ಏಷ್ಯನ್ ವಯೋವರ್ಗ ಈಜು ಚಾಂಪಿಯನ್‌ಶಿಪ್‌: ಭಾರತಕ್ಕೆ ಒಂಬತ್ತನೇ ಬಂಗಾರ ಇಲ್ಲಿ ನಡೆಯುತ್ತಿರುವ 10ನೇ ಏಷ್ಯನ್ ವಯೋವರ್ಗ ಈಜು ಚಾಂಪಿಯನ್‌ಶಿಪ್‌ನ 4*100ಮೀ. ಮೆಡ್ಲಿ ರಿಲೆ ವಿಭಾಗದಲ್ಲಿ ಭಾರತದ ಪುರುಷರ ತಂಡವು ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ. ಬೆಂಗಳೂರು : ಇಲ್ಲಿ ನಡೆಯುತ್ತಿರುವ 10ನೇ ಏಷ್ಯನ್ ವಯೋವರ್ಗ ಈಜು ಚಾಂಪಿಯನ್‌ಶಿಪ್‌ನ 4*100ಮೀ. ಮೆಡ್ಲಿ ರಿಲೆ ವಿಭಾಗದಲ್ಲಿ ಭಾರತದ ಪುರುಷರ ತಂಡವು ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ.ಗುರುವಾರ ನಗರದ ಪಡುಕೋಣೆ-ದ್ರಾವಿಡ್ ಕೇಂದ್ರದಲ್ಲಿ ಶ್ರೀಹರಿ ನಟರಾಜ್, ಸಾಜನ್ ಪ್ರಕಾಶ್, ಲಿಖಿತ್ ಎಸ್.ಪಿ ಹಾಗೂ ವೀರ್‌ಧವಳ್ ಖಾಡೆ ಅವರನ್ನೊಳಗೊಂಡ ತಂಡ, 4*100ಮೀ. ಮೆಡ್ಲಿ ರಿಲೆ ಸ್ಪರ್ಧೆಯನ್ನು 3:46.49 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಭಾರತಕ್ಕೆೆ 9ನೇ ಸ್ವರ್ಣ ಪದಕ ತಂದುಕೊಟ್ಟಿತು. ಥಾಯ್ಲೆಂಡ್ (3:48.89) ಬೆಳ್ಳಿ ಪದಕ ತನ್ನದಾಗಿಸಿಕೊಂಡರೆ, ಹಾಂಕಾಂಗ್ ಕಂಚಿನ ಪದಕಕ್ಕೆೆ ತೃಪ್ತಿಪಟ್ಟಿತು. ರಿಲೆ ಆರಂಭವಾದ ಕ್ಷಣ ಥಾಯ್ಲೆಂಡ್ ಹಾಗೂ ಹಾಂಕಾಂಗ್‌ನಿಂದ ಪ್ರಬಲ ಪೈಪೋಟಿ ಎದುರಾಗಿತ್ತು. ಆದರೆ, 56.55 ಸೆಕೆಂಡ್‌ನಲ್ಲಿ ಶ್ರೀಹರಿ ನಟರಾಜ್ ಬ್ಯಾಕ್ ಸ್ಟ್ರೋಕ್ ಮೂಲಕ ಹಾಂಕಾಂಗ್‌ನ ಲಾ ಶಿಯು ಯು(57.72) ಹಾಗೂ ಥಾಯ್ಲೆಂಡ್ ನ ಕಾಸಿಪತ್ ಚೋಗ್ರಾಥಿನ್(58.41) ಅವರನ್ನು ಹಿಂದಿಕ್ಕಿದರು. ಸಾಜನ್ ಪ್ರಕಾಶ್(54.50 ಸೆ.) ಅವರು ಬಟರ್‌ಫ್ಲೈ ವಿಭಾಗದಲ್ಲಿ ಭಾರತಕ್ಕೆೆ ಮುನ್ನಡೆ ತಂದುಕೊಟ್ಟರು. ಥಾಯ್ಲೆಂಡ್ ನ ನವಾಫಟ್ ವೊಂಗ್ಚರೋಯೆನ್ (54.50 ಸೆ.) ಹಾಗೂ ಹಾಂಕಾಂಗ್‌ನ ಚೆಯುಂಗ್ ಯೌ ಮಿಂಗ್ (56.60 ಸೆ.) ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾಾನ ಪಡೆದರು.ಲಿಖಿತ್ ಎಸ್.ಪಿ ಅವರು ಸ್ವಿಮ್ಮಿಂಗ್ ಬ್ರೆೆಸ್ಟ್‌ ಸ್ಟ್ರೋಕ್‌ನಲ್ಲಿ 1:02.47 ಸೆ. ಸಮಯದಲ್ಲಿ ಪೂರ್ಣಗೊಳಿಸಿ ಮುನ್ನಡೆಯನ್ನು ಇನ್ನಷ್ಟು ಇಗ್ಗಿಸಿದರು. ಥಾಯ್ಲೆಂಡ್ ನ ನುಟ್ಟಪಾಂಗ್ ಕೆಟಿನ್ 1:03.69 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಎರಡನೇ ಸ್ಥಾನ ಪಡೆದರೆ, ಹಾಂಕಾಂಗ್‌ನ ಎನ್.ಜಿ ಯಾನ್ ಕಿನ್ ಅವರು 1:05.82 ಸೆಕೆಂಡ್‌ಗಳಲ್ಲಿ ಮುಗಿಸಿ ಮೂರನೇ ಸ್ಥಾನ ಅಲಂಕರಿಸಿದರು. ಬುಧವಾರ 50ಮೀ. ಫ್ರೀ ಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ವೀರ್‌ಧವಳ್ ಖಾಡೆ 53.00 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ಭಾರತಕ್ಕೆೆ ಚಿನ್ನದ ಪದಕ ತಂದುಕೊಟ್ಟರು. ಇನ್ನು, ಥಾಯ್ಲೆಂಡ್ ನ ಟಾರಿಟ್ ಥೊಂಗ್ಚುಮ್ಸಿನ್ (52.29) ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಅವರು ಭಾರತದ ಈಜುಗಾರನನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅವರು ಬೆಳ್ಳಿ ಪದಕಕ್ಕೆೆ ತೃಪ್ತರಾದರು. ಹಾಂಕಾಂಗ್ ಫುಂಗ್ ಚುಂಗ್ ಹೋ ಅವರು 53.85 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಕಂಚಿನ ಪದಕಕ್ಕೆೆ ಸೀಮಿತರಾದರು.ವನಿತೆಯರ ತಂಡಕ್ಕೆೆ ಬೆಳ್ಳಿ:4*100ಮೀ. ಮೆಡ್ಲೆೆ ರಿಲೆ ಮಹಿಳೆಯರ ವಿಭಾಗದಲ್ಲಿ ಮಾನ ಪಟೇಲ್, ದಿವ್ಯಾ ಸಾತೀಜಾ ಅರೋರಾ ಹಾಗೂ ಶಿವಾನಿ ಕಟಾರಿಯಾ ತಂಡವು 4:26.69 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ಬೆಳ್ಳಿ ಪದಕಕ್ಕೆೆ ತೃಪ್ತಿಪಟ್ಟಿತು. ಥಾಯ್ಲೆಂಡ್ ತಂಡ 4:23.23 ಸೆಕೆಂಡ್‌ಗಳಲ್ಲಿ ರೇಸ್ ಮುಗಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿತು. 4:31.19 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ ಹಾಂಕಾಂಗ್ ತಂಡ ಕಂಚಿನ ಪದಕ ಪಡೆಯಿತು. ಮೂರನೇ ದಿನದ ಫಲಿತಾಂಶ4*100ಮೀ. ಫ್ರೀ ಸ್ಟೈಲ್ (ಮಿಶ್ರ ಗುಂಪು-2) 1. ಜಪಾನ್ (3:46.48) 2. ಹಾಂಕಾಂಗ್ (3:48.48) 3. ಥಾಯ್ಲೆಂಡ್ (3:50.98)4*100ಮೀ. (ಪುರುಷರ ಓಪನ್ ವಿಭಾಗ) 1.ಭಾರತ (3:46.49) 2. ಥಾಯ್ಲೆಂಡ್ (3:48.89) 3. ಹಾಂಕಾಂಗ್ (3:53.99)4*100ಮೀ. (ಮೆಡ್ಲೆೆ (ಮಹಿಳಾ ಓಪನ್ ವಿಭಾಗ) 1. ಥಾಯ್ಲೆಂಡ್ (4:23.23) 2. ಭಾರತ (4:26.69) 3. ಹಾಂಕಾಂಗ್ (4:31.19)4*200ಮೀ. (ಫ್ರೀ ಸ್ಟೈಲ್ (ಗುಂಪು-1 ಬಾಲಕರು) 1. ಜಪಾನ್ (7:37.59) 2. ಹಾಂಕಾಗ್ (7:52.26) 3. ಥಾಯ್ಲೆಂಡ್ (7:55.17)4*200ಮೀ. ಫ್ರೀ ಸ್ಟೈಲ್ (ಗುಂಪು-1 ಬಾಲಕಿಯರು)1. ಜಪಾನ್ (8:23.26) 2. ಹಾಂಕಾಂಗ್ (8:41.20) 3. ಥಾಯ್ಲೆಂಡ್ (8:48.52)