ಪೋರ್ಟುಗಲ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋಗೆ 'ಗೋಲ್ಡನ್ ಶೂ' ಪ್ರಸಕ್ತ ಸಾಲಿನ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ ಗೋಲು ಗಳಿಸಿದ ಪೋರ್ಚುಗಲ್‌ನ ಸೂಪರ್ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋ ತನ್ನ ಚೊಚ್ಚಲ ಗೋಲ್ಡನ್ ಬೂಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೆಂಬ್ಲಿ: ಪ್ರಸಕ್ತ ಸಾಲಿನ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಗರಿಷ್ಠ ಗೋಲು ಗಳಿಸಿದ ಪೋರ್ಚುಗಲ್‌ನ ಸೂಪರ್ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋ ತನ್ನ ಚೊಚ್ಚಲ ಗೋಲ್ಡನ್ ಬೂಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆದ ಯೂರೋ 2020 ಫೈನಲ್ ಪಂದ್ಯದ ನಂತರ ಟೂರ್ನಿಯಲ್ಲಿ ಹೆಚ್ಚು ಗೋಲು ಬಾರಿಸಿದ ಆಟಗಾರರಿಗೆ ನೀಡಲಾಗುವ 'ಗೋಲ್ಡನ್ ಶೂ'ಗೆ ಕ್ರಿಸ್ಚಿಯಾನೊ ರೊನಾಲ್ಡೋ ಅವರ ಹೆಸರನ್ನು ಘೋಸಲಾಯಿತು. ಯೂರೋ ಕಪ್ ಟೂರ್ನಿಯಲ್ಲಿ ರೊನಾಲ್ಡೋ 14 ಗೋಲುಗಳನ್ನು ಬಾರಿಸಿದ್ದಾರೆ. ರೊನಾಲ್ಡೊ ಈಗ 109 ಅಂತಾರಾಷ್ಟ್ರೀಯ ಗೋಲುಗಳನ್ನು ಬಾರಿಸುವ ಮೂಲಕ ಇರಾನ್‌ನ ಅಲಿ ಡೇಯಿ ಸ್ಥಾಪಿಸಿದ ವಿಶ್ವ ದಾಖಲೆಯನ್ನು ಸಮನಾಗಿಸಿದ್ದಾರೆ.