ಇರಾನ್‌ನ ಇಝೆಹ್‌ನಲ್ಲಿ ಗುಂಡಿನ ದಾಳಿ: ಕನಿಷ್ಠ ಐವರ ಸಾವು, ಹಲವರಿಗೆ ಗಾಯ ಇರಾನ್‌ನ ಇಝೆಹ್‌ನಲ್ಲಿ ಬುಧವಾರ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ ಐವರು ಸಾವಿಗೀಡಾಗಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಇರಾನ್: ಇರಾನ್‌ನ ಇಝೆಹ್‌ನಲ್ಲಿ ಬುಧವಾರ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ ಐವರು ಸಾವಿಗೀಡಾಗಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.ಬುಧವಾರ ಎರಡು ಮೋಟಾರ್‌ಸೈಕಲ್‌ಗಳಲ್ಲಿ ಬಂದ ಶಸ್ತ್ರಸಜ್ಜಿತ ದಾಳಿಕೋರರು ಖುಜೆಸ್ತಾನ್ ಪ್ರಾಂತ್ಯದ ಇಝೆಹ್‌ನ ಕೇಂದ್ರ ಮಾರುಕಟ್ಟೆಯಲ್ಲಿ ನಾಗರೀಕರು ಮತ್ತು ಪೊಲೀಸರು ಹಾಗೂ ಭದ್ರತಾ ಪಡೆಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.ಇದನ್ನೂ ಓದಿ: ಇರಾನ್ ಹಿಜಾಬ್ ವಿರೋಧಿ ಪ್ರತಿಭಟನೆ: ಭದ್ರತಾ ಪಡೆಗಳಿಂದ ಕನಿಷ್ಠ 326 ಮಂದಿಯ ಬರ್ಬರ ಹತ್ಯೆ!ದಾಳಿಯಲ್ಲಿ ಮೂರು ಯುವಕರು, ಓರ್ವ ಬಾಲಕಿ ಹಾಗೂ ಪುರುಷರೊಬ್ಬರು ಸಾವಿಗೀಡಾಗಿದ್ದಾರೆಂದು ತಿಳಿದುಬಂದಿದೆ.ಇನ್ನು ದಾಳಿಯಲ್ಲಿ ಗಾಯಗೊಂಡ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಖುಜೆಸ್ತಾನ್‌ನ ಭದ್ರತಾ ವ್ಯವಹಾರಗಳ ಉಪ ಗವರ್ನರ್ ವಲಿಯೊಲ್ಲಾ ಹಯಾತಿ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.ಶೋಧ ಕಾರ್ಯಾಚರಣೆ ಪ್ರಾರಂಭಗೊಂಡಿದ್ದು ಭಯೋತ್ಪಾದಕ ದಾಳಿಯ ಹಿಂದಿರುವವರನ್ನು ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.