ಸಂಗೀತಪ್ರಿಯರನ್ನು ಕೊಲ್ಲುವ ನೀತಿ ಜಾರಿಗೊಳಿಸಿಲ್ಲ: ತಾಲಿಬಾನ್ ನಾಯಕರ ಸ್ಪಷ್ಟನೆ ಮದುವೆ ಮನೆಯಲ್ಲಿ ಸಂಗೀತವನ್ನು ದೊಡ್ಡ ದನಿಯಲ್ಲಿ ಹಾಕಲಾಗಿದ್ದಿತು. ಈ ಸಂದರ್ಭ ಅಲ್ಲಿಗೆ ದಾಂಗುಡಿಯಿಟ್ಟ 3 ತಾಲಿಬಾನಿಗಳು ಮದುವೆಮನೆಯೊಳಗೆ ಗುಂಡಿನ ದಾಳಿ ನಡೆಸಿದ್ದರು. ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಂಗೀಪ್ರಿಯರನ್ನು ಕೊಲ್ಲುವ ನೀತಿ ಜಾರಿ ಮಾಡಿಲ್ಲ ಎಂದು ತಾಲಿಬಾನ್ ನಾಯಕರು ಸ್ಪಷ್ಟನೆ ಕೊಟ್ಟಿದ್ದಾರೆ. ಇತ್ತೀಚಿಗಷ್ಟೆ ಮದುವೆಮನೆಯಲ್ಲಿ ಸಂಗೀತ ಕೇಳುತ್ತಿದ್ದ ಇಬ್ಬರು ಅತಿಥಿಗಳನ್ನು ತಾಲಿಬಾನಿಗಳು ಗುಂಡಿಕ್ಕಿ ಕೊಂದಿದ್ದರು. ಇದನ್ನೂ ಓದಿ: ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲಿ ಕುಟುಂಬ ನಿರ್ವಹಣೆಗೆ ಸ್ವಂತ ಮಕ್ಕಳ ಮಾರಾಟಮದುವೆಮನೆಯಲ್ಲಿ ಸಂಗೀತ ಕೇಳುತ್ತಿದ್ದವರನ್ನು ಕೊಂದ ಪ್ರಕರಣವನ್ನು ಉಲ್ಲೇಖಿಸಿ ತಾಲಿಬಾನ್ ನಾಯಕರು ಈ ಸ್ಪಷ್ಟನೆ ನೀಡಿದ್ದಾರೆ. ಆ ಇಬ್ಬರು ವ್ಯಕ್ತಿಗಳ ಕೊಲೆಯನ್ನು ಸರ್ಕಾರದ ನಿರ್ದೇಶನದಂತೆ ಮಾಡಲಾಗಿಲ್ಲ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ತಾಲಿಬಾನ್ ಗಳಿಂದ ವಾಲಿಬಾಲ್ ಆಟಗಾರ್ತಿಯ ಬರ್ಬರ ಹತ್ಯೆ!ನಂರ್ಗರ್ಹರ್ ಎಂಬಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮದುವೆ ಮನೆಯಲ್ಲಿ ಸಂಗೀತವನ್ನು ದೊಡ್ಡ ದನಿಯಲ್ಲಿ ಹಾಕಲಾಗಿದ್ದಿತು. ಈ ಸಂದರ್ಭ ಅಲ್ಲಿಗೆ ದಾಂಗುಡಿಯಿಟ್ಟ 3 ತಾಲಿಬಾನಿಗಳು ಮದುವೆಮನೆಯೊಳಗೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದರು.ಇದನ್ನೂ ಓದಿ: ಐಸಿಸ್ ನಿಗ್ರಹಿಸಲು ಅಮೆರಿಕದ ಜೊತೆ ಕೈಜೋಡಿಸುವುದಿಲ್ಲ: ತಾಲಿಬಾನ್ ತಿರುಗೇಟುಆರೋಪಿ ತಾಲಿಬಾನಿಗಳು ಇದೀಗ ಪೊಲೀಸರ ವಶದಲ್ಲಿದ್ದಾರೆ ಎನ್ನಲಾಗುತ್ತಿದೆ. ಘಟನೆಯಲ್ಲಿ ತನ್ನ ಕೈವಾಡವಿಲ್ಲ ಎಂದು ಸರ್ಕಾರ ಸ್ಪಷ್ಟ ಪಡಿಸಿದ್ದರೂ ಮನರಂಜನೆ ಎನ್ನುವುದು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾದುದು ಎನ್ನುವ ತನ್ನ ನಿಲುವಿಗೆ ಸರ್ಕಾರ ಬದ್ಧವಾಗಿದೆ ಎನ್ನುವುದು ವಿಪರ್ಯಾಸ.ಇದನ್ನೂ ಓದಿ: ಸಿಖ್ ಗುರುದ್ವಾರ ಧ್ವಂಸ; ಹಿಂದೂ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಿದವರ ಬಂಧನ: ತಾಲಿಬಾನ್ ವಕ್ತಾರಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಅಫ್ಘಾನಿಸ್ತಾನ; ತಾಲಿಬಾನ್ ನಾಡಿನಲ್ಲಿ ಮಂದಹಾಸದೇಶ ಬಿಡಿ, ಇಲ್ಲವೇ ಇಸ್ಲಾಂಗೆ ಮತಾಂತರವಾಗಿ: ಅಫ್ಘನ್ ಸಿಖ್ಖರಿಗೆ ತಾಲಿಬಾನ್ ತಾಕೀತುಸಿಖ್ ಗುರುದ್ವಾರ ಧ್ವಂಸ; ಹಿಂದೂ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಿದವರ ಬಂಧನ: ತಾಲಿಬಾನ್ ವಕ್ತಾರಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಹುಟ್ಟುವುದಕ್ಕೆ ಮುಂಚೆಯೇ ಭಾರತದಲ್ಲಿ ಹುಟ್ಟಿತ್ತು: ಸಿದ್ದುಗೆ ಕಟೀಲ್ ತಿರುಗೇಟುಸಚಿವಾಲಯ ಪ್ರವೇಶಕ್ಕೆ ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್ ನಿಷೇಧ