ಇಂಡಿಯನ್‌ ಸೂಪರ್‌ ಲೀಗ್‌: ಚೆನ್ನೈ ಮಣಿಸಿದ ಕೋಲ್ಕತಗೆ ಮೂರನೇ ಬಾರಿ ಪ್ರಶಸ್ತಿ ಚೆನ್ನೈಯಿನ್‌ ಎಫ್ಸಿ ತಂಡವನ್ನು 3-1 ಗೋಲುಗಳಿಂದ ಮಣಿಸಿದ ಅಟ್ಲೆಟಿಕೊ ಡಿ ಕೋಲ್ಕತ ತಂಡ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್) ಫ‌ುಟ್‌ಬಾಲ್‌ ಕ್ರೀಡಾಕುಟದಲ್ಲಿ ದಾಖಲೆಯ ಮೂರನೇ ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.ಗೋವಾದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ಸ್ ನಲ್ಲಿ ಕೋಲ್ಕತ್ತಾ ತಂಡ ಈ ಸಾಧನೆ ಮಾಡಿದೆ. ಫಟೋರ್ಡಾ: ಚೆನ್ನೈಯಿನ್‌ ಎಫ್ಸಿ ತಂಡವನ್ನು 3-1 ಗೋಲುಗಳಿಂದ ಮಣಿಸಿದ ಅಟ್ಲೆಟಿಕೊ ಡಿ ಕೋಲ್ಕತ ತಂಡ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್) ಫ‌ುಟ್‌ಬಾಲ್‌ ಕ್ರೀಡಾಕುಟದಲ್ಲಿ ದಾಖಲೆಯ ಮೂರನೇ ಬಾರಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.ಗೋವಾದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ಸ್ ನಲ್ಲಿ ಕೋಲ್ಕತ್ತಾ ತಂಡ ಈ ಸಾಧನೆ ಮಾಡಿದೆ.ಕೋಲ್ಕತ್ತಾ ಪರವಾಗಿ ಜೇವಿಯರ್‌ ಹೆರ್ನಾಂಡೆಜ್‌ ಎರಡು, (10, 93ನೇ ನಿಮಿಷ). ಎಡು ಗಾರ್ಸಿಯ ಒಂದು (48ನೇ ನಿಮಿಷದ) ಗೋಲು ಗಳಿಸಿ ತಂಡದ ಗೆಲುವಿಗೆ ಕಾರಣವಾಗಿದ್ದಾರೆ.ಚೆನ್ನೈ ಪರವಾಗಿ ನೆರಿಜಸ್‌ ವಾಲ್ಸಿಸ್‌ ( 69ನೇ ನಿಮಿಷ) ಗೋಲು ದಾಖಲಿಸಿದ್ದಾರೆ.ಕೊರೋನಾವೈರಸ್ ಭೀತಿಯಿಂದಾಗಿ ಫೈನಲ್ಸ್ ಪಂದ್ಯವನ್ನು ಮುಚ್ಚಿದ ಬಾಗಿಲಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.