ಆನ್ ಲೈನ್ ಚೆಸ್ ಒಲಿಂಪಿಯಾಡ್: ಮಿಂಚಿದ ಕೊನೇರು ಹಂಪಿ, ಫೈನಲ್‌ಗೆ ಭಾರತ! ಆನ್ ಲೈನ್ ಚೆಸ್ ಒಲಿಂಪಿಯಾಡ್ ನ ಸೆಮಿಫೈನಲ್ ನಲ್ಲಿ ಮಿಂಚಿದ ಕೊನೇರು ಹಂಪಿ ಅವರು ಭಾರತ ತಂಡವನ್ನು ಪ್ರಶಸ್ತಿ ಸುತ್ತಿಗೆ ತಲುಪಿಸಿದ್ದಾರೆ. ಬೆಂಗಳೂರು: ಆನ್ ಲೈನ್ ಚೆಸ್ ಒಲಿಂಪಿಯಾಡ್ ನ ಸೆಮಿಫೈನಲ್ ನಲ್ಲಿ ಮಿಂಚಿದ ಕೊನೇರು ಹಂಪಿ ಅವರು ಭಾರತ ತಂಡವನ್ನು ಪ್ರಶಸ್ತಿ ಸುತ್ತಿಗೆ ತಲುಪಿಸಿದ್ದಾರೆ. ಕೊನೇರು ಹಂಪಿ 2-1 ಅಂತರದೊಂದಿಗೆ ಫೈನಲ್ ಪ್ರವೇಶಿಸಿದ್ದಾರೆ. ಆರ್ಮಾಗೆಡಾನ್(ಟೈ ಬ್ರೇಕ್) ಮೋನಿಕಾ ಸೊಕೊ ಅವರನ್ನು ಸೆಮಿಫೈನಲ್ ನಲ್ಲಿ ಸೋಲುಣಿಸಿದ್ದಾರೆ. ಫೈನಲ್ ಪಂದ್ಯ ಭಾನುವಾರ ನಡೆಯಲಿದೆ. ಅದಾಗಲೇ ಭಾರತ ಫೈನಲ್ ಗೆ ಪ್ರವೇಶಿಸಿರುವುದರಿಂದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ರಷ್ಯಾ ಹಾಗೂ ಅಮೆರಿಕಾ ನಡುವೆ ನಡೆಯಲಿದ್ದು ಅಲ್ಲಿ ಗೆದ್ದವರ ವಿರುದ್ಧ ಕೊನೇರು ಹಂಪಿ ಸ್ಪರ್ಧಿಸಲಿದ್ದಾರೆ.