ರೋಜರ್ಸ್ ಕಪ್: ರಫೆಲ್‌ ನಡಾಲ್‌-ಬಿಯಾಂಕಾ ಚಾಂಪಿಯನ್ಸ್‌ ಟೆನಿಸ್‌ ಸ್ಟಾರ್‌ ರಫೆಲ್ ನಡಾಲ್ ಹಾಗೂ ಬಿಯಾಂಕಾ ಆಂಡ್ರೀಸ್ಕು ಅವರು ರೋಜರ್ಸ್ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ರಮವಾಗಿ ಚಾಂಪಿಯನ್‌ ಆಗಿದ್ದಾರೆ. ಟೊರೊಂಟೊ: ಟೆನಿಸ್‌ ಸ್ಟಾರ್‌ ರಫೆಲ್ ನಡಾಲ್ ಹಾಗೂ ಬಿಯಾಂಕಾ ಆಂಡ್ರೀಸ್ಕು ಅವರು ರೋಜರ್ಸ್ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ರಮವಾಗಿ ಚಾಂಪಿಯನ್‌ ಆಗಿದ್ದಾರೆ.ಭಾನುವಾರ 70 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ ಹಣಾಹಣಿಯಲ್ಲಿ ಸ್ಪೇನ್‌ ತಾರೆ ರಫೆಲ್ ನಡಾಲ್‌ ಅವರು ರಷ್ಯಾದ ಡೆನಿಲ್ ಮೆಡ್ವೆಡೆವ್‌ ಅವರ ವಿರುದ್ಧ 6-3, 6-0 ಅಂತರದಲ್ಲಿ ನೇರ ಸೆಟ್‌ಗಳಿಂದ ಗೆದ್ದು ಪ್ರಶಸ್ತಿ ಮುಡುಗೇರಿಸಿಕೊಂಡರು.