ಬಾಕ್ಸಿಂಗ್: ಭರ್ಜರಿ ಗೆಲುವಿನೊಡನೆ ಟೊಕಿಯೋ ಟಿಕೆಟ್ ಗಿಟ್ಟಿಸಿದ ಮೇರಿ ಕೋಮ್ ಆರು ಬಾರಿಯ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ (51 ಕೆಜಿ) ಸೋಮವಾರ ನಡೆದ ಬಾಕ್ಸಿಂಗ್ ಹಣಾಹಣಿಯಲ್ಲಿ ಫಿಲಿಪೈನ್ಸ್ ಐರಿಶ್ ಮ್ಯಾಗ್ನೊ ವಿರುದ್ಧ ಸುಲಭ ಗೆಲುವು ಸಾಧಿಸುವುದರೊಡನೆ ಏಷ್ಯನ್ ಕ್ವಾಲಿಫೈಯರ್ಸ್ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ. ಇದೇ ವೇಳೆ ಮೇರಿ ಕೋಮ್ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಅಮ್ಮನ್(ಜೋರ್ಡಾನ್): ಆರು ಬಾರಿಯ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ (51 ಕೆಜಿ) ಸೋಮವಾರ ನಡೆದ ಬಾಕ್ಸಿಂಗ್ ಹಣಾಹಣಿಯಲ್ಲಿ ಫಿಲಿಪೈನ್ಸ್ ಐರಿಶ್ ಮ್ಯಾಗ್ನೊ ವಿರುದ್ಧ ಸುಲಭ ಗೆಲುವು ಸಾಧಿಸುವುದರೊಡನೆ ಏಷ್ಯನ್ ಕ್ವಾಲಿಫೈಯರ್ಸ್ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ. ಇದೇ ವೇಳೆ ಮೇರಿ ಕೋಮ್ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.ಜೋರ್ಡಾನ್ ನ ಅಮ್ಮನ್ ನಲ್ಲಿ ನಡೆದ ಕ್ವಾರಟರ್ ಫೈನಲ್ಸ್ ಪಂದ್ಯದಲ್ಲಿ ಕೋಮ್ 5-0 ಅಂತರದಲ್ಲಿ ಗೆಲುವು ಸಾಧಿಸಿದರು.37ರ ಹರೆಯದ ಬಾಕ್ಸರ್ ಮೇರಿ ಮಹಿಳೆಯರ ಬಾಕ್ಸಿಂಗ್ ಅನ್ನು ಮೊದಲ ಬಾರಿಗೆಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಸೇರ್ಪಡಿಸಿದ್ದ 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ಸಾಧನೆ ಮೆರೆದಿದ್ದಾರೆ. ಮೇರಿ ತಮ್ಮ ಮುಂದಿನ ಸೆಮೀಸ್ ಹಣಾಹಣಿಯಲ್ಲಿ ಚೀನಾದ ಯುವಾನ್ ಚಾಂಗ್ ವಿರುದ್ಧ ಸೆಣಸಲಿದ್ದಾರೆ. ಚಾಂಗ್ ಮಾಜಿ ಯುವ ಒಲಿಂಪಿಕ್ಸ್ ಚಾಂಪಿಯನ್ ಆದ್ಗಿದ್ದಾರೆ.ಬಾಕ್ಸಿಂಗ್: ಪೂಜಾ ರಾಣಿ, ವಿಕಾಸ್ ಕ್ರಿಶನ್ ಗೆ ಜಯ,ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಜೋಡಿಬಾಕ್ಸಿಂಗ್: ಮೇರಿ ಕೋಮ್ ಗೆ ಜಯ, ಟೋಕಿಯೋಗೆ ತೆರಳಲು ಇನ್ನೊಂದೇ ಹೆಜ್ಜೆ!