ಟೋಕಿಯೋ ಒಲಿಂಪಿಕ್ಸ್ ರಾಯಭಾರಿ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ಮೇರಿ ಕೋಮ್ ಮುಂದಿನ ವರ್ಷ ಟೋಕಿಯೊ ಒಲಿಂಪಿಕ್ಸ್‌ನ 10 ಅನುಭವಿ ಅಥ್ಲೀಟ್ ರಾಯಭಾರಿಗಳ ಪಟ್ಟಿಯಲ್ಲಿ ಭಾರತದ ಸ್ಟಾರ್ ಮಹಿಳಾ ಬಾಕ್ಸರ್ ಎಂಸಿ ಮೇರಿ ಕೋಮ್ ಸ್ಥಾನ ಪಡೆದಿದ್ದಾರೆ. ನವದೆಹಲಿ: ಮುಂದಿನ ವರ್ಷ ಟೋಕಿಯೊ ಒಲಿಂಪಿಕ್ಸ್‌ನ 10 ಅನುಭವಿ ಅಥ್ಲೀಟ್ ರಾಯಭಾರಿಗಳ ಪಟ್ಟಿಯಲ್ಲಿ ಭಾರತದ ಸ್ಟಾರ್ ಮಹಿಳಾ ಬಾಕ್ಸರ್ ಎಂಸಿ ಮೇರಿ ಕೋಮ್ ಸ್ಥಾನ ಪಡೆದಿದ್ದಾರೆ.ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಕ್ರೀಡಾ ಕಾರ್ಯ ಪಡೆಯ ಪರ ಬಾಕ್ಸರ್ ಗಳನ್ನು ಪ್ರತಿನಿಧಿಸಲಿದ್ದಾರೆ. ಅಲ್ಲದೆ, ಮೇರಿ ಕೋಮ್ ಕೂಟದಲ್ಲಿ ಏಷ್ಯಾದ ಕ್ರೀಡಾಪಟುಗಳನ್ನು ಪ್ರತಿನಿಧಿಸಲಿದ್ದಾರೆ.ಮಣಿಪುರದವರಾದ ಮೇರಿ ಅವರಿಗೆ ಟೋಕಿಯೋ ಒಲಿಂಪಿಕ್ -2020 ಕ್ರೀಡಾಕೂಟದಲ್ಲಿ ಈ ಗೌರವ ದೊರಕಿರುವುದು ಭಾರತೀಯ ಬಾಕ್ಸಿಂಗ್ ಕ್ಷೇತ್ರ ಮಾತ್ರವಲ್ಲದೆ ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆಯ ಸಂಗತಿಯಾಗಿದೆ.ವಿಶ್ವ ಬಾಕ್ಸಿಂಗ್ ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿಯಾಗಿರುವ ಮಹಿಳಾ ಬಾಕ್ಸರ್ ಮೇರಿ ಕೋಮ್ ಅವರನ್ನು ಒಲಂಪಿಕ್ಸ್ ಅಥ್ಲೆಟಿಕ್ಸ್ ರಾಯಭಾರಿಗಳ ಹತ್ತು ಸದಸ್ಯರ ತಂಡದಲ್ಲಿ ಮೇರಿಯವರಿಗೆ ಸ್ಥಾನ ಲಭಿಸಿದೆ.