ಉತ್ತರಪ್ರದೇಶದ ಹಳ್ಳಿಯಿಂದ ಕಳವಾಗಿದ್ದ ದೇವರ ವಿಗ್ರಹ ಲಂಡನ್ ನಲ್ಲಿ ಪತ್ತೆ: ಭಾರತ ಹೈಕಮಿಷನ್ ಮಾಹಿತಿ ಇಂಗ್ಲೆಂಡಿನ ಹಳ್ಳಿಯೊಂದರಲ್ಲಿ ವಾಸವಿದ್ದ ದಂಪತಿಗಳ ಬಳಿ ಈ ವಿಗ್ರಹ ಇತ್ತು. ಪತಿಯ ಮರಣಾನಂತರ ಆತನ ಬಳಿಯಿದ್ದ ಈ ವಿಗ್ರಹವನ್ನು ಪತ್ನಿ ಹರಾಜಿಗೆ ಇಟ್ಟಿದ್ದರು. ಲಂಡನ್: 40 ವರ್ಷಗಳ ಹಿಂದೆ ಉತ್ತರಪ್ರದೇಶದ ಹಳ್ಳಿಯೊಂದರಿಂದ ಕಳವಾಗಿದ್ದ ದೇವರ ವಿಗ್ರಹ ಲಂಡನ್ ನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಅಲ್ಲಿನ ಭಾರತೀಯ ಹೈಕಮಿಷನ್ ಮಾಹಿತಿ ನೀಡಿದೆ. ಇದನ್ನೂ ಓದಿ: 108 ವರ್ಷಗಳ ನಂತರ ಕೆನಡಾದಿಂದ ತವರಿಗೆ ಮರಳಿದ ಅನ್ನಪೂರ್ಣ ದೇವಿಯ ವಿಗ್ರಹ ವಾರಣಾಸಿಯಲ್ಲಿ ಪ್ರತಿಷ್ಠಾಪನೆಭಾರತೀಯ ಸನಾತನ ಧರ್ಮದಲ್ಲಿ ಸ್ತ್ರೀ ಶಕ್ತಿಯ ಸಂಕೇತವಾದ ಯೋಗಿನಿ ವಿಗ್ರಹ 40 ವರ್ಷಗಳ ಹಿಂದೆ ಕಳವಾಗಿತ್ತು. ಈ ವಿಗ್ರಹ ಲಂಡನ್ ನಲ್ಲಿ ಪತ್ತೆಯಾಗಿದ್ದು, ಅಲ್ಲಿನ ಅಧಿಕಾರಿಗಳು ಅದನ್ನು ಭಾರತಕ್ಕೆ ಮರಳಿಸಲಿದ್ದಾರೆ.ಇದನ್ನೂ ಓದಿ: ಒಡಿಶಾದ ಕೊನಾರ್ಕ್ ದೇಗುಲದಂತೆ, ರಾಮನ ವಿಗ್ರಹಕ್ಕೆ ಸೂರ್ಯರಶ್ಮಿ ಸ್ಪರ್ಶಿಸುವಂತೆ ರಾಮಮಂದಿರ ನಿರ್ಮಾಣ!ಇಂಗ್ಲೆಂಡಿನ ಹಳ್ಳಿಯೊಂದರಲ್ಲಿ ವಾಸವಿದ್ದ ವೃದ್ಧ ದಂಪತಿಗಳ ಬಳಿ ಈ ವಿಗ್ರಹ ಪತ್ತೆಯಾಗಿದೆ. ವೃದ್ಧ ಪತಿಯ ಮರಣಾನಂತರ ಆತನ ಬಳಿಯಿದ್ದ ಈ ವಿಗ್ರಹವನ್ನು ಪತ್ನಿ ಹರಾಜಿಗೆ ಇಟ್ಟಿದ್ದರು. ಇದನ್ನೂ ಓದಿ: ಲಾಂಗ್ ತೋರಿಸಿ ಹಣ ವಸೂಲಿ: ಖಾಕಿ ಖೆಡ್ಡಾಗೆ ಬಿದ್ದ ಬರ್ನಲ್ ಸಿದ್ದಿಕಿ; ಬಂಧನ ವೇಳೆ ಹೈ ಡ್ರಾಮಾ, ಬ್ಲೇಡ್ ನುಂಗಿದ್ದೇನೆ ಎಂದ ಆರೋಪಿ!ಆ ಸಮಯದಲ್ಲಿ ಭಾರತೀಯ ಸಂಸ್ಕೃತಿಯ ಪರಿಚಯವಿದ್ದ ಲಾಯರ್ ಓರ್ವರಿಗೆ ಆಡು ಮುಖದ ವಿಗ್ರಹದ ಕುರಿತು ಕುತೂಹಲ ಉಂಟಾಗಿ ಅದರ ಬಗ್ಗೆ ತಿಳಿದುಕೊಳ್ಳಲು ಮುಂದಾದಾಗ ಅದು ಭಾರತದಲ್ಲಿ ಕಳವಾಗಿದ್ದ ವಿಚಾರ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಚಿನ್ನದ ಗಟ್ಟಿ ಕದ್ದ ಕೆಲಸಗಾರನ ಬಂಧನ, 4 ಕೋಟಿ ಮೌಲ್ಯದ 11.2 ಕೆ.ಜಿ. ಚಿನ್ನ ವಶ