ಶೂಟಿಂಗ್ ಚಾಂಪಿಯನ್‌ಶಿಪ್‌: 12ನೇ ಒಲಂಪಿಕ್ ಕೋಟಾ ಗಿಟ್ಟಿಸಿದ ತೇಜಸ್ವಿನಿ ಶನಿವಾರ ಇಲ್ಲಿ ನಡೆದ 14 ನೇ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 50 ಮೀ ರೈಫಲ್ 3 ವಿಭಾಗದಲ್ಲಿ ಫೈನಲ್‌ಗೆ ಅರ್ಹತೆ ಪಡೆಯುವ ಮೂಲಕ ತೇಜಸ್ವಿನಿ ಸಾವಂತ್ ಟೋಕಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಇವರು ಶೂಟಿಂಗ್ ನಲ್ಲಿ ಒಲಂಪಿಕ್ ಅರ್ಹತೆ ಗಿಟ್ಟಿಸಿದ ಹನ್ನೆರಡನೇ ಆಟಗಾರ್ತಿಯಾಗಿದ್ದಾರೆ. ಧೋಹಾ: ಶನಿವಾರ ಇಲ್ಲಿ ನಡೆದ 14 ನೇ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 50 ಮೀ ರೈಫಲ್ 3 ವಿಭಾಗದಲ್ಲಿ ಫೈನಲ್‌ಗೆ ಅರ್ಹತೆ ಪಡೆಯುವ ಮೂಲಕ ತೇಜಸ್ವಿನಿ ಸಾವಂತ್ ಟೋಕಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಇವರು ಶೂಟಿಂಗ್ ನಲ್ಲಿ ಒಲಂಪಿಕ್ ಅರ್ಹತೆ ಗಿಟ್ಟಿಸಿದ ಹನ್ನೆರಡನೇ ಆಟಗಾರ್ತಿಯಾಗಿದ್ದಾರೆ.39 ವರ್ಷದ ಸಾವಂತ್ 1171 ಅಂಕಗಳೊಂದಿಗೆ ಐದನೇ ಸ್ಥಾನ ಗಳಿಸುವ ಮೂಲಕ ಟೋಕಿಯೊ ಕೋಟಾವನ್ನು ಗಳಿಸಿದರು.ಮುಂದಿನ ವರ್ಷದ ಟೋಕಿಯೊ ಕ್ರೀಡಾಕೂಟದ ಅಂತಿಮ ಶೂಟಿಂಗ್ ತಂಡದಲ್ಲಿ ಆಕೆಯನ್ನು ಆಯ್ಕೆ ಮಾಡಲಾಗಿದ್ದು, ಇದು ಆಕೆಯ ಪಾಲಿನ ಚೊಚ್ಚಲ ಒಲಂಪಿಕ್ ಆಗಿರಲಿದೆ.