ಇಸ್ರೇಲ್ ಮೇಲಿನ ಹಮಾಸ್ ದಾಳಿಯಲ್ಲಿ ಭಾಗಿ ಆರೋಪ: ವಿಶ್ವಸಂಸ್ಥೆಯ 9 ಸಿಬ್ಬಂದಿ ಅಮಾನತು ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿ ನಡೆದ ಹಮಾಸ್ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ () 12 ಸಿಬ್ಬಂದಿಗಳಲ್ಲಿ ಒಂಬತ್ತು ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ನ್ಯೂಯಾರ್ಕ್: ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿ ನಡೆದ ಹಮಾಸ್ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿರುವ ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ () 12 ಸಿಬ್ಬಂದಿಗಳಲ್ಲಿ ಒಂಬತ್ತು ಸದಸ್ಯರನ್ನು ಅಮಾನತುಗೊಳಿಸಲಾಗಿದೆ.ಈ ಬಗ್ಗೆ ಸ್ವತಃ ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಘೋಷಿಸಿದ್ದು, ಆರೋಪ ಎದುರಿಸುತ್ತಿರುವ ಒಟ್ಟು 12 ಸಿಬ್ಬಂದಿಯ ಪೈಕಿ 9 ಮಂದಿಯನ್ನು ಅಮಾನತು ಮಾಡಲಾಗಿದೆ. ಒಬ್ಬ ಸಿಬ್ಬಂದಿ ಸಾವನ್ನಪ್ಪಿದ್ದು, ಇತರ ಇಬ್ಬರ ಗುರುತುಗಳು ಇನ್ನೂ ಸ್ಪಷ್ಟೀಕರಣದಲ್ಲಿದೆ ಎಂದು ಹೇಳಿದ್ದಾರೆ. ಅಂತೆಯೇ ಸಿಬ್ಬಂದಿಗಳ ಮೇಲಿನ ಆರೋಪಗಳ ತೀವ್ರತೆ ಒತ್ತಿ ಹೇಳಿದ ಅವರು, ನಡೆಯುತ್ತಿರುವ ತನಿಖೆ ಮತ್ತು ಸ್ವತಂತ್ರ ಪರಿಶೀಲನೆ ಪ್ರಗತಿಯಲ್ಲಿದ್ದು, ತ್ವರಿತ ಕ್ರಮದ ಭರವಸೆ ನೀಡಿದರು.ಇದನ್ನೂ ಓದಿ: ಗಾಜಾ-ಇಸ್ರೇಲ್ ಬಿಕ್ಕಟ್ಟು ತೀವ್ರ: ಪ್ಯಾಲೆಸ್ಟೀನ್‌ಗೆ ಅನುದಾನ ಕಡಿತ ಮಾಡದಂತೆ ವಿಶ್ವಸಂಸ್ಥೆ ಮನವಿಸಂಭಾವ್ಯ ಕ್ರಿಮಿನಲ್ ಮೊಕದ್ದಮೆ ಸೇರಿದಂತೆ ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವ ಯಾವುದೇ ವಿಶ್ವಸಂಸ್ಥೆ ಉದ್ಯೋಗಿಯನ್ನು ಸಹಿಸಲಸಾಧ್ಯ ಎಂದು ಹೇಳಿದ ಗುಟೆರೆಸ್, ಯಾವುದೇ ಯುಎನ್ ಉದ್ಯೋಗಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದರೆ ಹೊಣೆಗಾರಿಕೆಯನ್ನು ಎದುರಿಸಬೇಕಾಗುತ್ತದೆ. ಸವಾಲಿನ ಪರಿಸ್ಥಿತಿಗಳಲ್ಲಿ ನಡೆಸಿದ ಮಾನವೀಯ ಕೆಲಸದಿಂದ ನಿರ್ದಿಷ್ಟ ಸಿಬ್ಬಂದಿ ಸದಸ್ಯರ ಆಪಾದಿತ ಕ್ರಮಗಳನ್ನು ಪ್ರತ್ಯೇಕಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.ಅಂತೆಯೇ ಗಂಭೀರ ಆರೋಪಗಳ ಹೊರತಾಗಿಯೂ, ಯುಎನ್‌ಆರ್‌ಡಬ್ಲ್ಯೂಎಗೆ ಹಣಕಾಸಿನ ನೆರವು ಮುಂದುವರಿಸಲು ಅವರು ದೇಶಗಳನ್ನು ಒತ್ತಾಯಿಸಿದರು, ಇದು 2 ಮಿಲಿಯನ್ ಗಾಜಾ ಪ್ರಜೆಳಿಗೆ ಅವರ ದೈನಂದಿನ ಉಳಿವಿಗಾಗಿ ಒದಗಿಸುವ ಪ್ರಮುಖ ಬೆಂಬಲವನ್ನು ಮುಂದುವರೆಸಬೇಕು ಎಂದರು. ವಿರುದ್ಧದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಒಂಬತ್ತು ದೇಶಗಳು ಗಾಜಾದಲ್ಲಿನ ಮುಖ್ಯ ಏಜೆನ್ಸಿಗೆ ಹಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಆದರೆ ಕಾರ್ಯಾಚರಣೆಗಳ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ದೇಣಿಗೆ ಮುಂದುವರೆಸುವಂತೆ ಆಯಾ ದೇಶಗಳ ಸರ್ಕಾರಗಳಿಗೆ ಮನವಿ ಮಾಡಿದರು.ಇದನ್ನೂ ಓದಿ: ಗಾಜಾದಲ್ಲಿ ಸೇನಾ ಸಂಘರ್ಷ: ಜೀವ ಹಾನಿ ತಡೆಗೆ ಕ್ರಮ ಕೈಗೊಳ್ಳಿ: ಇಸ್ರೇಲ್‌ಗೆ ವಿಶ್ವಸಂಸ್ಥೆಯ ಉನ್ನತ ಕೋರ್ಟ್‌ ಆದೇಶಅಕ್ಟೋಬರ್ 7 ರಂದು ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಕೆಲವು ಸಿಬ್ಬಂದಿ ಭಾಗಿಯಾಗಿದ್ದಾರೆ ಎಂದು ಇಸ್ರೇಲ್ ಆರೋಪಿಸಿದ ನಂತರ ಗಾಜಾದಲ್ಲಿನ ಪ್ರಮುಖ ಏಜೆನ್ಸಿಯೊಳಗೆ ಪ್ರಕ್ಷುಬ್ಧತೆ ಉಂಟಾಗಿದೆ. ಗಾಜಾದಲ್ಲಿ ಸುಮಾರು 13,000 ಜನರನ್ನು ನೇಮಿಸಿಕೊಂಡಿರುವ ಸಂಸ್ಥೆಗೆ ಅಮೆರಿಕ ಮತ್ತು ಹಲವಾರು ಇತರ ದೇಶಗಳು ಧನಸಹಾಯವನ್ನು ಸ್ಥಗಿತಗೊಳಿಸಿವೆ.