ಅಸ್ಸಾಂ: ಫುಟ್ ಬಾಲ್ ದಂತಕಥೆ ಡಿಯೆಗೊ ಮರಡೋನಾರಿಗೆ ಸೇರಿದ ಕಳವಾಗಿದ್ದ ಇನ್ನಷ್ಟು ವಸ್ತುಗಳು ಪತ್ತೆ ಈ ಹಿಂದೆ ದುಬೈ ಪೊಲೀಸರು ನೀಡಿದ್ದ ಸುಳಿವಿನ ಮೇಲೆ ಅಸ್ಸಾಂ ಪೊಲೀಸರು ಗುವಾಹಟಿ ನಿವಾಸಿ ಆರೋಪಿ ವಜೀದ್ ಹುಸೇನ್ ಮನೆ ಮೇಲೆ ದಾಳಿ ನಡೆಸಿದ್ದರು. ಆ ಸಂದರ್ಭ ಮರಡೋನ ಅವರಿಗೆ ಸೇರಿದ ಕೈಗಡಿಯಾರ ಪತ್ತೆಯಾಗಿತ್ತು. ಗುವಾಹಟಿ: ಇತ್ತೀಚಿಗಷ್ಟೆ ಪುಟ್ಬಾಲ್ ದಂತಕಥೆ ದಿವಂಗತ ಡಿಯೆಗೊ ಮರಡೋನಾ ಅವರಿಗೆ ಸೇರಿದ ಕಳವಾಗಿದ್ದ ಕೈಗಡಿಯಾರವನ್ನು ಅಸ್ಸಾಂ ಪೊಲೀಸರು ವಶಪಡಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಡಿಯೆಗೊ ಮರಡೋನಾ ಅವರಿಗೆ ಸೇರಿದೆಯೆನ್ನಲಾದ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಫುಟ್ಬಾಲ್ ದಿಗ್ಗಜ ಮರಡೋನಾರ ಕಳವಾಗಿದ್ದ ದುಬಾರಿ ಬೆಲೆಯ ವಾಚ್ ಭಾರತದಲ್ಲಿ ಪತ್ತೆ!ಕೈಗಡಿಯಾರವನ್ನು ಕಳವು ಮಾಡಿದ್ದ ಆರೋಪಿ ವಜೀದ್ ಹುಸೇನ್ ಎಂಬಾತನ ಸಂಬಂಧಿಕರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭ ಮರಡೋನಾ ಅವರಿಗೆ ಸೇರಿದ ಜಾಕೆಟ್, ಟಿ-ಶರ್ಟ್, ಎರಡು ಜೊತೆ ಶೂ, ೬ ಲೈಟರ್ ಗಳು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ.ಇದನ್ನೂ ಓದಿ: ಫುಟ್ಬಾಲ್ ದಂತಕಥೆ ಮರಡೋನಾರಿಂದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ: ಮಹಿಳೆಯಿಂದ ಆರೋಪಪತ್ತೆಯಾಗಿರುವ ವಸ್ತುಗಳಲ್ಲಿ ಮರಡೋನಾ ಅವರಿಗೆ ಸೇರಿದ ವಸ್ತುಗಳು ಯಾವುವು ಎನ್ನುವ ಬಗ್ಗೆ ತನಿಖೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮುನ್ನ ದುಬೈ ಪೊಲೀಸರು ನೀಡಿದ್ದ ಸುಳಿವಿನ ಮೇಲೆ ಅಸ್ಸಾಂ ಪೊಲೀಸರು ಗುವಾಹಟಿ ನಿವಾಸಿ ಆರೋಪಿ ವಜೀದ್ ಹುಸೇನ್ ಮನೆ ಮೇಲೆ ದಾಳಿ ನಡೆಸಿದ್ದರು. ಆ ಸಂದರ್ಭ ಮರಡೋನ ಅವರಿಗೆ ಸೇರಿದ ಕೈಗಡಿಯಾರ ಪತ್ತೆಯಾಗಿತ್ತು.ಇದನ್ನೂ ಓದಿ: ಫುಟ್ಬಾಲ್ ಆಟಗಾರ ಮರಡೋನಾ ನಿಧನ: ಎರಡು ದಿನ ಶೋಕಾಚರಣೆ ಘೋಷಿಸಿದ ಕೇರಳ ಸರ್ಕಾರ