ಕೆನಡಾ ಓಪನ್ ಫೈನಲ್: ಚೀನಾದ ಬಲಿಷ್ಠ ಲೀ ಷೀ ಫೆಂಗ್ ಮಣಿಸಿ ಚಾಂಪಿಯನ್ ಆದ ಭಾರತದ ಲಕ್ಷ್ಯ ಸೇನ್‌ ಕೆನಡಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ಫೈನಲ್ ನಲ್ಲಿ ಭಾರತದ ಲಕ್ಷ್ಯ ಸೇನ್‌ ಅವರು ಚೀನಾದ ಬಲಿಷ್ಠ ಲೀ ಶಿ ಫೆಂಗ್ ರನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಟೊರೆಂಟೂ: ಕೆನಡಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ಫೈನಲ್ ನಲ್ಲಿ ಭಾರತದ ಲಕ್ಷ್ಯ ಸೇನ್‌ ಅವರು ಚೀನಾದ ಬಲಿಷ್ಠ ಲೀ ಶಿ ಫೆಂಗ್ ರನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.ಚೀನಾದ ಲಿ ಶಿ ಫೆಂಗ್ ಅವರನ್ನು 18-21, 20-22 ನೇರ ಸೆಟ್‍ಗಳ ಅಂತರದಲ್ಲಿ ಸೋಲಿಸುವ ಮೂಲಕ ಭಾರತದ ಲಕ್ಷ್ಯ ಸೇನ್ ಕ್ಯಾಲ್ಗೇರಿಯಲ್ಲಿ ನಡೆದ ಕೆನಡಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಸ್ಟಾರ್ ಆಟಗಾರ ಅತ್ಯುತ್ತಮ ಪ್ರದರ್ಶನ ನೀಡಿದ ಲಕ್ಷ್ಯ ಸೇನ್ ವರ್ಷದ ಮೊದಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.ಕಳೆದ ರಾತ್ರಿ ಕೆನಡಾ ಓಪನ್ ಫೈನಲ್ ಪಂದ್ಯದಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಲಿ ಶಿ ಫೆಂಗ್ ಅವರನ್ನು ನೇರ ಸೆಟ್‍ಗಳಲ್ಲಿ ಸೋಲಿಸುವ ಮೂಲಕ ಭಾರತದ ಸ್ಟಾರ್ ಷಟ್ಲರ್ ಲಕ್ಷ್ಯ ಸೇನ್ ಎಲ್ಲರನ್ನು ಚಕಿತಗೊಳಿಸಿದ್ದಾರೆ., . , ! # ##CanadaOpen2023 ../u8b7YzPX01ಮೊದಲ ಸೆಟ್ ಅನ್ನು 21-18 ರಿಂದ ಗೆದ್ದುಕೊಂಡ ಅವರು 2ನೇ ಸೆಟ್‍ನಲ್ಲಿ 10ನೇ ಶ್ರೇಯಾಂಕದ ಶಿ ಫೆಂಗ್ ಹೋರಾಟ ನೀಡಿದರಾದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಎರಡನೇ ಸೆಟ್‍ನಲ್ಲಿ 16-20 ರಿಂದ ಹಿನ್ನಡೆ ಸಾಧಿಸಿದ್ದ ಲಕ್ಷ್ಯ ಸೇನ್ ಛಲ ಬಿಡದೆ ಸತತ ಆರು ಪಾಯಿಂಟ್‍ಗಳನ್ನು ಗೆದ್ದು ಅಂತಿಮವಾಗಿ ಪ್ರಶಸ್ತಿಯನ್ನು ತನ್ನತ್ತ ಸೆಳೆದರು.ಇದನ್ನೂ ಓದಿ: ಸ್ಯಾಫ್ ಚಾಂಪಿಯನ್ಸ್ ಫೈನಲ್; ಕುವೈತ್ ಮಣಿಸಿದ ಭಾರತ, ದಾಖಲೆಯ 9ನೇ ಬಾರಿಗೆ ಟೀಂ ಇಂಡಿಯಾಗೆ ಕಿರೀಟಕಳೆದ ವರ್ಷ ಇಂಡಿಯಾ ಓಪನ್ ಪ್ರಶಸ್ತಿ ಗೆದ್ದಿದ್ದ ಸೇನ್‍ಗೆ ಇದು ಎರಡನೇ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿದೆ.