಅವರು 1953 ರಿಂದ ಬ್ರಿಟನ್ ರಾಣಿಯಾಗಿ ಸುದೀರ್ಘ ಏಳು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಎಲಿಜಬೆತ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. . . . . .